ದಾಂಡೇಲಿ (ಉತ್ತರ ಕನ್ನಡ):ವಧು ಎಡಗೈಯಲ್ಲಿ ಊಟ ಮಾಡಿದಳು ಎನ್ನುವ ಕಾರಣಕ್ಕೆ, ವರ ಮಹಾಶಯ ಮದುವೆ ಮನೆಯಲ್ಲಿಯೇ ಆಕೆಯನ್ನು ಬಿಟ್ಟು ಹೋಗಿ ಭಾರಿ ಕೋಲಾಹಲ ಸೃಷ್ಟಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿಯ ಕೂಳಗಿಯ ಈಶ್ವರ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಎಡಗೈಯನ್ನು ಬಳಸುತ್ತಿದ್ದ ವಧುವನ್ನು ನೋಡಿ ರೊಚ್ಚಿಗೆದ್ದ ವರ ಆಕೆಯನ್ನು ಬಿಟ್ಟು ಹೋಗಿದ್ದಾನೆ.
ಮದುವೆಯ ಸಕಲ ಸಂಪ್ರದಾಯ ಮುಗಿದು, ಮಾಂಗಲ್ಯಧಾರಣೆಯೂ ಆದ ಬಳಿಕ ಈ ಘಟನೆ ನಡೆದಿದೆ. ಮದುವೆ ಮುಗಿದ ಮೇಲೆ ಊಟಕ್ಕೆ ಕುಳಿತ ಸಂದರ್ಭದಲ್ಲಿ ವಧು ಊಟ ಮಾಡಲು ಎಡಗೈ ಬಳಸುವುದನ್ನು ವರ ಮತ್ತು ಆತನ ಪಾಲಕರು ನೋಡಿದ್ದಾರೆ. ಇದರಿಂದ ಅವರು ಸಿಟ್ಟುಗೊಂಡಿದ್ದಾರೆ. ಮಾತಿನ ಚಕಮಕಿ ನಡೆದ ವರ ಹಾಗೂ ವರನ ಪಾಲಕರು ಮದುಮಗಳನ್ನು ಬಿಟ್ಟು ಕಾರನ್ನೇರಿದ್ದಾರೆ.
ಇದರಿಂದ ಭಯಗೊಂಡ ವಧು ಮತ್ತು ಆಕೆಯ ಪಾಲಕರು ವರ ಹಾಗೂ ಆತನ ಕುಟುಂಬವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನ ಆಗಲಿಲ್ಲ. ನಂತರ ಗಲಾಟೆಯಾಗಿ ಪೊಲೀಸರು ಮತ್ತು ಮಹಿಳಾ ಕೇಂದ್ರದ ಸಿಬ್ಬಂದಿ ವಧು-ವರರನ್ನು ಮಹಿಳಾ ಕೇಂದ್ರದ ಕಚೇರಿಗೆ ಕೊಂಡೊಯ್ದು ವರನಿಗೆ ಬುದ್ಧಿ ಹೇಳಿ ಮನ ಪರಿವರ್ತನೆ ಮಾಡಿದ್ದಾರೆ. ಆಕೆಗೆ ತೊಂದರೆ ಕೊಡುವುದಿಲ್ಲ ಎಂದು ವರ ಮುಚ್ಚಳಿಕೆ ಬರೆದುಕೊಟ್ಟ ನಂತರ ಮದುಮಗಳನ್ನು ಕರೆದುಕೊಂಡು ವರ ಹೋಗಿದ್ದಾನೆ.
ಯುವತಿ ಪೊಲೀಯೋಪೀಡಿತಳಾಗಿದ್ದಾಳೆ. ಇದರ ಹೊರತಾಗಿಯೂ ವರ ಆಕೆಯನ್ನು ನೋಡಿ ಮದುವೆಗೆ ಒಪ್ಪಿಕೊಂಡಿದ್ದ. ಹುಡುಗಿಯನ್ನು ನೋಡಿ ಮೂರೇ ದಿನದಲ್ಲಿ ಮದುವೆಯೂ ಗೊತ್ತಾಗಿತ್ತು. ಆಗ ಆತ ಮತ್ತು ಮನೆಯವರಿಗೆ ಹುಡುಗಿ ಎಡಗೈಯಲ್ಲಿ ಊಟ ಮಾಡುತ್ತಾಳೆ ಎಂದು ತಿಳಿದಿರಲಿಲ್ಲ. ಪೋಲಿಯೋ ಇದ್ದರೂ ಮದುವೆಗೆ ಒಪ್ಪಿಕೊಂಡಾಗಲೂ ಈ ವಿಷಯ ತಿಳಿಸಲಿಲ್ಲ ಎಂದು ವರ ಮತ್ತು ಆತನ ಪಾಲಕರಿಗೆ ಕೋಪ ಬಂದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಕೊನೆಗೆ ವರ ವಧುವನ್ನು ಕರೆದುಕೊಂಡು ಹೋಗಿದ್ದಾನೆ.
ಉ. ಪ್ರದೇಶದಲ್ಲಿ 36 ಮುಸ್ಲಿಂ ಅಭ್ಯರ್ಥಿಗಳಿಗೆ ಜಯಭೇರಿ: ಯಾರನ್ನು ಸೋಲಿಸಿದರು ಈ ಧುರೀಣರು? ಇಲ್ಲಿದೆ ಡಿಟೇಲ್ಸ್​

ಯಾವ ರಾಜಕಾರಣಿಯೂ ಬೇಡ ಎಂದು “ನೋಟಾ” ಒತ್ತಿದ ಎಂಟು ಲಕ್ಷ ಮತದಾರರು- ಎಲ್ಲೆಲ್ಲಿ ಎಷ್ಟೆಷ್ಟು?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fifteen + 15 =
Remember me
