ಮಂಗಳೂರು:ವ್ಯಾಕ್ಸಿನ್ ಕೊಡಿಸುವುದಾಗಿ ರಾತ್ರೋರಾತ್ರಿ 85 ಮಹಿಳೆಯರ ಸಾಗಾಟ ಮಾಡಿರುವ ಭಯಾನಕ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಕಾರ್ನಾಡು ಗ್ರಾಮದಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ಇವರನ್ನು ಸಾಗಾಟ ಮಾಡುತ್ತಿರುವುದಾಗಿ ಆರೋಪಿಸಲಾಗಿದ್ದು, ಆಸ್ಪತ್ರೆ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಕಾಲೇಜಿನ ಬಸ್‌ನಲ್ಲಿ ಮಹಿಳೆಯರನ್ನು ತಮ್ಮ ಆಸ್ಪತ್ರೆಗೆ ಮ್ಯಾನೇಜರ್ ಕರೆದೊಯ್ಯುತ್ತಿದ್ದ. ಇನ್ಸ್‌ಪೆಕ್ಷನ್ ಮಾಡಬೇಕು ಎಂದು ಅವರಿಗೆ ಹೇಳಲಾಗಿತ್ತು. ತಡರಾತ್ರಿ ಯಾವ ವ್ಯಾಕ್ಸಿನ್ ಕೊಡುತ್ತೀರಿ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಊರಿನ ಬೇರೆ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಈ ಮ್ಯಾನೇಜರ್‌ ತಬ್ಬಿಬ್ಬಾಗಿದ್ದಾನೆ.
ವಿಚಾರಣೆ ವೇಳೆ ವ್ಯಾಕ್ಸಿನೇಷನ್ ನೆಪದಲ್ಲಿ ಮಹಿಳೆಯ ಸಾಗಾಟ ಮಾಡುತ್ತಿರುವುದು ಬಯಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಚಾಲಕ ಪ್ರವೀಣ್, ಆಸ್ಪತ್ರೆ ಮ್ಯಾನೇಜರ್ ನವಾಜ್ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾಂಚೂರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಎಂದು ಬರೆದಿರುವ ಬಸ್ಸಿನಲ್ಲಿ ಮಹಿಳೆಯರನ್ನು ಸಾಗಾಟ ಮಾಡುತ್ತಿರುವುದಾಗಿ ಆರೋಪಿಸಲಾಗಿದ್ದು, ಈ ಬಗ್ಗೆ ಸತ್ಯಾಸತ್ಯತೆ ತನಿಖೆಯಿಂದ ಬಯಲಾಗಬೇಕಿದೆ.
ಕೋವಿಡ್‌ ಟೆಸ್ಟ್‌ ಮಾಡ್ತಿದ್ದಂತೆಯೇ ಗೋಡೆ ಹಾರಿ ಎಸ್ಕೇಪ್‌: ಮಹಿಳೆಯರೂ ಹಿಂದೆ ಬಿದ್ದಿಲ್ಲ!

ಲಕ್ಷಾಂತರ ಜೀವ ಉಳಿಸಿದ ಆಂಧ್ರದ ಆಯುರ್ವೇದ ಔಷಧಕ್ಕೆ ರಾಜ್ಯದಲ್ಲಿ ‘ಅಗ್ನಿಪರೀಕ್ಷೆ’- ಬಿದ್ದಿದೆ ಬ್ರೇಕ್‌, ಸಿಎಂಗೆ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
