ಯಾದಗಿರಿ:ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೂಡ್ಲಗಿ ಗ್ರಾಮದ ರೈತನೋರ್ವ ಬಿಜೆಪಿ ಶಾಸಕನಿಂದ ಮೋಸ ಹೋಗಿದ್ದು, ಇದೀಗ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.ದೇವೇಂದ್ರಪ್ಪ ಉಜರತ್ತಿ ಎಂಬ ರೈತ ತಮಗೆ ಅನ್ಯಾಯವಾಗಿದ್ದು ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಹಾಗೂ ಅವರ ಆಪ್ತ ಭೋಗೇಶ್ ನಾಯಕರಿಂದ ತಮಗೆ ಅನ್ಯಾಯ ಆಗಿರುವುದಾಗಿ ರೈತ ಹೇಳಿದ್ದಾರೆ.
ಕಳೆದ ವರ್ಷ ಭತ್ತ ಖರೀದಿಸಿ 25 ಲಕ್ಷ ರೂಪಾಯಿ ಹಣ ಕೊಡದೇ ಭೋಗೇಶ್​ ತಮಗೆ ಮೋಸ ಮಾಡಿದ್ದು, ಇದರಲ್ಲಿ ಶಾಸಕರ ಕುಮ್ಮಕ್ಕೂ ಇದೆ ಎನ್ನುವುದು ದೇವೇಂದ್ರಪ್ಪ ಅವರ ಆರೋಪ. ಭತ್ತ ಖರೀದಿಸುವಾಗ ಚೆಕ್ ಹಾಗೂ ಅಗ್ರಿಮೆಂಟ್ ಕಾಪಿಯನ್ನು ನೀಡಲಾಗಿದೆ. ಆದರೆ ಭೋಗೇಶ್​ ನಾಯಕ ಕೊಟ್ಟಿರುವ ಚೆಕ್ ಕೂಡ ಬೌನ್ಸ್ ಆಗಿದೆ.
ದುಡ್ಡು ಕೊಡದೇ ಇದ್ದಾಗ ಭೋಗೇಶ್ ನಾಯಕನನ್ನು ರೈತ ದೇವೇಂದ್ರಪ್ಪ ತರಾಟೆಗೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಮಧ್ಯ ಪ್ರವೇಶ ಮಾಡಿದ್ದ ಶಾಸಕ ಬಸವರಾಜ್​ ಅವರು, ಮಧ್ಯಸ್ಥಿಕೆ ವಹಿಸಿ ತಾವು ಹಣ ಕೊಡಿಸುವುದಾಗಿ ಹೇಳಿದ್ದಾರೆ. ಆದರೆ ರೈತನಿಗೆ ಮಾತ್ರ ದುಡ್ಡು ಬರಲಿಲ್ಲ. ಈ ವೇಳೆ ರೈತ ಶಾಸಕರಿಗೆ ಕರೆ ಮಾಡಿದಾಗ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಕೈಎತ್ತಿದ್ದಾರೆ. ಯಾರ ಕಡೆ ಭತ್ತ ಮಾರಿದ್ದೀಯಾ ಅವರನ್ನೇ ಕೇಳು ಎಂದು ನಿರ್ಲಕ್ಷ್ಯದ ಮಾತನಾಡಿದ್ದಾರೆ. ಇನ್ನು ಭೋಗೇಶ್​ ಅವರನ್ನು ಕೇಳಿದರೆ ನಾನು ಶಾಸಕನ ಆಪ್ತ. ನನಗೆ ಏನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ.
25 ಲಕ್ಷ ರೂಪಾಯಿ ಸಿಗದೇ ಹೋದರೆ ವಿಷ ಕುಡಿದು ಶಾಸಕ ಮತ್ತು ಶಾಸಕನ ಆಪ್ತನ ಹೆಸರು ಬರೆದು ಸಾಯುವುದಾಗಿ ರೈತ ದೇವೇಂದ್ರಪ್ಪ ಹೇಳುತ್ತಿದ್ದಾರೆ. ಬಸವರಾಜ್ ದಡೇಸಗೂರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ದೇವರ ಮನೆಯಲ್ಲಿ ಹೀರೋಯಿನ್​: ದಿನವೂ ಈಕೆಗೆ ಪೂಜೆ, ಪುನಸ್ಕಾರ- ನಟಿಯೂ ಫುಲ್​ ಖುಷ್​!

ಶಿಲ್ಪಾ ಜತೆ ಸಂಬಂಧ ಚೆನ್ನಾಗಿಲ್ಲ ಎಂದು ನನಗೆ ಏನೇನೋ ಮಾಡಿದರು: ಕುಂದ್ರಾ ವಿರುದ್ಧ ನಟಿಯಿಂದ ಕೇಸ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + thirteen =
Remember me
