ಬೆಂಗಳೂರು:ನಾವು ಬಹಳಷ್ಟು ದಿನ ಅಧಿಕಾರ ಮಾಡುತ್ತೇವೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಜನ ಎಷ್ಟು ದಿನ ಅಂತ ಸುಮ್ಮನೆ ಬಿಡುತ್ತಾರೆ, ಇಂದಲ್ಲ ನಾಳೆ ಅವರಿಗೆ ಬುದ್ಧಿ ಕಲಿಸುತ್ತಾರೆ. ಹೋದ ಕಡೆಯೆಲ್ಲ ಇವರದ್ದು ಭ್ರಷ್ಟಸರ್ಕಾರ ಇವೆ ಅನ್ನುತ್ತಾರೆ, ಇವರ ಪಕ್ಷದಲ್ಲೇ ಭ್ರಷ್ಟರು ತುಂಬಿಕೊಂಡಿದ್ದಾರೆ. ಇವರೇನು ಹರಿಶ್ಚಂದ್ರರ ಮಕ್ಕಳೇ? ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೇರಳ, ಬಸವ ಕಲ್ಯಾಣದಲ್ಲಿ ಆರ್‌ಎಸ್‌ಎಸ್ ಐಡಿಯಾಲಜಿ ಚುನಾವಣೆ ಮಾಡುತ್ತಿದ್ದಾರೆ. ಇದೊಂದು ವಿಷವಿದ್ದಂತೆ. ವಿಷವನ್ನ ಎಲ್ಲಾದರೂ ಟೆಸ್ಟ್ ಮಾಡಲು ಸಾಧ್ಯವಾಗುತ್ತದೆಯೇ? ಅದನ್ನು ಒಂದು ತೊಟ್ಟು ಕುಡಿದರೆ ಸಾಕು ಸಾಯುತ್ತಾರೆ. ಹೋಗಲಿ ಎಂದು ಒಮ್ಮೆ ಅವಕಾಶ ಕೊಟ್ಟರೆ ಮುಗಿಯಿತು, ಎಲ್ಲವೂ ಮುಗಿದಂತೆಯೇ ಸರಿ ಎಂದು ತಮ್ಮ ಆತಂಕವನ್ನು ಹೊರಹಾಕಿದರು.
ಆಡ್ವಾಣಿ, ಮುರುಳಿ ಮನೋಹರ ಜೋಶಿ ಏನಾದರು? ಅವರಿಗೆ 75 ವರ್ಷ ಆಯಿತು ಎಂದು ಇವರೆಲ್ಲ ಸೇರಿ ಮೂಲೆಗೆ ಕೂರಿಸಿದರು, ಕೇರಳದಲ್ಲಿ ಶ್ರೀಧರನ್‌ಗೆ 85 ವರ್ಷ, ಅಲ್ಲಿ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಾರೆ. ಇವರು ಹೇಳುವುದು ಒಂದು, ಮಾಡುವುದು ಮತ್ತೊಂದು. ಇದು ಬಿಜೆಪಿ ನಾಯಕರ ಸಿದ್ಧಾಂತ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ತುಳಿತಕ್ಕೊಳಗಾದವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ತಿಲ್ವಾ ಎಂದು ತಮ್ಮದೇ ಪಕ್ಷವನ್ನು ತಿವಿದ ಮುನಿಯಪ್ಪ

ಒಂಟಿ ಕಾಲಿನಲ್ಲಿ ಬಂಗಾಳ ಗೆಲ್ಲುವೆ- ಮುಂದೆ ಎರಡೂ ಕಾಲಲ್ಲಿ ದೆಹಲಿ ಗೆದ್ದು ಬರುವೆ

ಇಸ್ರೋದಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್​ ನ್ಯೂಸ್​: ವಿವಿಧ ಘಟಕಗಳಲ್ಲಿ ಭರ್ಜರಿ ಉದ್ಯೋಗಾವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 19 =
Remember me
