ಬೆಂಗಳೂರು:ಕಾಂಗ್ರೆಸ್ ಪಕ್ಷ ಮುಳುಗಿ ಹೋಗಿದೆ. 2023ಕ್ಕೆ ಪಾರ್ಟಿಯಿಂದಲೇ ಸಿದ್ದರಾಮಯ್ಯ ಅವರನ್ನು ಸಸ್ಪೆಂಡ್ ಮಾಡಿಸುತ್ತಾರೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಭವಿಷ್ಯ ನುಡಿದರು.
ನೆಕ್ಸ್ಟ್ ಟಾರ್ಗೆಟ್ ಸಿದ್ದರಾಮಯ್ಯ. ಕಾಂಗ್ರೆಸ್ ನಿಂದ ಅವರನ್ನು ಬಿಡಿಸುತ್ತಾರೆ. ಈಗಾಗಲೇ ಅದಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ ಎಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಮಕೃಷ್ಣ ಹೆಗಡೆ ಜಾಗದಲ್ಲಿ ಸಿದ್ದರಾಮಯ್ಯ ಇದ್ದಾರೆ. 1994ರಲ್ಲಿ ಆಗಿದ್ದು 2023 ಡಿಸೆಂಬರ್ ನಲ್ಲಿ ಮರುಕಳಿಸುತ್ತದೆ ಎಂದರು.
ರಾಜ್ಯದಲ್ಲಿ 8 ಸರ್ವೆಗಳನ್ನು ಮಾಡಿಸಿದ್ದಾರೆ. ಸಿದ್ದರಾಮಯ್ಯ 2 ಸರ್ವೆ ಮಾಡಿಸಿದ್ದಾರೆ. ಡಿಕೆಶಿ ಹಲವು‌ ಸರ್ವೆ ಮಾಡಿಸಿದ್ದಾರೆ. ಬಿಜೆಪಿ 125 ಸ್ಥಾನ ಬರುತ್ತದೆ ಎನ್ನುವುದು ಗೊತ್ತಿದೆ. ಹಾಗಾಗಿ ಬಿಜೆಪಿ ವಿರುದ್ಧ ಸುಳ್ಳು ಆರೋಪ‌ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಶ್ವತ್ಥ ನಾರಾಯಣ ವಿರುದ್ಧ ಜನವರಿ 3 ರಂದೇ ಮಹೂರ್ತ ಇಡಲಾಗಿತ್ತು. ಅಶ್ವತ್ಥ ನಾರಾಯಣ ರಾಮನಗರದ ಕಾರ್ಯಕ್ರಮದಲ್ಲಿ ತೊಡೆ ತಟ್ಟಿದಾಗಲೇ ಜಿದ್ದು ಪ್ರಾರಂಭವಾಗಿದೆ. ಅವರ ವಿರುದ್ಧ ಆಗಿನಿಂದಲೇ ಮಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ಟಾಂಗ್ ಕೊಟ್ಟರು.
ಪಿಎಸ್ ಐ ನೇಮಕ ಅಕ್ರಮ ಪ್ರಕರಣದ ಬಗ್ಗೆ ಕಾಂಗ್ರೆಸ್ ನಿರಂತರ ಆರೋಪ‌ ಮಾಡುತ್ತಿದೆ. ಯಾವುದೇ ಆಧಾರವಿಲ್ಲದೆ ಆರೋಪ ಮಾಡುತ್ತಿದ್ದಾರೆ. ಅನುಭವದ ಕೊರತೆ ಇರುವವರಾದರೆ ಹೇಳಿದರೆ ಬಿಡಬಹುದು. ಆದರೆ, ಸಿಎಂ ಆಗಿದ್ದವರೇ ದಾಖಲೆ ಇಲ್ಲದೆ ಹೇಳಿದರೆ ಹೇಗೆ? ಸಿದ್ದರಾಮಯ್ಯ ಹೇಳಿದರೆ ರಾಜ್ಯ ಸೂಕ್ಷ್ಮವಾಗಿ ಗಮನಿಸುತ್ತದೆ. ಅಂತಹ ಹಿರಿಯರು ದಾಖಲೆ ಆಮೇಲೆ ಕೊಡುತ್ತೇವೆ ಎಂದರೆ ಹೇಗೆ? ಅಶ್ವತ್ಥ ನಾರಾಯಣಗೂ ಇದಕ್ಕೂ ಸಂಬಂಧವಿಲ್ಲ. ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಯಾರು ಇನ್ವಾಲ್ವ್ ಇದ್ದಾರೆ. ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ಮಾಡುವಂತೆ ಸರ್ಕಾರವೇ ಹೇಳಿದೆ. ಆದರೂ ಸಹ ಸಂಬಂಧ ಕಲ್ಪಿಸುವ ಕೆಲಸ ನಡೆದಿದೆ. ಊಹಾಪೋಹದ ಹೇಳಿಕೆ ನೀಡುತ್ತಿದ್ದಾರೆ. ಆಸ್ತಿ ಮಾರಿ ಸಾಲ ಮಾಡಿದರೆ ಅದನ್ನು ಇದಕ್ಕೆ ಕಲ್ಪಿಸ್ತಿದ್ದಾರೆ. ಚುನಾವಣೆ ಹತ್ತಿರವಿದೆ. ಅಧಿಕಾರಕ್ಕೆ‌ಬರಲ್ಲ ಎನ್ನುವುದು ಅವರಿಗೆ ಗೊತ್ತಿದೆ‌. ಹಾಗಾಗಿ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜಕೀಯ ಕಾರಣಕ್ಕೆ ಅರೋಪ:ರಾಜಕೀಯ ಕಾರಣಕ್ಕೆ ಈ ರೀತಿ ಮಾಡಬೇಡಿ. ವಿನಾ ಕಾರಣ ಗೊಂದಲದ ಹೇಳಿಕೆ ನೀಡಬೇಡಿ. ನಿಮ್ಮ‌ ಮೇಲಿನ ನಂಬಿಕೆ ಹೋಗುತ್ತಿದೆ ಎಂದು ಹೇಳಿದರು‌. ದಯವಿಟ್ಟು ದಾಖಲೆ ಬಿಡುಗಡೆ ಮಾಡಿ. ದಾಖಲೆ ಇಲ್ಲದೆ ತೇಜೋವದೆ ಮಾಡಬೇಡಿ. ಕಾಂಗ್ರೆಸ್ ನಾಯಕರ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದರು.
ಬಿಜೆಪಿ ವಿರುದ್ಧ ಜನರಲ್ಲಿ ಗೊಂದಲ ಮೂಡಿಸುವುದು ಕಾಂಗ್ರೆಸ್ ಕೆಲಸ. ಪರೀಕ್ಷೆ ನಡೆದಿದ್ದು ಯಾವಾಗ? ಅವರು ಎಲ್ಲಿದ್ದರು? ಅದನ್ನು ಗಮನಿಸಿದ್ದೀರಾ? ರಾಜಕೀಯ ದ್ವೇಷಕ್ಕಾಗಿ ಕುಟುಂಬಸ್ಥರನ್ನು ಹೊರತರ್ತಿದ್ದೀರಾ? ಎಂದು ಕೇಳಿದರು.
ಯಾರಿಗೆ ಯಾವಾಗ ಸಾಫ್ಟ್ ಕಾರ್ನರ್ ಗೊತ್ತಿಲ್ಲ:ಕುಮಾರಸ್ವಾಮಿ ಅವರು ಅಶ್ವತ್ಥನಾರಾಯಣ ಬಗ್ಗೆ ಸಾಫ್ಟ್ ಕಾರ್ನರ್ ತೋರಿರುವ ಬಗ್ಗೆ, ಕುಮಾರಸ್ವಾಮಿ ಯಾವಾಗ ಯಾರ‌ ಮೇಲೆ ಸಾಫ್ಟ್ ಕಾರ್ನರ್ ತೋರುತ್ತಾರೋ ಅವರಿಗೇ ಗೊತ್ತಿರಲ್ಲ ಎಂದು ವ್ಯಂಗ್ಯವಾಡಿದರು.
ನೋಟಿಸ್ ಗೆ ಉತ್ತರ ಕೊಡಬೇಕು:ಪ್ರಿಯಾಂಕ್ ಖರ್ಗೆ ಗೆ ನೊಟೀಸ್ ಕೊಟ್ಟಿದ್ದಾರೆ. ಅವರು ಹೇಳಿಕೆ ಕೊಡಬೇಕು. ಕಾನೂನು‌ಬದ್ಧವಾಗಿ ನೊಟೀಸ್ ಕೊಟ್ಟಿದ್ದಾರೆ. ಅವರು ಹೇಳಿಕೆ ಕೊಡೋಕೆ ಏನು‌ ಸಮಸ್ಯೆ? ಎಂದು ಪ್ರಶ್ನಿಸಿದರು.
ಸಚಿವ ಪ್ರಭು ಚವ್ಹಾಣ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಮುನಿರತ್ನ, ಈಗ ನೋಟಿಸ್ ಕೊಟ್ಟಿರುವುದರ ಬಗ್ಗೆ ಆಡಿಯೋ ಕೊಡಬೇಕಲ್ಲವೆ ಎಂದು ಕೇಳಿದರು. 40 ಪರ್ಸೆಂಟ್ ಬಗ್ಗೆ ದಾಖಲೆ ಇಲ್ಲದೆ ಹೇಗೆ ಮಾತನಾಡ್ತೀರಾ?ದಾಖಲೆ ಕೊಟ್ಟು ಆರೋಪ ಮಾಡಿ ಎಂದು ಕೆಣಕಿದರು.
ತಬ್ಬಿಬ್ಬಾದ ಮುನಿರತ್ನ:ಪ್ರಧಾನಿ 10 ಪರ್ಸೆಂಟ್ ಕಮೀಷನ್‌ ಆರೋಪ‌ ಮಾಡಿದ್ದಕ್ಕೆ ದಾಖಲೆ ನೀಡಿದ್ದರಾ? ಎಂಬ ಪ್ರಶ್ನೆಗೆ ಮುನಿರತ್ನ ತಬ್ಬಿಬ್ಬಾದರು. ಆಗ ಕಾಂಗ್ರೆಸ್ ನವರು ದಾಖಲೆ ಕೇಳಬೇಕಿತ್ತು. ಆಗ ಅವರು ಯಾಕೆ ಕೇಳಲಿಲ್ಲ? ಈಗ ನಾವು ಕೇಳ್ತಿದ್ದೇವೆ ದಾಖಲೆ ಕೊಡಬೇಕು. ಆರೋಪ ಮಾಡುವ ಮುನ್ನ ದಾಖಲೆ ಕೊಡಿ ಎಂದು ಸವಾಲು ಹಾಕಿದರು.
ಪಕ್ಷ ಹೊಣೆ ಕೊಟ್ಟರೆ ಸಿದ್ಧ:ಸಂಸದೆ ಸುಮಲತಾ ಅವರನ್ನು ಪಕ್ಷಕ್ಕೆ ಕರೆತರುವ ಹೊಣೆಯನ್ನು ಪಕ್ಷ ನನಗೆ ನೀಡಿದರೆ, ಆಗಿಂದಲೇ ಕಾರ್ಯಪ್ರವೃತ್ತನಾಗುತ್ತೇನೆ ಎಂದು‌ ಮುನಿರತ್ನ ಹೇಳಿದರು.
ಮಗು ಹುಟ್ಟುವ ಶುಭ ಮುಹೂರ್ತ ಹೇಳದಿರಲು ಜ್ಯೋತಿಷಿಗಳ ತೀರ್ಮಾನ! ಯಾಕೆ ಅಂತೀರಾ? ಇಲ್ಲಿದೆ ಇಂಟರೆಸ್ಟಿಂಗ್‌ ಸ್ಟೋರಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
