ಬೆಂಗಳೂರು:ಕರೊನಾ ವ್ಯಾಪಕವಾಗಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ರಾಜ್ಯದಲ್ಲಿ ಮದುವೆ ಸೇರಿದಂತೆ ಒಳಾಂಗಣ ಕಾರ್ಯಕ್ರಮದಲ್ಲಿ‌ ಪಾಲ್ಗೊಳ್ಳುವವರ ಸಂಖ್ಯೆಗೆ ಸರ್ಕಾರ ಮಿತಿ ಹಾಕಿದೆ.
ಈ ಮೂಲಕ ಮದುವೆಗೆ ಸದ್ಯ ಎಲ್ಲಾ ಬಳಗದವರನ್ನು ಕರಿಯಬಹುದು ಎಂದುಕೊಂಡವರಿಗೆ ಶಾಕ್​ ಆಗಿದೆ.
ಈವರೆಗೆ ಒಳಾಂಗಣ ಕಾರ್ಯಕ್ರಮದಲ್ಲಿ ಇನ್ನೂರರ ಮಿತಿ ಇತ್ತು. ಇನ್ನು ಮುಂದೆ ನೂರರ ಮಿತಿ ಹಾಕಲಾಗಿದೆ. ನೂರಕ್ಕಿಂತ ಹೆಚ್ಚು ಜನ ಸೇರಲು ಅವಕಾಶ ಕೊಡಲ್ಲ. ಹೊರಾಂಗಣ ಕಾರ್ಯಕ್ರಮವಾದರೆ ಮಿತಿಯನ್ನು ಮುನ್ನೂರಕ್ಕೆ ಮಿತಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಅನಗತ್ಯ ಗುಂಪು ಸೇರಲು ಅವಕಾಶ ಕೊಡಲ್ಲ. ಯಾರೂ ಸಹ ಗುಂಪು ಸೇರಲು ಮುಂದಾಗಬೇಡಿ ಎಂದ ಮನವಿ ಮಾಡುವೆ ಎಂದ ಅವರು ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆಯೇ ಕ್ರಮಕೈಗೊಳ್ಳಲಾಗುತ್ತಿದೆ. ಕರೊನಾ ಚಿಕಿತ್ಸೆಗೆ ಔಷಧಿ‌ ಕೊರತೆ ಇಲ್ಲದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಆಕ್ಸಿಜನ್ ಉತ್ಪಾದನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಾಗುತ್ತದೆ ಎಂದರು.
ಸಂಪುಟದ ಎಲ್ಲ ಸದಸ್ಯರೂ ಸಹ ಕರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಬಿಎಸ್ ವೈ ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದರು.
ವೆಡ್ಡಿಂಗ್​ ಕಾರ್ಡ್​ ಮೇಲೆ ಮದುಮಗನ ಜಾಗದಲ್ಲಿ ಲಾಲು ಫೋಟೋ- ದಂಗಾದ ಮುಖಂಡರು!

ಆದಾಯ ಇಲ್ಲದಿದ್ರೂ, ಹೆಂಡ್ತಿದೇ ತಪ್ಪಿನಿಂದ ಡಿವೋರ್ಸ್​ ಕೊಟ್ರೂ ಜೀವನಾಂಶ ಕೊಡಲೇಬೇಕಾ?

ಆನ್​ಲೈನ್​ ಮೀಟಿಂಗ್​ನಲ್ಲಿ ಬೆತ್ತಲೆಯಾದ ಸಂಸದ! ಬಟ್ಟೆ ಬದಲಾಯಿಸಲು ಹೋಗಿ ಮೊಬೈಲ್​ ಎದುರು ಬಂದ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × 2 =
Remember me
