ಮಂಡ್ಯ:ಇದು ರಿಯಾಲಿಟಿ ಷೋ ಒಂದರಲ್ಲಿ ಸಕತ್​ ಫೇಮಸ್​ ಆಗಿರೋ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನಹುಂಡಿಯ ನಟ ರವಿಯ ಕಥೆ. 4 ವರ್ಷದ ಹಿಂದೆ ಮೈಸೂರು ಮೂಲದ ಬೇಬಿ ಎಂಬಾಕೆಯನ್ನು ಪ್ರೀತಿಸಿ, ಮನೆಯವರ ವಿರೋಧವಿದ್ದರೂ ಮದುವೆಯಾಗಿದ್ದರು ಇವರು.
ಮದುವೆಗೆ ಇಷ್ಟವಿಲ್ಲದಿದ್ದರೂ ಬೇಬಿ, ರವಿಯನ್ನು ಕಾಡಿಸಿ ಪೀಡಿಸಿ ಮದುವೆಯಾಗಿದ್ದಳು. ಈ ಮದುವೆಗೆ ಮನೆಯವರ ವಿರೋಧವೂ ಇತ್ತು. ಇದೇ ಕಾರಣಕ್ಕೆ ರಿಯಾಲಿಟಿ ಷೋನಲ್ಲಿ ಬಂದ ಸಂದರ್ಭದಲ್ಲಿ ರವಿಯ ಅಪ್ಪ-ಅಮ್ಮನ ಎದುರು ರವಿಯಿಂದ ಬೇಬಿಗೆ ತಾಳಿಯನ್ನೂ ಕಟ್ಟಿಸಲಾಗಿತ್ತು. ಇವರನ್ನು ಆದರ್ಶ ಪತಿ,ಪತ್ನಿ ಎಂದೇ ಹೊಗಳಲಾಗಿತ್ತು. ಆದರೆ ಈಗ ಬೇಬಿ ಯೂಟರ್ನ್​ ಹೊಡೆದಿದ್ದು, ಪತಿಯನ್ನು ಬಿಟ್ಟು ಹೋಗಿದ್ದಾಳೆ.
ಇದಕ್ಕೆ ಕಾರಣ ಕರೊನಾದಿಂದಾಗಿ ರವಿಗೆ ಯಾವುದೇ ಕೆಲಸ ಇಲ್ಲದೇ ಸಂಪಾದನೆ ಇಲ್ಲದಿರುವುದು. ಈ ಬಗ್ಗೆ ಗೋಳು ತೋಡಿಕೊಂಡಿರುವ ರವಿ, ನನ್ನ ಬಳಿ ಹಣ ಇಲ್ಲ ಎನ್ನುವ ಕಾರಣಕ್ಕೆ ಪತ್ನಿ ಮತ್ತೊಬ್ಬನ ಜತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ನಿನ್ನ ಬಳಿ ದುಡ್ಡಿಲ್ಲ,. ನನಗೆ ಬೇಡ, ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದು, ಈಗಾಗಲೇ ಮದ್ವೆ ಕೂಡ ಆಗಿದ್ದಾಳೆ ಎಂದಿದ್ದಾರೆ.
ಈ ಮದುವೆ ತಡೆಯಲು ಹೋದ ನನ್ನ ಮೇಲೂ ಇಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ತನಗಾದ ಮೋಸದಂತೆ ಮತ್ಯಾರಿಗೂ ಆಗಬಾರದು, ಆಕೆಗೆ ಶಿಕ್ಷೆ ಆಗಬೇಕು ಅಂತ ಕಲಾವಿದ ರವಿ ಪಟ್ಟು ಹಿಡಿದಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.
ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾದ ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣ ಭೇದಿಸಿದ ಪೊಲೀಸರು

ಅತ್ತೆಯ ಸುಳ್ಳು ಸಾಬೀತು ಮಾಡಲು ಉರಿಯುವ ಕೆಂಡದ ಮೇಲೆ ನಡೆದ ಸೊಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 1 =
Remember me
