ಬೆಂಗಳೂರು:ಬಾದಾಮಿಯಲ್ಲಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ಮಾಡಿದ್ದರು. ಆಗಾಗ್ಗೆ ಅವರು ಕರೆ ಮಾಡುತ್ತಿರುತ್ತಾರೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಹೇಳುವ ಮೂಲಕ ಕುತೂಹಲ ಕೆರಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮದವರಿಗೆ‌ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ರಾಜಕೀಯ ವಿಚಾರಕ್ಕಾಗಿ ಎಂದೂ ಕರೆ ಮಾಡಿಲ್ಲ. ಬಾದಾಮಿಯಿಂದ ನಿನ್ನೆ ಕರೆ ಮಾಡಿದಾಗಲೂ ಗುಳೇದಗುಡ್ಡ ಪುರಸಭೆಗೆ ಇಂಜಿನಿಯರ್ ಗಳ ಹುದ್ದೆ ಭರ್ತಿ ಸಂಬಂಧ ಮಾತನಾಡಿ ಕೊರತೆ ನೀಗಿಸಲು ಸಲಹೆ ನೀಡಿದರು.
ನಮ್ಮ ಫ್ರೆಂಡ್ಸ್ ಏನು ಮಾಡ್ತಾರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅಂತರಾಳದಲ್ಲಿ ಏನಿದೆ ನನಗಂತೂ ಗೊತ್ತಿಲ್ಲ. ಅವರು ಬಹಳ ಸಲ ಫೋನ್ ಮಾಡಿದ್ದಾರೆ. ಆದರೆ ರಾಜಕೀಯವಾಗಿ ಒಂದೇ ಒಂದು ಸಲ ಮಾತಾಡಿಲ್ಲ. ನಾನು ದೇವರ ಮೇಲೆ ಸತ್ಯ ಹಾಕಿ ಹೇಳಬೇಕು, ಒಂದೇ ಒಂದು ಬಾರಿಯೂ ಸಿದ್ದರಾಮಯ್ಯ ರಾಜಕೀಯ ನನ್ನ ಹತ್ತಿರ ಮಾತಾಡಿಲ್ಲ ಎಂದು ಎಂಟಿಬಿ ನಾಗರಾಜ್ ಪುನರುಚ್ವರಿಸಿದರು.
ಜಿಲ್ಲೆಯಲ್ಲಿ ಮುಂದೆ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಇದೆ. ಹೀಗಾಗಿ ನಮ್ಮ ಜಿಲ್ಲೆಯಲ್ಲೇ ಕೆಲಸ ಮಾಡಬೇಕು ಎನ್ನುವ ಆಸೆಯಿತ್ತು. ಆದರೆ ವರಿಷ್ಟರು ತೆಗೆದುಕೊಂಡ ನಿರ್ಧಾರವನ್ನು ನಾವು ಒಪ್ಪಿಕೊಳ್ಳಬೇಕು ಎಂದರು.
ಯತ್ನಾಳ್‌ಗೆ ಟಾಂಗ್ವಲಸಿಗರು ಕೈ ಕೊಟ್ಟು ಹೋಗ್ತಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನಾನು ಅಧಿಕಾರಕ್ಕೆ ಅಂಡಿಕೊಂಡವನಲ್ಲ. ಮಂತ್ರಿ ಆಗಿ ಮುಂದುವರಿಸಿದರೂ ಸಂತೋಷ, ಬಿಟ್ಟರೂ ಸಂತೋಷ ಎಂದು ಟಾಂಗ್ ಕೊಟ್ಟರು.
ರಾಜಕೀಯಕ್ಕೆ ಪ್ರವೇಶಿಸಿದ ಬಳಿಕ ನಾಲ್ಕು ದಶಕಗಳಿಂದ ಕಾಂಗ್ರೆಸ್ ನಲ್ಲಿದ್ದೆ. ಆವತ್ತಿನ ಸಮಯ ಸಂದರ್ಭ, ಪರಿಸ್ಥಿತಿ ಅನಿವಾರ್ಯತೆಯಿಂದ ಪಕ್ಷ ಬಿಟ್ಟು ಬರಬೇಕಾಯಿತು. ನನಗೆ ಅಧಿಕಾರ ಮುಖ್ಯವಲ್ಲ. ನಾನು ಹೋಗೋದಾದರೆ ರಾಜಕೀಯ ಬಿಟ್ಟು ಮನೆಗೆ ಹೋಗ್ತೇನೆ ಹೊರತು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಜನ ಸೇವೆ ಮಾಡುವುದಕ್ಕೆ ಬಂದಿದ್ದೇನೆ ಹೊರತು ಅಧಿಕಾರಕ್ಕಲ್ಲ. ನಾನು ಯಾವುದಕ್ಕೂ ಆಸೆ ಪಡುವವನಲ್ಲ ಎಂದು ಎಂಟಿಬಿ ನಾಗರಾಜ್ ಪದೇ ಪದೆ ಹೇಳಿದರು.
VIDEO: ಪ್ರತಿಭಟನೆಯ ರಹಸ್ಯ ಬಿಚ್ಚಿಟ್ಟ ಟಿಕಾಯತ್‌! ಅವರ ಬಾಯಿಯಿಂದ್ಲೇ ‘ಸತ್ಯ’ ಕೇಳಿ ಅಭಿಮಾನಿಗಳಿಗೂ ಮುಜುಗರ

ಸಮಾಜಸೇವೆ ಚುನಾವಣಾ ಗಿಮಿಕ್‌ ಅಲ್ಲ ಎಂದಿದ್ದ ಸೋನು ಸೂದ್‌ ಮಾತು ತಪ್ಪಿದ್ರಾ? ‘ದೇವರು’ ಎಂದವರೇ ತಿರುಗಿಬಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 2 =
Remember me
