ಕೊಪ್ಪಳ:ಮಕ್ಕಳು ಕೆಟ್ಟವರಾಗಿರಬಹುದು, ಆದರೆ ತಾಯಿ ಕೆಟ್ಟವಳಾಗಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ಘಟನೆಯಲ್ಲಿ ಖುದ್ದು ಹೆತ್ತಾಕೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಅದೂ ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕಾಗಿ!
ಇಂಥದ್ದೊಂದು ಘಟನೆ ನಡೆದಿರುವುದು ಕೊಪ್ಪಳ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಮ್ಯಾದಾರಡೊಕ್ಕಿ ಗ್ರಾಮದಲ್ಲಿ. 22 ವರ್ಷದ ಬಸವರಾಜ್ ಎಂಬಾತ ಕೊಲೆಯಾದ ದುರ್ದೈವಿ. ಗ್ರಾಮದ ಪಂಚಾಯ್ತಿ ಸದಸ್ಯ ಅಮರಪ್ಪ ಕಂದಗಲ್ ಎಂಬಾತನ ಜತೆ ಈತನ ತಾಯಿ ಅಮರಮ್ಮ ಅಕ್ರಮ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ. ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕಾಗಿ ತನ್ನ ಹಿರಿಯ ಮಗನ ಜತೆಗೂಡಿ ಈ ಕೊಲೆ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬಸವರಾಜ್. ತಾಯಿ ಹಾಗೂ ಸೋದರನೊಂದಿಗೆ ವಾಸವಾಗಿದ್ದನು. ಜನವರಿ 16ರಂದು ಮನೆಯಲ್ಲಿ ಅಮರಪ್ಪ ಮತ್ತು ಅಮರಮ್ಮ ಜತೆಯಾಗಿರೋದನ್ನು ಬಸವರಾಜ್ ನೋಡಿದ್ದಾನೆ. ಅದನ್ನು ಬಸವರಾಜ್ ಪ್ರಶ್ನೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಅಮರಪ್ಪನ ಸಹಾಯದಿಂದ ಅಮರಮ್ಮ ಮಗನ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.
ನಂತರ ಹಿರಿಯ ಮಗನ ಸಹಾಯದಿಂದ ಬಸವರಾಜ್ ನ ಮೃತದೇಹ ಮುಚ್ಚಿ ಹಾಕಿದ್ದಾರೆ. ಆದರೆ ಬೆಳಕಿಗೆ ಬಂದಿದ್ದು, ಇಂದು ಮುಚ್ಚಿದ್ದ ಮೃತದೇಹ ಹೊರ ತೆಗೆಯುವ ಸಾಧ್ಯತೆಗಳಿವೆ. ತಾವರೆಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.
ಕೊಲೆ ಮಾಡಿ ತಣ್ಣಗಿದ್ದ ಮಂಡ್ಯದ ಮಾಜಿ ಶಾಸಕನ ಪುತ್ರ ಅರೆಸ್ಟ್‌: ಸಿಪಿಐ ಜತೆ 10 ಲಕ್ಷ ರೂ. ಡೀಲ್‌ ಮಾಡಿದ್ರೂ ಸಿಕ್ಕಿಬಿದ್ದದ್ದೇ ರೋಚಕ!

ಪ್ರಧಾನಿ ಅಮ್ಮನಿಗೂ, ಕಾಶಿ ವಿಶ್ವನಾಥನ ಗರ್ಭಗುಡಿಯ ಚಿನ್ನಕ್ಕೂ ಇದೆ ನಂಟು: ಖುದ್ದು ಅಚ್ಚರಿಗೊಂಡ ಮೋದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + one =
Remember me
