ಮೈಸೂರು :ಕರೊನಾ ಹಿನ್ನೆಲೆಯಲ್ಲಿ ಇದಾಗಲೇ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಕೂಡ ನಿಷೇಧಿಸಲಾಗಿತ್ತು. ನಂತರ ಕೆಲವೊಂದು ಷರತ್ತುಗಳನ್ನು ವಿಧಿಸುವ ಮೂಲಕ ಸಾಮೂಹಿಕ ವಿವಾಹಕ್ಕೆ ಇದಾಗಲೇ ಚಾಲನೆ ದೊರೆತಿದ್ದು, ಕೆಲವು ಕಡೆಗಳಲ್ಲಿ ಈ ಕಾರ್ಯಕ್ರಮಗಳು ಜರುಗಿವೆ, ನಡೆಯುತ್ತಲಿವೆ.
ಇದೀಗ ಮೈಸೂರಿನಲ್ಲಿ ಸಾಮೂಹಿಕ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಏರ್ಪಡಿಸಲಾಗಿದ್ದು, ವಿವಾಹಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ವರ್ಷ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಎರಡು ದಿನಗಳು ಸಾಮೂಹಿಕ ವಿವಾಹ ನಡೆಯಲಿದೆ. ಮಾರ್ಚ್‌ 15 ಹಾಗೂ ಜೂನ್‌ 17. ಎರಡೂ ದಿನಗಳು ಅಭಿಜಿನ್ ಮುಹೂರ್ತದಲ್ಲಿ ವಿವಾಹ ಜರುಗಲಿದೆ.
ಮಾರ್ಚ್‌ 15:ಈ ದಿನ ನಡೆಯಲಿರುವ ಸಪ್ತಪದಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ. ಮಾರ್ಚ್ 15 ರಂದು ಬೆಳಗ್ಗೆ 11 ರಿಂದ 12 ರವರೆಗೆ ವಿವಾಹ ನಡೆಯಲಿದೆ. ಹೆಸರು ನೋಂದಾಯಿಸಿಕೊಂಡ ವಧು, ವರರ ವಿವರಗಳನ್ನು ದೇವಾಲಯದಲ್ಲಿ ಮಾರ್ಚ್ 5 ರಂದು ಪ್ರಕಟಿಸಲಾಗುವುದು.
ಜೂನ್‌ 17:ಈ ದಿನ ನಡೆಯಲಿರುವ ಸಪ್ತಪದಿ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಮೇ 31 ಕೊನೆಯ ದಿನ. ಜೂನ್‌ 17ರ ಬೆಳಗ್ಗೆ 11 ರಿಂದ 12ರವರೆಗೆ ವಿವಾಹ ಪ್ರಕ್ರಿಯೆಗಳು ನಡೆಯಲಿವೆ.
ಈ ಎರಡೂ ದಿನಗಳ ವಿವಾಹಗಳ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಕಚೇರಿ ದೂರವಾಣಿ ಸಂಖ್ಯೆ 0821-2590027 ಅಥವಾ ಮೊಬೈಲ್ ಸಂಖ್ಯೆ 99802349947ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ಹೇಳಿದೆ.
VIDEO: ಶಿವಾಜಿ ಪ್ರತಿಮೆ ಅನಾವರಣಕ್ಕೆ ಪೊಲೀಸರು ತಡೆದಾಗ ಪ್ರಕೃತಿಯಿಂದಲೇ ನಡೆಯಿತು ಈ ವಿಸ್ಮಯ!

ತಿರುಮಲ ವೆಂಕಟೇಶನಿಗೆ ಭಕ್ತನಿಂದ ಮೂರೂವರೆ ಕೆ.ಜಿ ತೂಕದ ಚಿನ್ನದ ಶಂಖ-ಚಕ್ರ: ಇದರ ಬೆಲೆ ಊಹಿಸುವಿರಾ?

ಬೇರೆಯವರ ಎದುರು ಮಾತ್ರ ಮುದ್ದಾಡುವ ಪತಿಯ ಹಿಂಸೆ ತಾಳದಾಗಿದೆ- ಕಾನೂನಿನಡಿ ಪರಿಹಾರವೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × three =
Remember me
