ಬೆಂಗಳೂರು:ಯಾವುದೇ ವಾಹನಗಳನ್ನು ಚಲಾಯಿಸಬೇಕಾದರೂ ಮಾಸ್ಕ್‌ ಧರಿಸುವುದು ಇಲ್ಲಿಯವರೆಗೆ ಕಡ್ಡಾಯವಾಗಿತ್ತು. ಒಂದು ವೇಳೆ ಮಾಸ್ಕ್‌ ಧರಿಸದೇ ಹೋದರೆ ಭಾರಿ ಪ್ರಮಾಣದ ದಂಡ ಬೀಳುತ್ತಿತ್ತು.
ಇದೀಗ ವಾಹನ ಸವಾರರು ಕೊಂಚ ನಿರಾಳ ಎನ್ನುವಂಥ ಆದೇಶವೊಂದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದೆ. ಈ ಹೊಸ ಆದೇಶ ಬೆಂಗಳೂರು ನಗರಿಗರಿಗೆ ಅನ್ವಯ ಆಗಲಿದೆ.
ಈ ಹೊಸ ರೂಲ್ಸ್‌ ಪ್ರಕಾರ, ಬೈಕ್ ಮತ್ತು ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವವರಿಗೆ ಮಾಸ್ಕ್ ಇನ್ಮುಂದೆ ಕಡ್ಡಾಯವಿಲ್ಲ. ಆದರೆ ಹಿಂಬದಿ ಸವಾರ ಮತ್ತು ಕಾರಿನಲ್ಲಿ ಇತರ ಪ್ರಯಾಣಿಕರಿದ್ದಾಗ ಮಾತ್ರ ಮಾಸ್ಕ್ ಅಳವಡಿಸಿಕೊಳ್ಳಬೇಕು.
ಇದನ್ನೂ ಓದಿ:ಎರಡನೇ ಪತ್ನಿ, ಮಕ್ಕಳಿಗೆ ಆಸ್ತಿ ಸಿಗುತ್ತದೆಯೇ? ಬಾಂಬೆ ಹೈಕೋರ್ಟ್‌ ಹೇಳಿರುವುದೇನು?
ಮಾಸ್ಕ್ ಅಳವಡಿಕೆ ನೀತಿಯನ್ನು ಸಡಿಲಿಸುವಂತೆ ಸಾರ್ವಜನಿಕರು ಮಾಡಿಕೊಂಡ ಮನವಿ ಮೇರೆಗೆ ಬಿಬಿಎಂಪಿ ಈ ತೀರ್ಮಾನ ಕೈಗೊಂಡಿದೆ. ಒಂಟಿಯಾಗಿ ಪ್ರಯಾಣಿಸುವಾಗ ಮಾತ್ರ ಇದು ಅನ್ವಯ ಆಗಲಿದೆ. ಇದನ್ನು ಹೊರತುಪಡಿಸಿ ಉಳಿದ ಸಮಯಗಳಲ್ಲಿ ಅಂದರೆ ಹೆಚ್ಚು ಮಂದಿ ಪ್ರಯಾಣಿಸುವಾಗ ಮಾಸ್ಕ್ ಧರಿಸದೇ ಹೋದರೆ ದಂಡ ಕಟ್ಟಟ್ಟದ್ದೇ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.
ಒಂದು ವೇಳೆ ವಾಹನ ಸವಾರರು ಒಂಟಿಯಾಗಿ ಪ್ರಯಾಣಿಸಿ ನಂತರ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದರೆ ಅಂಥವರು ಕಡ್ಡಾಯವಾಗಿ ಮಾಸ್ಕ್‌ ಧರಿಸಲೇಬೇಕು.
ಪ್ರಿಯತಮನ ಕಣ್ಣುತಪ್ಪಿಸಿ ಚಾಟಿಂಗ್‌: ಪಾಸ್‌ವರ್ಡ್‌ಗಾಗಿ ಕೊಲೆಯಾದಳು ಮಹಿಳೆ!

VIDEO|ಕಚೇರಿಯಲ್ಲಿಯೇ ಕುಷ್ಟಗಿ ತಹಶೀಲ್ದಾರ್‌ ರಾಸಲೀಲೆ- ಕಿಸ್ಸಿಂಗ್‌ ವಿಡಿಯೋ ವೈರಲ್​

ಎರಡನೇ ಪತ್ನಿ, ಮಕ್ಕಳಿಗೆ ಆಸ್ತಿ ಸಿಗುತ್ತದೆಯೇ? ಬಾಂಬೆ ಹೈಕೋರ್ಟ್‌ ಹೇಳಿರುವುದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + three =
Remember me
