ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಚೆಲುವನಾರಾಯಣನಿಗೆ ಇಂದು ಐತಿಹಾಸಿಕ ವೈರಮುಡಿ ಉತ್ಸವವು ನಡೆಯಲಿದೆ. ಕರೊನಾದಿಂದ ನಿಂತುಹೋಗಿದ್ದ ಈ ಉತ್ಸವ ಈ ಬಾರಿ ನಡೆಯುತ್ತಿದ್ದರೂ ಉತ್ಸವಕ್ಕೆ ಆರಂಭಿಕ ವಿಘ್ನ ಎದುರಾಗಿದೆ.
ಕಿರೀಟ ತೆಗೆದುಕೊಂಡು ಹೋಗುವ ವಿಚಾರಕ್ಕೆ ಸ್ಥಾನಿಕರ ನಡುವೆ ಜಟಾಪಟಿ ನಡೆದಿದೆ. 7 ಗಂಟೆಗೆ ತೆರಳಬೇಕಿದ್ದ ವೈರಮುಡಿ, ಆಭರಣಗಳು 8 ಗಂಟೆಯಾದರೂ ಮಂಡ್ಯಕ್ಕೆ ಬಾರದ ವೈರಮುಡಿ ಕೊಂಡೊಯ್ಯುವ ವಾಹನ. ಇದರಿಂದ ಮೇಲುಕೋಟೆಯಲ್ಲೇ ವಾಹನಕ್ಕೆ ಅಡ್ಡಿಪಡಿಸಿದ 4ನೇ ಸ್ಥಾನೀಕರು.
ವೈರಮುಡಿ ಕೊಂಡೊಯ್ಯಲು ಬಿಡದೆ ವಾಹನಕ್ಕೆ ಅಡ್ಡಿ ಮಾಡಲಾಗಿದೆ. ವಾಹನ ಬಾರದೆ ಮಂಡ್ಯದ ಭಕ್ತರು ಹಾಗೂ ಅಧಿಕಾರಿಗಳು ಕಾದು ಕುಳಿತಿದ್ದಾರೆ. ಮಂಡ್ಯದ ಜಿಲ್ಲಾ ಖಜಾನೆ ಬಳಿ ಭಕ್ತರು ಕಾಯುತ್ತಿರುವ ಘಟನೆ ನಡೆದಿದೆ.
ವೈರಮುಡಿ ಕೊಂಡೊಯ್ಯಲು ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನೀಕರ ಕುಟುಂಬದಿಂದ ಅಡ್ಡಿ ಮಾಡಿದ್ದರಿಂದ ಈ ಘಟನೆ ನಡೆದಿದೆ. 1ನೇ ಸ್ಥಾನೀಕರು ಪ್ರತಿವರ್ಷ ವೈರಮುಡಿ ತರುವ ಉಸ್ತುವಾರಿ ವಹಿಸಿದ್ದರು. ‌
ಕಳೆದ ಬಾರಿ ಕೋರ್ಟ್ ನಮ್ಮ ಪರ ಆದೇಶ ಮಾಡಿತ್ತು. ಕೋರ್ಟ್ ಆದೇಶದಂತೆ ತಮಗೆ ಅವಕಾಶ ನೀಡುವಂತೆ 4ನೇ ಸ್ಥಾನಿಕರು ಪಟ್ಟು ಹಿಡಿದಿದ್ದಾರೆ.
ಉತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ರಾತ್ರಿ 8 ಗಂಟೆಗೆ ಮೇಲುಕೋಟೆ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಲಿದೆ. ಚಲುವರಾಯಸ್ವಾಮಿಗೆ ಕೀರಿಟಧಾರಣೆ ಮಾಡಿ ಉತ್ಸವ ಮಾಡಲಾಗುತ್ತದೆ. ಇದಕ್ಕಾಗಿ ಮುಂಜಾನೆ ಖಜಾನೆಯಿಂದ ಅಭರಣಗಳು ತೆರಳಬೇಕಿತ್ತು. ಆದರೆ ವಿಘ್ನ ಉಂಟಾಗಿದೆ.
ಯುಜಿಸಿಯಿಂದ ಕ್ರಾಂತಿಕಾರಿ ಬದಲಾವಣೆ: ಕೇಂದ್ರೀಯ ವಿವಿಗಳಲ್ಲಿ ಪ್ರಾಧ್ಯಾಪಕರಾಗಲು ಪಿಎಚ್‌ಡಿ ಕಡ್ಡಾಯವಲ್ಲ

ಒಂದೇ ದಿನ 81 ಮಂದಿಗೆ ಗಲ್ಲು: ಉಗ್ರರು, ದೇಶದ್ರೋಹಿಗಳು, ರೇಪಿಸ್ಟ್‌ಗಳ ಕೊರಳಿಗೆ ನೇಣು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
