ಬೆಂಗಳೂರು:ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ಮತ್ತು ಮೈಸೂರಿಗೆ ಇಂದು (ಸೋಮವಾರ) ಬರಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಮಾರ್ಗಗಳಲ್ಲಿ ಇಂದು ಮಧ್ಯಾಹ್ನ 12:30 ರಿಂದ 3:00 ಗಂಟೆಯವರೆಗೆ ಸಂಚಾರ ನಿಷೇಧ ಮಾಡಲಾಗಿದ್ದು, ಪಾರ್ಕಿಂಗ್​ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅವುಗಳ ಮಾಹಿತಿ ಇಂತಿದೆ:
ಸಂಚಾರ ನಿಷೇಧ ಮಾಡಿರುವ ರಸ್ತೆಗಳು* ತುಮಕೂರು ರಸ್ತೆಯ ನಗರದ ಒಳಭಾಗಕ್ಕೆ ಬರುವ ಎಲ್ಲಾ ರೀತಿಯ ಭಾರಿ ವಾಹನಗಳಿಗೆ ನಿಷೇಧ* ಮೈಸೂರು ರಸ್ತೆ ಮತ್ತು ನೈಸ್ ಬ್ರಿಡ್ಜ್ ಕಡೆಯಿಂದ ಕೆಂಗೇರಿ, ಉತ್ತರಹಳ್ಳಿ ರಸ್ತೆ ಕಡೆಯಿಂದ ಕೆಂಗೇರಿ, ಮೈಸೂರು ಕಡೆಗೆ ನಿಷೇಧ* ನಾಗರಭಾವಿ ಸರ್ಕಲ್‍ನಿಂದ ಜ್ಞಾನಭಾರತಿ ಆಡ್ಮಿನ್ ಬ್ಲಾಕ್ ಜಂಕ್ಷನ್‍ವರೆಗೆ* ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್‍ನಿಂದ ಯುನಿವರ್ಸಿಟಿ ಕಡೆಗೆ ಹಳೇ ರಿಂಗ್ ರಸ್ತೆ ಉಲ್ಲಾಳ ಜಂಕ್ಷನ್​ನಿಂದ ಯುನಿವರ್ಸಿಟಿ ಕಡೆಗೆ* ಕೆಂಗುಂಟೆ ಜಂಕ್ಷನ್ – ನಮ್ಮೂರ ತಿಂಡಿ – ನಾಗರಭಾವಿ ರಿಂಗ್ ರಸ್ತೆ ಕಡೆಗೆ
ಪರ್ಯಾಯ ರಸ್ತೆಗಳು* ನೈಸ್ ರಸ್ತೆ ಮುಖಾಂತರ ನೈಸ್ ಕಚೇರಿ– ಸೋಂಪುರ ಟೋಲ್ ಉತ್ತರಹಳ್ಳಿ ಮುಖ್ಯ ರಸ್ತೆ – ಸೋಂಪುರ ಟೋಲ್ ಮುಖಾಂತರ ಕೆಂಗೇರಿ ಮತ್ತು ಮೈಸೂರು ಕಡೆಗೆ ಅವಕಾಶ* ನಾಗರಭಾವಿ ಸರ್ಕಲ್-ನಮ್ಮೂರ ತಿಂಡಿ ಹೋಟೆಲ್-ಅಂಬೇಡ್ಕರ್ ಕಾಲೇಜ್ ಜಂಕ್ಷನ್- ಜ್ಞಾನಭಾರತಿ ಗೇಟ್ ಕಡೆಗೆ ಅವಕಾಶ* ಆರ್.ಆರ್.ಆರ್ಚ್, ನಾಯಂಡಹಳ್ಳಿ ಜಂಕ್ಷನ್ – ನಾಗರಭಾವಿ ಕಡೆಗೆ ಅವಕಾಶ* ತುಮಕೂರು ಕಡೆಯಿಂದ ಯಲಹಂಕ, ಕೋಲಾರ, ಹೈದರಬಾದ್ ಕಡೆಗೆ ಸಂಚರಿಸುವ ವಾಹನಗಳು ದಾಬಸ್ ಪೇಟೆಯಲ್ಲಿ ಎಡತಿರುವು ಪಡೆದು ದೊಡ್ಡಬಳ್ಳಾಪುರ ಮುಖ್ಯರಸ್ತೆ ಮುಖಾಂತರ ಅವಕಾಶ
ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು* ಕೊಮ್ಮಘಟ್ಟ ಮುಖ್ಯ ರಸ್ತೆ (ಶಂಕರ್​ನಾಗ್ ಸರ್ಕಲ್ ನಿಂದ ರಾಬಿನ್ ಥಿಯೇಟರ್​ವರೆಗೆ* ನಾಗರಭಾವಿ ಸರ್ಕಲ್​ನಿಂದ ಜ್ಞಾನಭಾರತಿ ಆಡೀನ್ ಬ್ಲಾಕ್ ಜಂಕ್ಷನ್​ವರೆಗೆ* ಯುನಿವರ್ಸಿಟಿ ಒಳಭಾಗದ ಮುಖ್ಯರಸ್ತೆ, ಲೇಡೀಸ್ ಹಾಸ್ಟಲ್ ರಸ್ತೆ ಮತ್ತು ಗಾಂಧಿ ಮಾರ್ಗ್ ರಸ್ತೆ ಬಿ. ಮೈಸೂರು ರಸ್ತೆ ಜ್ಞಾನಭಾರತಿ ಜಂಕ್ಷನ್ ನಿಂದ ಜೈರಾಮ್ ದಾಸ್ ಜಂಕ್ಷನ್ ವರೆಗೆ
ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ* ಕಾಳಿಕಾಂಬ ರಸ್ತೆ ಮತ್ತು ಪಾರ್ಕ್ ರಸ್ತೆ* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್ ರಸ್ತೆವರೆಗೆ* 6ನೇ ಮುಖ್ಯರಸ್ತೆ (ಕಾಳಿಕಾಂಬ ರಸ್ತೆ ಮತ್ತು ಪಾರ್ಕ್ ರಸ್ತೆ)* ಐಸಕ್ ಮುಖ್ಯರಸ್ತೆ ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ಸ್ಟಾಪ್ ನಿಂದ ಐಸಾಕ್​ವರೆಗೆ
ಬೆಂಗಳೂರು, ಮೈಸೂರಿಗೆ ಪ್ರಧಾನಿ ಮೋದಿ: ಕೆಲ ಕಾಲೇಜುಗಳಿಗೆ ರಜೆ ಘೋಷಣೆ- ಇಲ್ಲಿದೆ ವಿವರ…

ಕಮಲಕ್ಕೆ ಬೂಸ್ಟರ್ ಡೋಸ್; ಪ್ರಧಾನಿ ಮೋದಿ ಭೇಟಿ, ವಿವಿಧ ಯೋಜನೆಗಳಿಗೆ ಶಿಲಾನ್ಯಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
