ನನಗೆ ಎರಡು ವರ್ಷದ ಮಗಳು ಇದ್ದಾಳೆ. ನನಗೆ ನನ್ನ ಗಂಡನ ಕಾಟಕ್ಕಿಂತ ಅತ್ತೆ ಕಾಟ ಹೆಚ್ಚಾಗಿದೆ. ಕೂತರೆ ನಿಂತರೆ ನನ್ನ ಮೇಲೆ ಜೋರು ಮಾಡುತ್ತಾರೆ. ಗಂಟೆ ಗಟ್ಟಲೆ ನನ್ನನ್ನು ಮುಂದೆ ಕೂರಿಸಿಕೊಂಡು ಹೇಳಿದ್ದನ್ನೇ ಹೇಳುತ್ತಿರುತ್ತಾರೆ. ನಿನಗೆ ಪೌರುಷವಿದ್ದರೆ ಗಂಡು ಮಗುವನ್ನು ಹೆತ್ತು ತೋರಿಸು ಎಂದು ಹೇಳುತ್ತಾರೆ.
ಕನಿಷ್ಠ ಎಂದರೆ ಐದು ಆರು ಗಂಟೆ ನಮ್ಮ ಅತ್ತೆ ಕೆಟ್ಟ ಮಾತನ್ನು ನಾನು ಕೇಳಬೇಕು. ಒಂದು ಲೋಟ ಕೆಳಗೆ ಇಟ್ಟರೂ ಮೇಲೆ ಇಟ್ಟರೂ ತಪ್ಪು. ನನ್ನ ಗಂಡನೂ ಅವರಿಗೆ ಎದುರು ಹೇಳುವುದಿಲ್ಲ. ನಮ್ಮ ತಾಯಿ ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರು ಎಂದು ನನ್ನ ಗಂಡ ಹೇಳುತ್ತಾರೆ.
ನಾನು ಯಾವ ರೀತಿ ತಲೆ ಬಾಚಿಕೊಳ್ಳಬೇಕು, ಯಾವರೀತಿ ಡ್ರೆಸ್‌ ಮಾಡಿಕೊಳ್ಳಬೇಕು , ಯಾವ ಕುಂಕುಮ ಇಟ್ಟುಕೊಳ್ಳ ಬೇಕು ಎಲ್ಲವೂ ನಮ್ಮ ಮಾವನೇ ಹೇಳುವುದು. ನಮ್ಮ ಮಾವನೂ ಅದಕ್ಕೆ ಎದುರಾಡುವುದಿಲ್ಲ. ನಮ್ಮದು ವ್ಯಾಪಾರದ ಕುಟುಂಬ , ಮನೆಯ ಯಜಮಾನ ನಿಮ್ಮ ಮಾವ. ಅವರ ಇಷ್ಟವೇ ಇಲ್ಲಿ ನಡೆಯುವುದು ಎನ್ನುತ್ತಾರೆ. ಮಗುವನ್ನು ಒಂದು ನಿಮಿಷವೂ ನನಗೆ ಕೊಡುವುದಿಲ್ಲ. ಅದು ಪೂರ್ತಿ ನಿದ್ದೆ ಮಾಡಿದಮೇಲೆ ನನ್ನ ಹತ್ತಿರ ಹಾಸಿಗೆಗೆ ಮಗುವನ್ನು ಹಾಕಲು ಕೊಡುತ್ತಾರೆ. ಒಂದೇ ಮನೆಯಲ್ಲಿಯೇ ಇದ್ದರೂ ನನಗೆ ನನ್ನ ಮಗುವಿನ ಹತ್ತಿರ ಬಾಂಧವ್ಯವೇ ಇಲ್ಲದಂತೆ ಆಗಿದೆ. ಮಗುವಿಗೆ ಸ್ನಾನ ಮಾಡಿಸಲೂ ನನಗೆ ಬಿಡುವುದಿಲ್ಲ. ಕೆಲಸದವರ ಹತ್ತಿರ ಮಾಡಿಸುತ್ತಾರೆ. ʼ ಬೇಕಿದ್ದರೆ ಮಗುವನ್ನು ಬಿಟ್ಟು ನಿಮ್ಮ ತವರಿಗೆ ಹೋಗು ಅಥವಾ ಸಾಯಿ ಎನ್ನುತ್ತಾರೆ.ʼ ವಿದ್ಯಾವಂತಳಾದ ನಾನು ಈಗ ಹುಚ್ಚಿಯಂತೆ ಆಗಿದ್ದೇನೆ. ನನಗೆ ಸಲಹೆ ಕೊಟ್ಟು ಸಹಾಯ ಮಾಡಿ.
ಉತ್ತರ:ನಿಮ್ಮ ಪರಿಸ್ಥಿತಿ ಅರ್ಥ ಆಗುತ್ತಿದೆ. ನೀವು ಹೆದರ ಬೇಕಾಗಿಲ್ಲ. ಮಹಿಳಾ ಸಹಾಯವಾಣಿಯಲ್ಲಿ ದೂರುಕೊಡಿ. ಅವರು ನಿಮ್ಮ ಅತ್ತೆ, ನಿಮ್ಮ ಪತಿ ಮತ್ತು ಮಾವನ ಜೊತೆ ಕರೆಯಿಸಿ ಅವರಿಗೆ ಕೌನ್ಸೆಲಿಂಗ್‌ ಮಾಡುತ್ತಾರೆ. ಅಥವಾ ನಿಮ್ಮ ತಾಲ್ಲೂಕಿನ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ʼನಮ್ಮ ವಿವಾಹದಲ್ಲಿ ಕೆಲವು ವೈಮನಸ್ಯವಿದೆ. ಅದನ್ನು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ಪರಿಹರಿಸಿಕೊಡಿʼ ಎಂದು ಅರ್ಜಿ ಕೊಡಿ.
ಮಧ್ಯಸ್ಥಿಕೆ ಕೇಂದ್ರದವರು ನಿಮ್ಮ ಎಲ್ಲರನ್ನು ಕರೆಯಿಸಿ ಸಮಸ್ಯೆ ಪರಿಹಾರವಾಗಲು ಸಹಾಯ ಮಾಡುತ್ತಾರೆ. ಆಗಲೂ ತೊಂದರೆ ಮುಂದುವರೆದರೆ, ನೀವು ಧೈರ್ಯವಾಗಿ ಕೌಟುಂಬ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾಯ್ದೆಯ ಕೆಳಗೆ ನಿಮ್ಮ ಮಾವನವರನ್ನೂ ಪಾರ್ಟಿ ಮಾಡಿ ಪ್ರಕರಣವನ್ನು ದಾಖಲು ಮಾಡಿ.
ನೀವು ಹೇಳಿದ ವಿಷಯಗಳೆಲ್ಲ ಕೌಟುಂಬಿಕ ಹಿಂಸೆಯ ಪರಿವಿಧಿಗೆ ಬರುತ್ತದೆ. ನಿಮಗೆ ನ್ಯಾಯ ಸಿಗುತ್ತದೆ, ನೀವು ಹೆದರಬೇಕಾಗಿಲ್ಲ. ಮಗುವನ್ನು ನಿಮ್ಮಂದ ಬೇರೆ ಮಾಡಬಾರದು ಎನ್ನುವ ಆದೇಶವನ್ನೂ ನೀವು ಪಡೆಯಬಹುದು.
ಅವಳ ಗಂಡ ಇವಳಿಗೆ, ಇವಳ ಗಂಡ ಅವಳಿಗೆ: ಕರೆಂಟ್‌ ಹೋದಾಗ ಆಗೋಯ್ತು ಎಡವಟ್ಟು…

ವಿವಿಧ ಪದವೀಧರರಿಗೆ ಕೆನರಾ ಬ್ಯಾಂಕ್​ನಲ್ಲಿವೆ ಉದ್ಯೋಗಾವಕಾಶ- ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nineteen =
Remember me
