ವಿಜಯವಾಣಿ ಸುದ್ದಿಜಾಲ: ಮಂಗಳೂರು
ರಾಜ್ಯದ ಹಲವೆಡೆಗಳಲ್ಲಿ ಗೋಮಾಂಸ ಮಾರಾಟ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಎಷ್ಟೇ ಕಾಯ್ದೆ-ಕಾನೂನುಗಳು ಇದ್ದರೂ ಅಕ್ರಮವಾಗಿ ಅವುಗಳನ್ನು ಮಾರಾಟ ಮಾಡುವ ಜಾಲ ಎಗ್ಗಿಲ್ಲದೇ ಸಾಗುತ್ತದೆ.
ಇದೀಗ ಮಂಗಳೂರಿನಲ್ಲಿಯೂ ಇಂಥ ಕುಕೃತ್ಯ ನಡೆದಿದೆ. ಇಲ್ಲಿಯ ಪಂಪ್​ವೆಲ್​ ಬಳಿ ಇಂದು ಬೆಳಗ್ಗೆ ಮೀನು ಸಾಗಾಟದ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 10 ಟನ್ ದನದ ಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಪತ್ತೆ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ.
ಇದನ್ನೂ ಓದಿ:VIDEO: ಆಗಸದಲ್ಲಿ ವಿಚಿತ್ರ ವಿದ್ಯಮಾನ- ಒಂದೇ ಬಾರಿ ಮೂರು ಸೂರ್ಯನ ಉದಯ!
ಮಂಗಳೂರಿನಲ್ಲಿ ದನದ ಅಕ್ರಮ ಸಾಗಾಟ ವ್ಯಾಪಕವಾಗಿ ಸಾಗಾಟ ನಡೆಯುತ್ತಿರುವ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದರು. ಎಲ್ಲ ಕಡೆ ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿ ನೇಮಕ ಮಾಡಿದ್ದರು.
ಇಷ್ಟೆಲ್ಲಾ ಇದ್ದರೂ ಮಂಗಳೂರು ಹಾಗೂ ಸುತ್ತಮುತ್ತಲು ಗೋಮಾಂಸ ಸಾಗಾಟ ನಡೆಯುತ್ತಲೇ ಇದೆ. ಐದು ದಿನಗಳ ಹಿಂದೆಯೂ ಮೀನು ಸಾಗಾಟ ವಾಹನದಲ್ಲಿ ದನದ ಮಾಂಸ ಸಾಗಾಟವನ್ನು ಬಜರಂಗದಳದ ಕಾರ್ಯಕರ್ತರು ಪತ್ತೆ ಮಾಡಿದ್ದರು.
ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ- ಬೆಂಗಳೂರಿನಲ್ಲಿ ನಡೆದ ಘಟನೆ

ಪತ್ನಿಯ ತಲೆ ಕಡಿದ ಪತಿ…ರುಂಡ ತೆಗೆದುಕೊಂಡು ಹೋಗಿದ್ದು ಎಲ್ಲಿಗೆ ನೋಡಿ 😳

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 10 =
Remember me
