ಬೆಂಗಳೂರು:ರಾಜ್ಯ ಸರ್ಕಾರದ ಕೂತುಹಲಕಾರಿ ಬೆಳವಣಿಯಲ್ಲಿ ಹೆಸರು ಕೇಳಿ ಬಂದಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್​ ನೀಡಿರುವ ಅನಾಮಧೇಯ ಕರೆಗಳ ಮತ್ತು ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆ ಚುರುಕೊಂಡಿದೆ.
ಕೇಂದ್ರ ವಿಭಾಗ ಡಿಸಿಪಿ ಎಂ.ಎನ್​.ಅನುಚೇತ್​ ನೇತೃತ್ವದಲ್ಲಿ ಕಬ್ಬನ್​ ಪಾರ್ಕ್​ ಉಪ ವಿಭಾಗ ಎಸಿಪಿ ಯತಿರಾಜ್​ಗೆ ತನಿಖೆ ಜವಾಬ್ದಾರಿ ವಹಿಸಿದ್ದಾರೆ. ಆದರೆ, ಜೆಡಿಎಸ್​ ಮತ್ತು ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೇಶ ವ್ಯಾಪಿ ಸದ್ದು ಮಾಡಿದ್ದ ಫೋನ್​ ಕದ್ದಾಲಿಕೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಎಸಿಪಿ ಯತಿರಾಜ್​, ಸಿಬಿಐ ತನಿಖೆಗೆ ಗುರಿಯಾಗಿದ್ದರು. ಇದೀಗ ಮತ್ತೆ ಸರ್ಕಾರದ ವಿರುದ್ಧ ಕೇಳಿಬಂದಿರುವ ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಅದೇ ಎಸಿಪಿಗೆ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಶಾಸಕ ಅರವಿಂದ್​ ಬೆಲ್ಲದ್​, ಇತ್ತೀಚೆಗೆ ಡಿಜಿಪಿ ಪ್ರವಿಣ್​ ಸೂದ್​ ಅವರನ್ನು ಭೇಟಿ ಮಾಡಿ ಅಪರಿಚಿತರು ಕರೆ ಮಾಡುತ್ತಿದ್ದಾರೆ. ಮೂರ್ನಾಲ್ಕು ಕರೆಗಳು ಬಂದಾಗ ಫೋನ್​ ಕದ್ದಾಲಿಕೆ ಆಗುತ್ತಿರುವ ಅನುಮಾನ ಹುಟ್ಟುಕೊಂಡಿದೆ. ಈ ಕುರಿತು ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದರು. ಈ ದೂರಿನ ಪ್ರತಿಯನ್ನು ಡಿಜಿಪಿ ಪ್ರವಿಣ್​ ಸೂದ್​, ವರ್ಗಾವಣೆ ಮಾಡಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಲು ಕಬ್ಬನ್​ ಪಾರ್ಕ್​ ಉಪವಿಭಾಗ ಎಸಿಪಿ ಯತಿರಾಜ್​ಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಕಮಲ್​ ಪಂತ್​, ಶಾಸಕ ಅರವಿಂದ್​ ಬೆಲ್ಲದ್​ ಅವರ ಪತ್ರದಲ್ಲಿ ಅಸ್ಪಷ್ಟವಾಗಿದೆ. ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಬೇಕಾಗಿದೆ. ಅದಕ್ಕಾಗಿ ಅವರ ಭೇಟಿಗೆ ಎಸಿಪಿ ಯತಿರಾಜ್​ ಪ್ರಯತ್ನ ಪಡುತ್ತಿದ್ದಾರೆ. ಕೂಲಂಕುಷವಾಗಿ ಶಾಸಕರಿಂದ ಹೇಳಿಕೆ ಪಡೆದ ಮೇಲೆ ಯಾವ ಆಯಾಮದಲ್ಲಿ ತನಿಖೆ ನಡೆಸಬೇಕೆಂಬುದು ನಿರ್ಧರ ಮಾಡಲಾಗುತ್ತದೆ ಎಂದು ಕಮಲ್​ ಪಂತ್​ ತಿಳಿಸಿದ್ದಾರೆ.
ರಾತ್ರೋರಾತ್ರಿ ಫೇಮಸ್‌ ಆಗಿದ್ದ ‘ಬಾಬಾ ಕಾ ಡಾಬಾ’ ಮಾಲೀಕ ಆತ್ಮಹತ್ಯೆಗೆ ಯತ್ನ: ಪರಿಸ್ಥಿತಿ ಗಂಭೀರ

ಇಬ್ಬರನ್ನು ಒಟ್ಟಿಗೇ ಲವ್‌ ಮಾಡಿದಾತನಿಗೆ ಡಬಲ್‌ ಧಮಾಕಾ- ಅತ್ತ ಒಬ್ಬಳು, ಇತ್ತ ಇನ್ನೊಬ್ಬಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 7 =
Remember me
