ಕಲಬುರಗಿ:ಹಿಜಾಬ್‌ ವಿವಾದದ ಕುರಿತು ಉದ್ದೇಶಪೂರ್ವಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಪ್ಪು ಮಾಹಿತಿ ನೀಡುತ್ತಾ ಕೋಮು ಸೌಹಾರ್ದವನ್ನು ಕದಡಿಸುವ ಪ್ರಯತ್ನ ಮಾಡಿ ಬಹುತೇಕ ಯಶಸ್ವಿಯಾಗಿದ್ದಾರೆ ಹಲವರು. ಪರಿಸ್ಥಿತಿ ಹೀಗಿರುವಾಗ ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡು ಮಾಡೋದಾಗಿ ಹೇಳಿದವರು ಕಲಬುರಗಿಯ ಕಾಂಗ್ರೆಸ್‌ ಮುಖಂಡ, ಜಿಲ್ಲಾ ಪಂಚಾಯತ್​ನ ಮಾಜಿ ಸದಸ್ಯ ಮುಕ್ರಂಖಾನ್.
ಪ್ರಚೋದನಕಾರಿ ಭಾಷಣ, ಕೋಮು ಸೌಹಾರ್ದತೆ ಕದಡುವ ನಿಟ್ಟಿನಲ್ಲಿ ಹೇಳಿಕೆ ಹಿಜಾಬ್‌ ಸಂಘರ್ಷವನ್ನು ಇನ್ನಷ್ಟು ಉಗ್ರ ಸ್ವರೂಪಕ್ಕೆ ತಳ್ಳುವ ಪ್ರಯತ್ನ ಮಾಡಿದ್ದ ಇವರ ಮೇಲೆ ಸೇಡಂ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ಫೆಬ್ರವರಿ 16 ರಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗ್ತಿದ್ದಂತೆಯೇ ಇವರು ಎಸ್ಕೇಪ್‌ ಆಗಿದ್ದರು.
ಮುಕ್ರಂಖಾನ್ ಹೇಳಿಕೆ ಖಂಡಿಸಿ ಹಿಂದೂಪರ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ಕಲಬುರಗಿ ಎಸ್ಪಿ ಇಶಾ ಪಂತ್ ಮುಕ್ರಂಖಾನ್‌ನನ್ನು ಬಂಧಿಸಲು ಕಾಲಾವಕಾಶ ಕೇಳುತ್ತಲೇ ಇದ್ದರೂ, ಪೊಲೀಸರು ಅವರನ್ನು ಬಂಧಿಸಿರಲಿಲ್ಲ. ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡಲಾಗಿತ್ತು.
ಅಂತೂ ಕೊನೆಗೂ ಇದೀಗ ಮುಕ್ರಂ ಖಾನ್​ನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಿಂದಲೇ ಖಾನ್​ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಅರ್ಜಿಯನ್ನು ವಜಾಗೊಳಿಸಿದೆ.  ಈ ಹಿನ್ನೆಲೆಯಲ್ಲಿ ಹೈದರಾಬಾದ್​ನಲ್ಲಿ ಇವರು ಅಡಗಿ ಕುಳಿತದದ್ದು ತಿಳಿಯುತ್ತಲೇ ಅಲ್ಲಿ ಪೊಲೀಸರು ಹೋಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ವಶಕ್ಕೆ ಪಡೆಯುತ್ತಿದ್ದಂತೆಯೇ ಮುಕ್ರಂ ಖಾನ್​ಗೆ ಅನಾರೋಗ್ಯ ಬಾಧಿಸಿದೆ!
ಈ ಹಿನ್ನೆಲೆಯಲ್ಲಿ ಸದ್ಯ ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ. ವೈದ್ಯರ ಸೂಚನೆ ಮೇರೆಗೆ ಇಂದು ಸೇಡಂ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಬೆಕ್ಕು ತಾನೆ? ಕಚ್ಚಿದರೆ ಏನಾಗುವುದಿಲ್ಲ ಎಂಬ ನಿರ್ಲಕ್ಷ್ಯ ಬೇಡ: ಪ್ರಾಣ ಕಳೆದುಕೊಂಡ ಮಹಿಳೆಯರು!

188 ಮಕ್ಕಳನ್ನು ಸೃಷ್ಟಿಸಿ ಸರ್ಕಾರಕ್ಕೆ 19 ಕೋಟಿ ರೂಪಾಯಿ ಪಂಗನಾಮ! ಈತನ ಭಯಾನಕ ಕಥೆ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
