ಬೆಂಗಳೂರು:ದೇಶದಲ್ಲೇ ಅತೀ ದೊಡ್ಡ ಮೇಕ್​​ ಇನ್​​ ಇಂಡಿಯಾ ಲಾಂಛನ ಇಂದು ಬೆಂಗಳೂರಿನಲ್ಲಿ ತಲೆಎತ್ತಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸ ’ಕಾವೇರಿ’ ಮುಂಭಾಗದ ವೃತ್ತದಲ್ಲಿ ಈ ಲಾಂಛನ ನಿರ್ಮಾಣವಾಗಿದ್ದು, ಅದನ್ನು ಯಡಿಯೂರಪ್ಪ ಇಂದು ಉದ್ಘಾಟನೆ ಮಾಡಲಿದ್ದಾರೆ.
ಇದು ಮೇಕ್​​ ಇನ್​ ಇಂಡಿಯಾ ಬಿಂಬಿಸುವ ಸಿಂಹದ ಲಾಂಛನವಾಗಿದೆ. 50 ಲಕ್ಷ ವೆಚ್ಚದಲ್ಲಿ ಇದು ನಿರ್ಮಾಣವಾಗುತ್ತಿದ್ದು, ಘರ್ಜಿಸುವ ಸಿಂಹ ನಡಿಗೆಯನ್ನು ಇದರಲ್ಲಿ ನೋಡಬಹುದಾಗಿದೆ. ಈ ಮೂಲಕ ದೇಶದ ಹೆಮ್ಮೆಯ ಸಂಕೇತಕ್ಕೆ ಸಾಕ್ಷಿಯಾಗುತ್ತಿದೆ ಸಿಲಿಕಾನ್​ ಸಿಟಿ.
ದೇಶದಲ್ಲೇ ಅತೀ ದೊಡ್ಡ ಮೇಕ್​​ ಇನ್​​ ಇಂಡಿಯಾ ಲಾಂಛನ ಇಂದು ಬೆಂಗಳೂರಿನಲ್ಲಿ ತಲೆಎತ್ತಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸ ’ಕಾವೇರಿ’ ಮುಂಭಾಗದ ವೃತ್ತದಲ್ಲಿ ಈ ಲಾಂಛನ ನಿರ್ಮಾಣವಾಗಿದೆ.pic.twitter.com/uAfjzZTCaD
— Vijayavani (@VVani4U)February 27, 2021

ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಬಿಬಿಎಂಪಿಯಿಂದ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಘಜಿಯಾಬಾದ್‌ನಲ್ಲಿ ತಯಾರಾಗಿ ಬೆಂಗಳೂರಿಗೆ ಇದು ಆಗಮಿಸಲಿದೆ. ದೇಶದಲ್ಲೇ ಅತ್ಯುತ್ತಮ ತಯಾರಕರು ಎನಿಸಿರುವ ತಯಾರಕರಿಂದ ಇದನ್ನು ತಯಾರು ಮಾಡಲಾಗಿದೆ.
ಏನಿದರ ವಿಶೇಷತೆ?ಈ ಲಾಂಛನವು 1,460 ಕೆ.ಜಿ ತೂಕದ್ದಿದ್ದು, 23 ಅಡಿ ಉದ್ದ, 10 ಅಡಿ ಎತ್ತರ, ನಾಲ್ಕೂವರೆ ಅಡಿ ಅಗಲವಿದೆ. ಫೈಬರ್​ ರಿ ಇನ್​​ಫೋರ್ಸ್​​ರ್ಡ್​​ ಪ್ಲಾಸ್ಟಿಕ್ (Fiber reinforced plastic) ಬಳಸಿ ಇದನ್ನು ತಯಾರು ಮಾಡಲಾಗಿದೆ.
ನಾಲ್ಕು ದಿಕ್ಕಿಗೂ ಇದು ತಿರುಗಲಿದ್ದು, ಲಾಂಛನ ಇನ್ನಷ್ಟು ಆಕರ್ಷಣೀಯವಾಗಿ ಕಾಣಿಸಲು ಲೈಟಿಂಗ್ಸ್​ ಅಳವಡಿಕೆ ಮಾಡಲಾಗಿದೆ. ಇದರ ಮುಂಭಾಗದಲ್ಲಿ ನೀರಿನ ಕಾರಂಜಿಯ ವ್ಯವಸ್ಥೆ ಇದೆ. ಹುಲ್ಲುಹಾಸಿನ ಮೇಲೆ ಇದನ್ನು ನಿರ್ಮಾಣ ಮಾಡಲಾಗಿದೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ ಮೇಕ್​​ ಇನ್​ ಇಂಡಿಯಾಗೆ ಹೆಚ್ಚಿನ ಒತ್ತು ಕೊಡುತ್ತಿರುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಈ ಲಾಂಛನ ನೋಡುಗರಿಗೆ ಸ್ಫೂರ್ತಿ ತುಂಬಲಿದೆ.
ಇವರಿಗೆ ತೆಳ್ಳಗೆ, ಬೆಳ್ಳಗೆ ಲುಕ್ ಇರೋ ಯುವತಿಯರೇ ‌ ಇರಬೇಕಂತೆ- ಮೂಗು, ಕೂದಲು ಉದ್ದವಿರಬೇಕಂತೆ!

ಕರ್ನಾಟಕ ವೆಡ್ಸ್‌ ಕೇರಳ- ಮದುವೆಗೆ ಅಡ್ಡಿಬಂತು ಕರೊನಾ ರಿಪೋರ್ಟ್‌: ಮದುಮಕ್ಕಳು ಹೈರಾಣ

ಯೂನಿಫಾರ್ಮ್‌ನಲ್ಲಿಯೇ ಎಂಟ್ರಿ ಕೊಟ್ಟ- ಮಾಡಬಾರದ್ದು ಮಾಡಿ ಪರಾರಿಯಾಗುವಾಗ ಸಿಕ್ಕಿಬಿದ್ದ! ಸಿಸಿಟಿವಿಯಲ್ಲಿ ಪೊಲೀಸನ ಕಳ್ಳಾಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − eleven =
Remember me
