ಮಂಡ್ಯ:ನಾಲ್ಕು ತಿಂಗಳ ಹಿಂದೆ ಅಂದರೆ ಕಳೆದ ನವೆಂಬರ್‌ನಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ಹೇಮಾವತಿ ನಾಲೆಯಲ್ಲಿ ಮಹಿಳೆಯೊಬ್ಬಳ ತುಂಡರಿಸಿದ ದೇಹ ಸಿಕ್ಕಿತ್ತು.
ಆದರೆ ಈ ಮಹಿಳೆ ಯಾರು ಎಂಬ ಬಗ್ಗೆ ಮಂಡ್ಯದ ಪೊಲೀಸರು ತಲೆಕೆಡಿಸಿಕೊಂಡಿದ್ದರು. ಏನು ಮಾಡಿದರೂ ಈಕೆ ಯಾರು ಎಂಬುದು ಪತ್ತೆಯಾಗಿರಲಿಲ್ಲ. ಇದರ ಬೆನ್ನತ್ತಿ ಹೋಗಿದ್ದ ಪೊಲೀಸರಿಗೆ ಇದೀಗ ನಾಲ್ಕು ತಿಂಗಳ ಬಳಿಕ ಅಂತೂ ರಹಸ್ಯವನ್ನು ಭೇದಿಸಿದ್ದಾರೆ.
ಮಂಡ್ಯ ಜಿಲ್ಲೆ ಹಾಗೂ ಸುತ್ತಮುತ್ತಲಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿತ್ತು. ತಿಂಗಳುಗಳು ಉರುಳಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇದನ್ನು ಭೇದಿಸಲು ಕೆಆರ್‌.ಪೇಟೆ ಪೊಲೀಸರಿಗೆ ಭಾರಿ ಒತ್ತಡ ಶುರುವಾಗಿತ್ತು. ಇದೀಗ ಸುಳಿವು ಸಿಕ್ಕಿದೆ.
ನಾಲ್ಕು ತಿಂಗಳ ತನಿಖೆಯ ನಂತರ ಮೃತಪಟ್ಟ ಮಹಿಳೆ ಆಶಾ ಎಂದು ಗುರುತಿಸಲಾಗಿದ್ದು, ಈಕೆಯ ಗಂಡ ರಂಗಪ್ಪ ಹಾಗೂ ಭಾವ ರಾಮಚಂದ್ರ ಕೊಲೆ ಮಾಡಿರುವುದು ಪೊಲೀಸರಿಗೆ ತಿಳಿದಿದೆ.ಪಾಂಡವಪುರ ಪೊಲೀಸ್ ಠಾಣೆಗೆ ದೇಶವಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಮಗಳು ಆಶಾ ನಾಲ್ಕು ತಿಂಗಳಿನಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರ ಆಧಾರದ ಮೇಲೆ ಪೊಲೀಸರಿಗೆ ಸಂಶಯ ಶುರುವಾಗಿ ತುಂಡು ತುಂಡಾದ ಮೃತ ದೇಹವನ್ನು ತೋರಿಸಿದ್ದಾರೆ. ಆಗ ಮೈಮೇಲೆ ಇದ್ದ ಟ್ಯಾಟೂ ಹಾಗೂ ಮುಖ ನೋಡಿದ ಆಶಾರ ತಂದೆ ಇದು ತಮ್ಮ ಮಗಳು ಎಂದು ಗುರುತಿಸಿದ್ದಾರೆ.
ನಂತರ ಇದರ ಬೆನ್ನತ್ತಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಂಡ ಹಾಗೂ ಭಾವನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಬಾಯಿ ಬಿಡಿಸಿದ್ದಾರೆ. ಹೆಂಡತಿಯನ್ನು ಕೊಲೆ ಮಾಡಿರುವುದಕ್ಕೆ ಸರಿಯಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಪತ್ನಿ ಇನ್ನೊಬ್ಬಳ ಜತೆ ಸಂಬಂಧ ಇಟ್ಟುಕೊಂಡಿದ್ದಳು ಎಂದಿದ್ದಾನೆ ರಂಗಪ್ಪ, ದಂಪತಿ ನಡುವೆ ಜಗಳವಾಗುತ್ತಿತ್ತು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಸದ್ಯ ಸತ್ಯಾಂಶ ಹೊರಬರಬೇಕಿದೆ.
ಆದರೆ ಭಯಾನಕ ಘಟನೆ ಎಂದರೆ ಕೊಲೆ ಮಾಡಿದ ಬಳಿಕ ರಂಗಪ್ಪ ಆಕೆ ಸರಿಯಾಗಿ ಸತ್ತರೆ ದೆವ್ವವಾಗಿ ಬಂದು ನನ್ನ ಕಾಡುತ್ತಾಳೆ ಎಂದುಕೊಂಡನಂತೆ. ಆದ್ದರಿಂದ ಪತ್ನಿಯ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದರೆ ದೆವ್ವವಾಗಲಾರಳು ಎಂದುಕೊಂಡು ಹೀಗೆ ಮಾಡಿದೆ ಎಂದಿದ್ದಾನೆ! ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೇಂದ್ರ ಸರ್ಕಾರದ ಭದ್ರತಾ ಪಡೆಯಲ್ಲಿ ಭರ್ಜರಿ ಪೊಲೀಸ್‌ ಹುದ್ದೆ; 2 ಸಾವಿರ ನೇಮಕಾತಿಗೆ ಆಹ್ವಾನ

ಭೀಕರ ಅಗ್ನಿ ದುರಂತ: ಲಿಫ್ಟ್‌ ಬಳಸಿ ಸಜೀವ ದಹನವಾದ 9 ಮಂದಿ- ಜೀವ ಉಳಿಸಹೋದ ನಾಲ್ವರ ದುರ್ಮರಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 9 =
Remember me
