ಮಂಡ್ಯ: ಮೇಲುಕೋಟೆಯಿಂದ ಮಂಡ್ಯಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಮಂಡ್ಯ ತಾಲೂಕಿನ ದುದ್ದ ಗ್ರಾಮದ ಬಳಿ ಜಮೀನಿಗೆ ನುಗ್ಗಿ ಸ್ವಲ್ಪದಲ್ಲಿಯೇ ಭಾರಿ ಅನಾಹುತ ತಪ್ಪಿದೆ.
ಚಾಲಕನಿಂದಾಗಿ ಕೂದಲೆಳೆ ಅಂತರದಲ್ಲಿ ಬಸ್ಸಿನಲ್ಲಿದ್ದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರಾಗಿದ್ದಾರೆ. ಮಂಡ್ಯ ತಾಲೂಕಿನ ದುದ್ದ ಗ್ರಾಮದ ಬಳಿ ಘಟನೆ ನಡೆದಿದೆ.
ಮೇಲುಕೋಟೆಯಿಂದ ಮಂಡ್ಯಗೆ ಬಸ್​ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್​ ಈ ಜಾಗಕ್ಕೆ ಬರುತ್ತಿದ್ದ ವೇಳೆ, ಏಕಾಏಕಿ ಟ್ರ್ಯಾಕ್ಟರ್​ ಅಡ್ಡಬಂದಿದೆ. ಅದನ್ನು ತಪ್ಪಿಸಲು ಬಲಭಾಗಕ್ಕೆ ಸ್ಟೇರಿಂಗ್ ತಿರುಗಿಸಿದಾಗ ಬಸ್​ ಜಮೀನಿಗೆ ನುಗ್ಗಿದೆ.
ಟ್ರ್ಯಾಕ್ಟರ್​ಗೆ ಡಿಕ್ಕಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ಸ್ವಲ್ಪದರಲ್ಲೇ ಅಪಘಾತ ತಪ್ಪಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಸ್​ ತುಂಬಾ ವಿದ್ಯಾರ್ಥಿಗಳೇ ತುಂಬಿದ್ದರು. ಘಟನೆಯಿಂದ ಅವರು ಆತಂಕಕ್ಕೆ ಒಳಗಾಗಿದ್ದರು. ಆದರೆ ಅದೃಷ್ಟವಶಾತ್​ ಯಾವುದೇ ಹಾನಿಯಾಗಲಿಲ್ಲ.
ವಿಡಿಯೋ ಇಲ್ಲಿದೆ ನೋಡಿ:
ಮೇಲುಕೋಟೆಯಿಂದ ಮಂಡ್ಯಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಮಂಡ್ಯ ತಾಲೂಕಿನ ದುದ್ದ ಗ್ರಾಮದ ಬಳಿ ಜಮೀನಿಗೆ ನುಗ್ಗಿ ಸ್ವಲ್ಪದಲ್ಲಿಯೇ ಭಾರಿ ಅನಾಹುತ ತಪ್ಪಿದೆpic.twitter.com/4TYo10Du6X
— Vijayavani (@VVani4U)July 9, 2022

ಮನೆಯಲ್ಲಿ ಅಮ್ಮನ ಶವ, ಮಂಟಪದಲ್ಲಿ ಮಗನ ಅದ್ಧೂರಿ ಮದುವೆ! ವಿವಾಹಕ್ಕೆ ಸಾಕ್ಷಿಯಾದ ಸಾವಿರಾರು ಜನ…


ಮನೆಯಲ್ಲಿ ಅಮ್ಮನ ಶವ, ಮಂಟಪದಲ್ಲಿ ಮಗನ ಅದ್ಧೂರಿ ಮದುವೆ! ವಿವಾಹಕ್ಕೆ ಸಾಕ್ಷಿಯಾದ ಸಾವಿರಾರು ಜನ…

ಚಿನ್ನದಂಗಡಿಯಲ್ಲಿ ಕೆಲಸಕ್ಕಿದ್ದುಕೊಂಡೇ ಕಳ್ಳತನಕ್ಕೆ ಸ್ಕೆಚ್​! ತುಮಕೂರಲ್ಲಿ ಸಿಕ್ಕಿಬಿದ್ದ ಅಂತರ್​ರಾಜ್ಯ ದರೋಡೆಕೋರರು!

4 ವರ್ಷ ಲೈಂಗಿಕಕ್ರಿಯೆ ನಡೆಸಿ ಬೇರೆ ಮದ್ವೆಯಾಗ್ತಿರೋ ವಕೀಲನಿಗೆ ಸಿಕ್ತು ಜಾಮೀನು: ರೇಪ್​ ಕುರಿತು ಹೈಕೋರ್ಟ್​ ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
