ಬೆಂಗಳೂರು:ಹುಂಡಿಯಲ್ಲಿರುವ ಹಣದ ಆಸೆಗೆ ನಿನ್ನೆ ಮಧ್ಯರಾತ್ರಿ ಮಂಡ್ಯದ ಹೊರವಲಯದ ಶ್ರೀಅರ್ಕೇಶ್ವರ ದೇವಾಲಯದ ಆವರಣದಲ್ಲಿ ನಡೆದಿರುವ ಅರ್ಚಕರು ಹಾಗೂ ಕಾವಲುಗಾರರ ಕೊಲೆ ಪ್ರಕರಣಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ದೇಗುಲದ ಗೋಪುರ ಮುಖ್ಯದ್ವಾರದ ಸಮೀಪದಲ್ಲಿ ಪ್ರಾಂಗಣದಲ್ಲಿ ಮಲಗಿದ್ದವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿರುವ ಬಗ್ಗೆ ವಿಷಾದಿಸಿದ ಮುಖ್ಯಮಂತ್ರಿಗಳು, ಮೃತರ ಕುಟುಂಬಕ್ಕೆ ಸರ್ಕಾರದ ವತಿಯಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಏನಿದು ಪ್ರಕರಣ:ಬೆಚ್ಚಿಬಿದ್ದ ಮಂಡ್ಯ: ದೇವಾಲಯದ ಆವರಣದಲ್ಲಿಯೇ ಅರ್ಚಕರು ಸೇರಿ ಮೂವರ ಕೊಲೆ!
ಈ ಕುರಿತು ಟ್ವೀಟ್ ಮಾಡಿರುವ ಯಡಿಯೂರಪ್ಪನವರು, ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಗಣೇಶ್, ಪ್ರಕಾಶ್ ಮತ್ತು ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ. ಹತ್ಯೆಗೊಳಗಾದ ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಶ್ರೀ ಗಣೇಶ್, ಶ್ರೀ ಪ್ರಕಾಶ್ ಮತ್ತು ಶ್ರೀ ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿರುವ ವಿಷಯ ತಿಳಿದು ಅತ್ಯಂತ ನೋವಾಗಿದೆ. (1/2)
— CM of Karnataka (@CMofKarnataka)September 11, 2020

2024ರಲ್ಲಿಯೂ ಹಿಂದುತ್ವವೇ ಗೆಲ್ಲಲಿದೆ ಎಂದ ಸುಬ್ರಮಣಿಯನ್​ ಸ್ವಾಮಿ ಕೇಂದ್ರವನ್ನು ಟೀಕಿಸಿದ್ದೇಕೆ?

11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ್ದ ಕರೊನಾ ಸೋಂಕಿತೆ ತಲುಪಿದ್ದು ದೆಹಲಿ! ಆಗಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
