ಬೆಂಗಳೂರು:ಇದೇ ಜನವರಿ ತಿಂಗಳಿನಲ್ಲಿ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಆತಂಕ ಸೃಷ್ಟಿಸಿದ್ದ ಆರೋಪಿ ಆದಿತ್ಯರಾವ್‌ಗೆ ಇಂದು ಮಂಪರು ಪರೀಕ್ಷೆ ನಡೆಯುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಬಂಧಿತನಾಗಿರುವ ಈತನನ್ನು ನಿನ್ನೆ ಮಂಗಳೂರಿನಿಂದ ಬೆಂಗಳೂರಿಗೆ ಕರೆತರಲಾಗಿದೆ ಎಂದು ಮೂಲಗಳು ಹೇಳಿವೆ.
ಜನವರಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ. ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಏರ್​​ಪೋರ್ಟ್​ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು.
ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು.
ಇದನ್ನೂ ಓದಿ:ಸೋಮವಾರ ಪೊಲೀಸರ ಎದುರು ಹಾಜರಾಗ್ತೀನಿ: ರಾಗಿಣಿ ಫಸ್ಟ್​ ರಿಯಾಕ್ಷನ್​
ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಆದಿತ್ಯರಾವ್‌ ಬೆಂಗಳೂರು ಡಿಜಿ ಕಚೇರಿಗೆ ಹೋಗಿ ನಾನೇ ಆದಿತ್ಯರಾವ್ ಅಂತ ಹೇಳಿಕೊಂಡು ಶರಣಾಗಿದ್ದ. ಎಂಬಿಎ ಮುಗಿಸಿದ್ದ ಈತ ಮಾನಸಿಕ ಅಸ್ವಸ್ಥ ಎಂದೂ ಹೇಳಲಾಗಿತ್ತು.
ಏನಿದು ಮಂಪರು ಪರೀಕ್ಷೆ?:ಸೋಡಿಯಮ್ ಪೆಂಟೋಥಾಲ್ ಅಥವಾ ಸೋಡಿಯಮ್ ಅಮಾಟಲನಂತಹ ಔಷಧಿ ಕೊಟ್ಟು, ಆರೋಪಿಗಳು ಸುಳ್ಳು ಹೇಳುವ ಶಕ್ತಿಯನ್ನು ಕುಗ್ಗಿಸುವುದು ಇದರ ಉದ್ದೇಶ. ಹಲವಾರು ಉಗ್ರವಾದಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಹಲವಾರು ವಿಷಯಗಳನ್ನು ಹೊರತರಲಾಗಿದೆ.
ಹುಲಿಯಾದ ನಾಯಿ- ಬೇಸ್ತುಬಿದ್ದ ಜನ: ಕುಕೃತ್ಯ ಎಸಗಿದವರ ಹುಡುಕಿಕೊಟ್ಟರೆ ಸೂಕ್ತ ಬಹುಮಾನ

ಕರೊನಾ ನಿರ್ವಹಣೆ: ವಿಶ್ವದ ಅತ್ಯುನ್ನತ ಚಿಂತಕಿ ಪಟ್ಟಿಯಲ್ಲಿ ಕೇರಳದ ಆರೋಗ್ಯ ಸಚಿವೆ

ಲಡಾಖ್‌ ಗಡಿಯಲ್ಲಿ ಚೀನಾ ಕಿತಾಪತಿ: ಲೇಹ್‌ಗೆ ಸೇನಾ ಮುಖ್ಯಸ್ಥರ ಭೇಟಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + fourteen =
Remember me
