ಮಂಗಳೂರು:ಮಂಗಳೂರು ಹೊರ ವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನ ಪತ್ತೆಯಾಗಿರುವುದು ಬಹು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ತಿಂಗಳು ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ದೇವಸ್ಥಾನ ಕಂಡಿತ್ತು. ನವೀಕರಣದ ವೇಳೆ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ಮುಂಭಾಗವನ್ನು ಕೆಡವಲಾಗಿತ್ತು.
ಈ ದರ್ಗಾದ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿದ್ದವು. ದರ್ಗಾದಲ್ಲಿ ಜೈನ ಅಥವಾ ಹಿಂದೂ ದೇವಸ್ಥಾನ ಇರುವ ಸಾಧ್ಯತೆ ಗೋಚರ ಆಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿ ತಾಂಬೂಲ ಪಶ್ನೆ ಇಡಲು ತೀರ್ಮಾನಿಸಿತ್ತು. ಜಾಗದಲ್ಲಿ ದೈವಿಕ ಶಕ್ತಿ ಇದೆಯೊ ಇಲ್ಲವೂ ಎಂದು ತಿಳಿಯಲು ತಾಂಬೂಲ ಪ್ರಶ್ನೆ ಇಡಲು ಮೇ 25 ಡೇಟ್​ ಫಿಕ್ಸ್​ ಮಾಡಲಾಗಿತ್ತು.
ಅದರಂತೆ ಇಂದು ಬೆಳಗ್ಗೆಯಿಂದ ಕೇರಳದ ಗೋಪಾಲಕೃಷ್ಣ ಪೊದುವಾಳ್ ಅವರು ತಾಂಬೂಲ ಪ್ರಶ್ನೆಯ ಮೂಲಕ ಉತ್ತರಿಸಿದ್ದಾರೆ. ಇದರಲ್ಲಿ ಕೆಲವೊಂದು ಮಹತ್ವದ ಸುಳಿವು ಸಿಕ್ಕಿದೆ. ಈ ಪ್ರಶ್ನೆಯಲ್ಲಿ ಸಿಕ್ಕಿರುವ ಮಹತ್ವದ ಸುಳಿವು ಎಂದರೆ ಈ ಜಾಗದಲ್ಲಿ ಹಿಂದೆ ದೇವಾಲಯವಿತ್ತು. ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ. ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಎಂದು ಪ್ರಶ್ನೆಯಲ್ಲಿ ಉತ್ತರ ಸಿಕ್ಕಿದೆ.
ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ವಿವಾದದಿಂದಾಗಿ ದೇವಾಲಯ ನಾಶಪಡಿಸಿ, ಮಸೀದಿ ಕಟ್ಟಲಾಗಿದೆ. ದೇವಾಲಯವನ್ನು ಮರುಸ್ಥಾಪಿಸಬೇಕಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಅವರು ಹೇಳಿದ್ದಾರೆ.
ಇದೀಗ ಈ ಜಾಗದ ಮಾಲಕತ್ವ ಹೊಂದಿರುವವರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಮಾಡಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರವಿದೆ. ಈ ಪ್ರದೇಶದಲ್ಲಿ ಶಿವಕಲೆಯಿದೆ. ಅಲ್ಲಿ ಶಿವಸಾನಿಧ್ಯವಿದೆ. ಇದರ ಆರಾಧನೆ ಮಾಡಿದ ಪೂರ್ವಿಕರ ಮನೆಯಲ್ಲಿ ಈಗಲೂ ಪೂಜೆ ಮಾಡಲಾಗುತ್ತಿದೆ ಎಂದಿದ್ದಾರೆ.
ವೀಳ್ಯದೆಲೆಯಿಂದ ಹೇಳಿದ್ದು ಇಷ್ಟು…* 1ನೇ ವೀಳ್ಯದೆಲೆ: ಇದು ಸಂಪೂರ್ಣವಾಗಿ ಕೆಟ್ಟುಹೋಗಿದೆ. ಸರಿಯಾಗಿ ಬೆಳೆಯದ ವೀಳ್ಯದೆಲೆ ಸ್ಥಳ ಅಜೀರ್ಣವಾಗಿರುವುದನ್ನು ಬಿಂಬಿಸುತ್ತದೆ.* 2ನೇ ವೀಳ್ಯದೆಲೆ: ಅಜೀರ್ಣ ಜಾಗವನ್ನು ಶುದ್ಧ ಮಾಡಲು ಸಮಾಜ ಹೊರಟಿದೆ, ಒಳ್ಳೆಯ ಸಂದೇಶ ಎರಡನೇ ಎಲೆಯಲ್ಲಿ ಸಿಕ್ಕಿದೆ.* 3ನೇ ವೀಳ್ಯದೆಲೆ: ಯಾವುದೇ ಗೊಂದಲ ಗಲಾಟೆ ಇಲ್ಲ ಸಂಘರ್ಷ ಆಗಲ್ಲ* 4ನೇ ವೀಳ್ಯದೆಲೆ: ಇದು ಶುದ್ಧ ವೀಳ್ಯದೆಲೆ* 5ನೇ ವೀಳ್ಯದೆಲೆ: ತೊಟ್ಟಿನ ಭಾಗ ಹಾಳಾಗಿದೆ. ಆದ್ದರಿಂದ ಹಾಗಾಗಿ ಆ ಜಾಗದಲ್ಲಿ ಕೆರೆ ಬಾವಿ ಹಾಳಾಗಿರಬಹುದು.* 6 7 8ನೇ ವೀಳ್ಯದೆಲೆ: ಎಲೆಗಳು ಸಾಧಾರಣ ಗಾತ್ರದ ಆಯಕಟ್ಟಿನ ಎಲೆಗಳು* 9ನೇ ವೀಳ್ಯದೆಲೆ: ಎಲೆ ಬಹಳ ಚೆನ್ನಾಗಿದೆ. ಇದಕ್ಕಿಂತ ಚೆನ್ನಾಗಿರುವ ಎಲೆ ಬೇರೊಂದಿಲ್ಲ. ಇದು ಈ ಸ್ಥಳ ಜೀರ್ಣೋದ್ದಾರ ಆದರೆ ಊರಿಗೆ ಒಳಿತು ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.
ಏನಿದು ತಾಂಬೂಲ ಪ್ರಶ್ನೆ?ಜಾಗದ ಕುರಿತು ಸಮಸ್ಯೆ ಎದುರಾದಾಗ, ಜಾಗದ ಹಿನ್ನೆಲೆ ತಿಳಿಯಲು ದಕ್ಷಿಣ ಕನ್ನಡ ಭಾಗದಲ್ಲಿ ತಾಂಬೂಲ ಪ್ರಶ್ನೆ ಕೇಳುವ ಪದ್ಧತಿ ಇದೆ. ಯಾರು ತಾಂಬೂಲ ಪ್ರಶ್ನೆ ಕೇಳಲು ಕೂರುತ್ತಾರೋ ಅವರಿಗೆ ಒಂದು ಕಟ್ಟು ವೀಳ್ಯದೆಲೆಯಲ್ಲಿ ತರಲು ಹೇಳಲಾಗುತ್ತೆ. ಆ ಕಟ್ಟಿನಲ್ಲಿ 12 ಎಲೆಗಳನ್ನು ತೆಗೆಯಲಾಗುತ್ತೆ. ಆ ಎಲೆಯಲ್ಲಿ ಪೂರ್ವಾಪರ ಮಾಹಿತಿ ಗೊತ್ತಾಗುತ್ತೆ ಅನ್ನೋದು ಧಾರ್ಮಿಕ ನಂಬಿಕೆ. ವೀಳ್ಯದೆಲೆಯಲ್ಲಿ ಒಂದು ಪುರುಷಗುಣ, ಮತ್ತೊಂದು ಸ್ತ್ರೀಗುಣ ಇರುತ್ತೆ. ವೀಳ್ಯದೆಲೆ ಮೇಲಿನ ಚುಕ್ಕೆ, ಪದರಗಳನ್ನು ಗಮನಿಸಿ ಫಲಾಫಲವನ್ನ ಹೇಳಲಾಗುತ್ತೆ. ಪ್ರಶ್ನೆ ಕೇಳುವವರು ಬರುವ ರೀತಿ, ಕೂರುವ ರೀತಿ ಇದೆಲ್ಲವನ್ನೂ ಗಮನಿಸಲಾಗುತ್ತೆ. ಇದರ ಜತೆಗೆ ಕವಡೆ ಹಾಕಲಾಗುತ್ತೆ. ಎರಡರಲ್ಲೂ ಒಂದೇ ಪ್ರಶ್ನೆಯ ಸಾಮ್ಯತೆ ಬರಬೇಕು. ವೀಳ್ಯದೆಲೆ ಒಂದೊಂದು ಭಾಗಕ್ಕೂ ಒಂದೊಂದು ವೈಶಿಷ್ಟ್ಯವಿದೆ.
ಸಮಾಧಿ ಮಾಡುವಾಗ ಕಣ್ಣು ತೆರೆದ ನವಜಾತ ಶಿಶು: ಬೆಚ್ಚಿಬಿದ್ದ ಕುಟುಂಬಸ್ಥರು
ಗಂಡನ ಉಪಜಾತಿ ಬೇರೆ ಎಂದು ಗಂಡನ ಬಿಟ್ಟು ತವರು ಸೇರಿದಾಕೆಗೆ ಹೈಕೋರ್ಟ್​ನಿಂದ ಬಿತ್ತು ಭಾರಿ ದಂಡ!
Sign in to your account
Please enter an answer in digits:eight + 7 =
Remember me
