ಮಂಡ್ಯ:ಒಟ್ಟಿಗೇ ಹುಟ್ಟಿ, ಒಟ್ಟಿಗೇ ಬೆಳೆದ ಈ ಅವಳಿ ಸಹೋದರಿಯರು ಒಟ್ಟಿಗೇ ಸಾವಿನ ಹಾದಿ ತುಳಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.ಅಂತಿಮ‌ ವರ್ಷದ ಡಿಪ್ಲೊಮಾ‌ ಓದುತ್ತಿದ್ದ ದೀಪಿಕಾ ಮತ್ತು ದಿವ್ಯಾ ಎಂಬ 19 ವರ್ಷ ವಯಸ್ಸಿನ ಈ ಸಹೋದರಿಯರು ಒಟ್ಟಿಗೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಪ್ರತ್ಯೇಕ ಕೊಠಡಿಗಳಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ.ಇಷ್ಟು ವರ್ಷ ಒಟ್ಟಿಗೇ ಇದ್ದ ಇವರ ಸಾವಿಗೆ ಕಾರಣ ಮದುವೆ ಎನ್ನಲಾಗಿದೆ. ಇವರ ಮದುವೆಗೆ ಮನೆಯವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇಬ್ಬರನ್ನೂ ಬೇರೆ ಬೇರೆ ಮನೆಗೆ ಮದುವೆ ಮಾಡಿ ಕಳುಹಿಸಲು ತಯಾರಿ ನಡೆಸಲಾಗಿತ್ತು. ಇಷ್ಟು ವರ್ಷ ಜೀವಕ್ಕೆ ಜೀವದಂತಿದ್ದ ತಾವಿಬ್ಬರೂ ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗದ ಈ ಅವಳಿ ಸಹೋದರಿಯರು ಸಾವಿನ ಮೂಲಕ ಒಂದಾಗುವ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಲಾಗುತ್ತಿದೆ.
ನಡುರಾತ್ರಿ ಬೆಂಗಳೂರಿನಲ್ಲಿ ಭಾರಿ ದುರಂತ: ಹೊತ್ತಿ ಉರಿದ ಗೋದಾಮು- ಮುಗಿಲೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ
ಕೋವಿಡ್‌ಗೆ ಬಲಿಯಾದವರಿಗೆ ಚಿರನೆನಪಿನ ಶ್ರದ್ಧಾಂಜಲಿ: ಚಿತಾಭಸ್ಮದಲ್ಲಿ ಉದ್ಯಾನ ಅಭಿವೃದ್ಧಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
