ಹಾವೇರಿ: ಜಿಲ್ಲಾ ಪಂಚಾಯಿತಿಯ ಟಿಕೆಟ್‌ಗಾಗಿ ಎರಡು ಮಂಗಗಳ ತಲೆಗಳನ್ನು ಕಟ್‌ ಮಾಡಿ ಹೂತು ಹಾಕಿರುವ ಭಯಾನಕ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಪಲಾಪುರ ಗ್ರಾಮದಲ್ಲಿ ನಡೆದಿದೆ.ಲಾಕಡೌನ್ ವೇಳೆ ಬ್ಯಾಡಗಿಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ರುಂಡ ಮಂಡ ಮಾಡಿ ಆಂಜನೇಯ ದೇವಸ್ಥಾನದಲ್ಲಿ ನೇತು ಹಾಕಲಾಗಿದೆ. ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
2 ಮಂಗಗಳ ರುಂಡ ಕತ್ತರಿಸಿ, ಹುಗಿದು ಪೂಜೆ ಮಾಡಿದ್ದ ಗ್ರಾಮದ ರಾಜಕೀಯ ಧುರೀಣನೊಬ್ಬ, ರಾಜಕೀಯ ಉನ್ನತ ಭವಿಷ್ಯಕ್ಕಾಗಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ.
ಹೀಗೆ ಮಾಡಿದರೆ ಟಿಕೆಟ್‌ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್‌ ಸಿಗುತ್ತದೆ ಎಂದು ವಾಮಾಚಾರಿಯೊಬ್ಬ ಈತನಿಗೆ ಹೇಳಿರುವ ಕಾರಣ, ಇಂಥ ಕೃತ್ಯ ಎಸಗಿದ್ದಾನೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಈ ಘಟನೆಯ ಕುರಿತು ಸತ್ಯಾಂಶ ಹೇಳಲು ಗ್ರಾಮಸ್ಥರ ಭಯ ಪಡುತ್ತಿದ್ದಾರೆ. ಸದ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ1972 ಅಡಿ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಮಂಗಗಳನ್ನು ಕೊಂದವ ಮಾತ್ರವಲ್ಲದೇ ಅದರ ಹಿಂದೆ ಇರುವವರನ್ನು ಕೂಡ ಸುಮ್ಮನೇ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಯಸ್ಸಾದರೂ ಮದುವೆಯಾಗಿಲ್ಲವೆಂದು ಹೆತ್ತವರಿಂದಲೇ ಸಿನಿಮಾ ನಿರ್ದೇಶಕನ ಬರ್ಬರ ಹತ್ಯೆ- ದೇಹ ಪೀಸ್‌ ಪೀಸ್‌!

‘ಕರೊನಾದಿಂದ ಮೃತಪಟ್ಟು ಪ್ರಮಾಣಪತ್ರದಲ್ಲಿ ಸುಳ್ಳು ಬರೆದ್ರೆ ಕುಟುಂಬದವರು ಸುಮ್ನೆ ಇರ್ತಾರಾ? ಗೊಂದಲ ಯಾಕೆ?’

ಕೋವಿಡ್‌ಗೆ ಪರಿಣಾಮಕಾರಿಯಾದ ಕೊವ್ಯಾಕ್ಸಿನ್‌ಗೆ ಅನುಮೋದನೆ ಅಡ್ಡಿ! ಆರೋಗ್ಯ ಸಂಸ್ಥೆಗೆ ಕೇಂದ್ರದ ದೌಡು

ಶಾಕಿಂಗ್‌! ಬ್ಲ್ಯಾಕ್‌ ಫಂಗಸ್‌ಗಿಂತಲೂ ಭೀಕರ ವೈಟ್‌ ಫಂಗಸ್‌ ಪತ್ತೆ- ಬಿಹಾರದ ನಾಲ್ವರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
