ಬೆಂಗಳೂರು:ಜಮೀನಿನಲ್ಲಿ ಲಿಯೋ ಕಂಪನಿ ಸಿಗ್ನಲ್​ ಟವರ್​ ಅಳವಡಿಸಿ 60 ಲಕ್ಷ ರೂ. ಮುಂಗಡ, 50 ಸಾವಿರ ರೂ. ಬಾಡಿಗೆ ಆಮಿಷವೊಡ್ಡಿ ಭೂ ಮಾಲೀಕನಿಗೇ ಸೈಬರ್​ ಕಳ್ಳರು 2.21 ಲಕ್ಷ ರೂ. ವಂಚನೆ ಮಾಡಿದ್ದಾರೆ.
ವಸಂತನಗರದ ವೆಂಕಟರಾವ್​ ಮೋಸಕ್ಕೆ ಒಳಗಾದವರು. ಏಪ್ರಿಲ್​ 7 ರಂದು ಮೊಬೈಲ್​ಗೆ ಬಂದ ಸಂದೇಶದಲ್ಲಿ ಜಿಯೋ ಕಂಪನಿ ಸಿಗ್ನಲ್​ ಟವರ್​ ಅಳವಡಿಸಲಾಗುತ್ತದೆ. ಮುಂಗಡವಾಗಿ 60 ಲಕ್ಷ ರೂ. ಮತ್ತು ತಿಂಗಳಿಗೆ 50 ಸಾವಿರ ರೂ. ಬಾಡಿಗೆ ಕೊಡುವುದಾಗಿ ಉಲ್ಲೇಖಿಸಲಾಗಿತ್ತು. ಇದನ್ನು ಗಮನಿಸಿದ ವೆಂಕಟರಾವ್​, ಎಸ್​ಎಂಎಸ್​ನಲ್ಲಿದ್ದ ಮೊಬೈಲ್​ ನಂಬರ್​ಗೆ ಕರೆ ಮಾಡಿ ಟವರ್​ ಅಳವಡಿಸಲು ಒಪ್ಪಿಗೆ ಸೂಚಿಸಿದ್ದರು.
ಸ್ವಲ್ಪ ಸಮಯದ ಬಳಿಕ ವೆಂಕಟರಾವ್​ಗೆ ಮತ್ತೊಬ್ಬ ಕರೆ ಮಾಡಿ ಅವರ ಆಧಾರ್​ ಕಾರ್ಡ್​, ವೋಟರ್​ ಐಡಿ, ಪಹಣಿ ಎಲ್ಲವನ್ನು ಮೊಬೈಲ್​ನಲ್ಲಿ ಫೋಟೋ ತರಿಸಿಕೊಂಡಿದ್ದ. ಆನಂತರ ಟವರ್​ ಅಳವಡಿಸುವುದಾಗಿ ನಂಬಿಸಿ ಕಂಪನಿ ಕಡೆಯಿಂದ ಕರಾರು ಪತ್ತ ಮಾಡಿಸಬೇಕೆಂದು ಹೇಳಿ ಹಂತ ಹಂತವಾಗಿ 2.21 ಲಕ್ಷ ರೂ. ತನ್ನ ಬ್ಯಾಂಕ್​ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಪದೇ ಪದೆ ಹಣ ಕೇಳಿದಾಗ ಅನುಮಾನ ಬಂದು ವಾಪಸ್​ ಹಣ ಕೇಳಿದ್ದಾಗ ವಂಚಕರು ಮೊಬೈಲ್​ ಸಂಪರ್ಕ ಕಡಿತ ಮಾಡಿದ್ದಾರೆ. ಕೊನೆಗೆ ದಿಕ್ಕು ತೋಚದೆ ವೆಂಕಟರಾವ್​, ಠಾಣೆಗೆ ಬಂದು ದೂರು ನೀಡಿದ್ದಾರೆ. ಇದರ ಅನ್ವಯ ಆರೋಪಿಗಳ ವಿರುದ್ಧ ಎ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಕೇಂದ್ರ ವಿಭಾಗ ಸಿಇಎನ್​ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹೊಳೆನರಸೀಪುರದ ಛತ್ರಕ್ಕೆ ಬಂದ ಶಿರಸ್ತೇದಾರ್‌- ಮದುಮಕ್ಕಳಿಗೆ ಗಿಫ್ಟ್‌ ಬದಲು ಕೊಟ್ಟರು ದಂಡದ ಬಿಲ್‌!

ಮೆಸೇಜ್‌ ನೋಡಿ ಮರುಳಾಗಿ ಲವ್‌ ಮಾಡೋಕೆ ಹೋಗಿದ್ಯಾ?

ಕರೊನಾ ಕರಾಳತೆ: ಹೆಣದ ರಾಶಿಯಲ್ಲಿ ವೈದ್ಯರ ಹಣದ ಹುಡುಕಾಟ- 9 ಲಕ್ಷ ರೂ ಕೊಟ್ಟರೂ ಮತ್ತಷ್ಟು ಆಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
