ಬೆಂಗಳೂರು:ಇಂದು ಭಾರತೀಯ ಸಮಾಜವು ಹನುಮಾನ್ ಸಿಂಡ್ರೋಮ್ ಖಾಯಿಲೆಯಿಂದ ಬಳಲುತ್ತಿದೆ. ಹನುಮಂತನಿಗೆ ಎಲ್ಲ ರೀತಿಯ ಶಕ್ತಿಗಳು ಇತ್ತು, ಆದರೆ, ಶಾಪದ ಫಲವಾಗಿ ಎಲ್ಲವನ್ನೂ ಮರೆತಿದ್ದ, ತನಗೇನೂ ಶಕ್ತಿಯಲ್ಲ, ಒಬ್ಬ ಜಾಂಬವಂತ ಬಂದು ಹನುಮಂತನಿಗೆ ಅವನ ಶಕ್ತಿಯ ಪರಿಚಯವನ್ನು ಮಾಡಿಸಬೇಕಾಯಿತು. ಆಗ ಹನಮಂತನಿಗೆ ತನ್ನ ಶಕ್ತಿ ಸಾಮರ್ಥ್ಯ ಎಲ್ಲ ನೆನಪಾಗುತ್ತದೆ. ಭಾರತೀಯರು ಹಾಗೂ ಕನ್ನಡಿಗರು ಸಹ ಹನುಮಾನ್ ಸಿಂಡ್ರೋಮ್ ಇಂದ ಬಳಲುತ್ತಿದ್ದಾರೆ ಎಂದು ನಾ. ಸೋಮೇಶ್ವರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರದಲ್ಲಿ ಸದ್ಯೋಜಾತರ ‘ಮಾಗಧೇಯ’ ಕೃತಿಯ ಲೋಕಾರ್ಪಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಥಾಮಸ್ ಮೆಕಾಲೆ ತನ್ನ ಶಿಕ್ಷಣ ಪದ್ಧತಿಯ ಮೂಲಕ ಅಲ್ಲಿನ ಗುರುಕುಲು ಶಿಕ್ಷಣ ಪದ್ಧತಿಯನ್ನು ನಾಶ ಮಾಡಿದ. ನಂತರ ಬ್ರಿಟಿಷರು ಇಲ್ಲಿನ ಪರಂಪರೆ ಮತ್ತು ಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ಇತಿಹಾಸವನ್ನು ತಿರುಚಲು ಆರಂಭಿಸಿದರು. ಜಾನ್ ಹೋಲ್ವೆಲ್ , ಲೆಥಾನಿಯನ್ ಹಾಲೆಟ್, ಅಲೆಕ್ಸಾಂಡರ್ ಡೋವ್, ಮ್ಯಾಕ್ಸ್ ಮುಲ್ಲರ್ , ಜೆ.ಎಸ್.ಮಿಲ್, ವಿಲಿಯಂ ಜೋನ್ಸ್, ರುಡಾಲ್ಫ್ ರಾತ್, ಎಚ್ ಎಸ್ ವಿಲ್ಸನ್, ಗ್ರಿಫಿತ್, ಮೋನಿಯರ್ ವಿಲಿಯಂಸ್, ಕಾರ್ಲ್ ಮಾರ್ಕ್ಸ್ ಮತ್ತು ಹೆಗೆಲ್ ಇಂತಹ ಮಹಾನುಭಾವರು ವೇದ, ಉಪನಿಷತ್, ಇತಿಹಾಸದ ಮರು ನಿರೂಪಣೆಯಲ್ಲಿ ತೊಡಗಿದರು. ಬಿಷಪ್ ಅಷರ್ ಅವರು ಇಡೀ ಜಗತ್ತು ಕ್ರಿಸ್ತಪೂರ್ವ 4004ರ ಅಕ್ಟೋಬರ್ 23 ರಂದು ಬೆಳಗ್ಗೆ 9 ಗಂಟೆಗೆ ಸೃಷ್ಟಿ ಆಯಿತು. ಇದು ಬೈಬಲ್ ಆಧರಿಸಿ ಪ್ರತಿಪಾದಿಸುತ್ತಾರೆ. ಇದನ್ನೇ ಆಧರಿಸಿ ಈ ಹಿಸ್ಟೋರಿಯನ್ ಗಳು ಭಾರತದ ಇತಿಹಾಸವು ಕ್ರಿಸ್ತಪೂರ್ವ 4000ಕ್ಕೆ ಹಿಂದೆ ಹೋಗದಂತೆ ಇತಿಹಾಸವನ್ನು ತಿದ್ದಲು ಆರಂಭಿಸುತ್ತಾರೆ.
ಜೇಮ್ಸ್ ಮಿಲ್ ಆರು ಸಂಪುಟಗಳಲ್ಲಿ ಭಾರತದ ಇತಿಹಾಸವನ್ನು ದಾಖಲಿಸುತ್ತಾನೆ. ಹಿಂದೂ ಪೀರಿಯಡ್, ಮುಸ್ಲಿಂ ಪೀರಿಯಡ್ ಮತ್ತು ಬ್ರಿಟಿಷ್ ಪೀರಿಯಡ್ ಎಂದು ಕಾಲಮಾನವನ್ನು ವಿಭಜಿಸಿಕೊಳ್ಳುತ್ತಾನೆ. ಹಿಂದೂ ಪೀರಿಯಡ್ ಅಲ್ಲಿನ ಭಾಗವು ಕೇಲವ ನೆಲದ ನಾಗರಿಕತೆಯ ಹೀಯಾಳಿಕೆಗೆ ಬಳಸುತ್ತಾರೆ. ಇದನ್ನು ಭಾರತಕ್ಕೆ ಬರುವ ಬ್ರಿಟಿಷ್ ಅಧಿಕಾರಿಗಳಿಗೆ ತರಬೇತು ನೀಡುವ ಪಠ್ಯವಾಗಿ ಬಳಸಿಕೊಳ್ಳಗುತ್ತಿತ್ತು. ಮತ್ತೊಬ್ಬ ಇತಿಹಾಸಕಾರ ಅಲೆಕ್ಸಾಂಡರ್ ವಾಯುವ್ಯದ ಅಂಚಿಗೆ ಬಂದು ಹೋದವನನ್ನು ಸಮುದ್ರದ ತಡಿಯರವರೆಗೆ ಬಂದು ಹೋದ ಎಂಬ ಸುಳ್ಳನ್ನು ದಾಖಲಿಸುತ್ತಾನೆ.
ಭಾರತದ ಮಹತ್ ಸಾಧನೆಗಳೆಲ್ಲ ಆಕ್ರಮಣಕಾರರ ಕೊಡುಗೆ ಎಂಬ ಹಸಿಸುಳ್ಳನ್ನು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ಗುಪ್ತರ ನಂತರ ಮುಸ್ಲಿಮರ ಆಳ್ವಿಕೆಯ ಕಾಲಘಟ್ಟದವರೆಗೆ ಭಾರತದ ಆಳ್ವಿಕೆಯು ಕತ್ತಲ ಯುಗದ್ದು ಎಂದು ಮಾರ್ಕ್ಸ್ ಹೇಳುತ್ತಾನೆ. ಇದೇ ಅವಧಿಯ ಚಂದ್ರಗುಪ್ತ ಮೌರ್ಯ, ಸಮುದ್ರ ಗುಪ್ತ, ಅಶೋಕ, ಇಮ್ಮಡಿ ಪುಲಿಕೇಶಿ, ಹರ್ಷವರ್ಧನ, ರಾಜ ರಾಜ ಚೋಳ, ರಾಜೇಂದ್ರ ಚೋಳ, ಕೃಷ್ಣದೇವರಾಯ, ಛತ್ರಪತಿ ಶಿವಾಜಿ ಇವರೆಲ್ಲ ಭಾರತೀಯ ಪರಂಪರೆಯ ವೀರರೆಂದು ಗುರುತಿಸುವುದೇ ಇಲ್ಲ. ಜರ್ಮನಿಯ ಮ್ಯಾಕ್ಸ್ ಮುಲ್ಲರ್ ಇಂಗ್ಲೆಂಡಿನಲ್ಲಿ ವಾಸ ಮಾಡುವಾಗ, ಭಾರತೀಯ ಧಾರ್ಮಿಕ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದವ, ಭಾರತದ ಹೆಜ್ಜೆ ಇಡದೆ, ಭಾರತೀಯ ಸಂಸ್ಕೃತಿಯ ಪರಿಚಯವೇ ಇಲ್ಲದ ಈತ ವೇದೋಪನಿಷತ್ತುಗಳನ್ನು ಅನುವಾದಿಸುತ್ತಾನೆ.

ನಮ್ಮ ಕಲ್ಹಣನ ರಾಜತರಂಗಿಣಿಯಲ್ಲಿ ಕ್ರಿ,ಪೂ ನಾಲ್ಕನೆಯ ಶತಮಾನದಲ್ಲಿ ಶಂಕರಾಚಾರ್ಯ ಗಿರಿಯ ಬಗ್ಗೆ ದಾಖಲಿಸಿದರೂ, ಮ್ಯಾಕ್ಸ್ ಮುಲ್ಲರ್ ಶಂಕರರ ಕಾಲಾವಧಿ ಕ್ರಿ.ಶ ಏಳನೆಯ ಶತಮಾನ ಎಂದು ದಿನಾಂಕ ಪಲ್ಲಟ ಮಾಡುತ್ತಾನೆ.
1520ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದ ಪೋರ್ಚುಗೀಸ್ ಪ್ರಜೆ ಡೊಮಿಂಗೋ ವಿಜಯನಗರವನ್ನು ರೋಮ್ ನಗರಕ್ಕೆ ಹೋಲಿಸಿ ವರ್ಣಿಸುತ್ತಾನೆ. ವಿಜಯನಗರ ಜಗತ್ತಿನ ಅತ್ಯುತ್ತಮ ನಗರ ಎಂದು ದಾಖಲಿಸುತ್ತಾನೆ.
ಇಂತಹ ಇತಿಹಾಸ ಇಂದು ಮತ್ತೆ ಬಹುಮುಖೀ ಆಕರಗಳನ್ನು ಆಧರಿಸಿ ನೈಜ ಇತಿಹಾಸವನ್ನು ಮರುನಿರೂಪಿಸುವ ಮಹತ್ವದ ಕಾರ್ಯ ಆಗಬೇಕಾಗಿದೆ. ಈ ಮಹತ್ವದ ಕಾರ್ಯವನ್ನು ಸದ್ಯೋಜಾತರು ತಮ್ಮ ಕೃತಿಗಳ ಮೂಲಕ ಮಾಡುತ್ತಿದ್ದಾರೆ ಎಂದು ಸೋಮೇಶ್ವರ ಅವರು ತಿಳಿಸಿದರು. ಭಾರತದ ಒಂದು ನೂರಿಪ್ಪತ್ತು ರಾಜವಂಶಗಳ ಸಮಗ್ರ ಮಾಹಿತಿಯನ್ನು ಒಂದೆಡೆ ದಾಖಲಿಸುವ ಮಹತ್ವದ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು. ಇದರಿಂದ ನಮ್ಮ ನಿಜ ಇತಿಹಾಸ ತಿಳಿಯುವ ಕೆಲಸ ಸುಲಭ ಆಗುತ್ತದೆ ಎಂದು ತಿಳಿಸಿದರು. ಇಂದಿನ ಆಸಕ್ತ ಓದುಗರು ಇಂತಹ ಬಹುಮೂಲ್ಯ ಪುಸ್ತಕವನ್ನು ಕನಿಷ್ಠ ಎರಡು ಪ್ರತಿಗಳನ್ನಾದರೂ ಖರೀದಿಸಿ, ಒಂದು ಪ್ರತಿಯನ್ನು ಆಸಕ್ತರಿಗೆ ಪುಸ್ತಕ ತಾಂಬೂಲ ನೀಡಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿ ಎಂದು ಕರೆ ನೀಡಿದರು.
ಅಭಿಜ್ಞಾನ ಸಂಸ್ಥೆಯ ಸೂರ್ಯಪ್ರಕಾಶ ಪಂಡಿತರು ಭಾರತೀಯ ಇತಿಹಾಸ ಪರಂಪರೆಯ ವಿಶಿಷ್ಟತೆಗಳನ್ನು ಚರ್ಚಿಸಿದರು. ತಮ್ಮ ವೈಯಕ್ತಿಯ ಅನುಭವಗಳನ್ನು ಹಂಚಿಕೊಳ್ಳುತ್ತ, ಮಹಾಭಾರತದ ಯಾವುದೇ ಕೃತಿಗಳನ್ನು ಕಣ್ಣಾಡಿಸಿಯೂ ನೋಡದ ಹಿರಿಯ ಸಾಹಿತಿಯೊಬ್ಬರು ಮಹಾಭಾರತದ ಕುಂತಿ ಮತ್ತು ದ್ರೌಪದಿಯರ ಮೇಲಾದ ಅನ್ಯಾಯಗಳ ಬಗ್ಗೆ ಕೃತಿಯೊಂದನ್ನು ಬರೆಯಲು ಹೊರಟ ಸಾಹಸ ಕಥನವನ್ನು ವಿವರಿಸಿ ಇಂತಹ ಹಲವು ಅನುಭವಗಳು ತಮಗಾಗಿದೆ. ಆದರೆ ಅಧ್ಯಯನವಿಲ್ಲದ ಕೃತಿಗಳ ಮೂಲಕ ನಾವು ಬಹಳಷ್ಟು ಅನಗತ್ಯ ಜಾಳು ಜಾಳಾದ ಕೆಲವು ಸಾಹಿತ್ಯಗಳು ಸೇರಿವೆ ಎಂದು ಅಭಿಪ್ರಾಯ ಪಟ್ಟರು.
ರಂಗಕರ್ಮಿ ಎಸ್.ಎನ್ ಸೇತೂರಾಮ್ ಅವರು ಮಾತಾಡುತ್ತ ಸದ್ಯೋಜಾತರ ಕೃತಿಗಳು ಕನ್ನಡದ ಓದುಗರಿಗೆ ತಮ್ಮತನವನ್ನು ನೆನಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಸಮಾಜವು ಸದಾ ಒಳ್ಳೆಯತನದ ಜೊತೆ ಗುರುತಿಸಿಕೊಳ್ಳಬೇಕು. ಸಿನೌಲಿ ಉತ್ಖನನದ ಬಗ್ಗೆ ಒಂದು ಡಾಕ್ಯಮೆಂಟರಿ ಇದೆ. ನಮ್ಮ ಸ್ಥಾಪಿತ ಇತಿಹಾಸದ ನಿರೂಪಣೆಗೆ ವಿಪರೀತವಾದ ಕೆಲವು ಸಾಕ್ಷ್ಯಗಳು ಅಲ್ಲಿ ದೊರಕಿದ ಕಾರಣದಿಂದ ಕಳೆದ ಎರಡು ದಶಕಗಳ ಕಾಲದಲ್ಲಿ ಸ್ಥಗಿತಗೊಂಡಿತ್ತು. ಇದೀಗ ಇಲ್ಲಿನ ಉತ್ಖನನದ ನಂತರ ಬಹಳಷ್ಟು ಹೊಸ ಹೊಳಹುಗಳು ನಮಗೆ ದೊರೆತಿವೆ. ಇಂತಹ ಇತಿಹಾಸದ ಪುಸ್ತಕಗಳನ್ನು ಸರ್ಕಾರಗಳು ಮುನ್ನಡೆಸಬೇಕು. ಅಧ್ಯಯನಶೀಲ ವ್ಯಕ್ತಿಗಳು ಸಕ್ರಿಯ ರಾಜಕಾರಣದಲ್ಲಿ ಇದ್ದರೆ ಸಮಾಜ ಹೆಚ್ಚು ಆರೋಗ್ಯವಂತವಾಗಿರುತ್ತದೆ.
ರಸಧ್ವನಿ ಕಲಾಕೇಂದ್ರದ ಶ್ರೀಕಾಂತ್ ಅವರು ಮಾತನಾಡುತ್ತಾ ಮಾಗಧೇಯ ಕೃತಿಯಲ್ಲಿ ಬರುವ ಮಹತಿ ಎಂಬ ಜಿಜ್ಞಾಸುವಿನ ಹೆಸರರಿನ ಮಹತ್ವವನ್ನು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ.ರಾ ಕೃಷ್ಣಮೂರ್ತಿಯವರು ಭಾರತೀಯ ಪರಂಪರೆಯಲ್ಲಿ ಆಳಿದ ಮಹತ್ ರಾಜರುಗಳನ್ನು ನೆನಪಿಸಿಕೊಳ್ಳಬೇಕಾದ ಮಹತ್ವವನ್ನು ವಿವರಿಸಿದರು. ಸಮನ್ವಿತದ ರಾಧಾಕೃಷ್ಣ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶತಕೋಟ್ಯಧಿಪತಿ ಉದ್ಯಮಿ, ಹಲವು ಐಕಾನಿಕ್ ಕಟ್ಟಡಗಳ ನಿರ್ಮಾತೃ ಪದ್ಮಭೂಷಣ ಪಲ್ಲೊಂಜಿ ಮಿಸ್ತ್ರಿ ಇನ್ನಿಲ್ಲ

ಪೆಟ್ರೋಲ್​, ಗ್ಯಾಸ್​ ನಂತ್ರ ಈಗ ರಾಜ್ಯದ ಜನತೆಗೆ ಕರೆಂಟ್​ ಶಾಕ್​: ಜುಲೈ 1ರಿಂದ ದರ ಏರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
