ಮೈಸೂರು:ಮೈಸೂರಿನ ವಿವಿಧೆಡೆ ರಾತ್ರಿ ವೇಳೆ ಸಂಚಾರ ಮಾಡುತ್ತಿರುವವರನ್ನು ಅಡ್ಡಗಟ್ಟಿ ಬೆದರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್​ ಗ್ಯಾಂಗ್​ ಒಂದನ್ನು ಪೊಲೀಸರು ಬಂಧಿಸಿದ್ದಾರೆ.
ಒಂಟಿಯಾಗಿ ಸಂಚಾರ ಮಾಡುತ್ತಿದ್ದವರನ್ನು ಟಾರ್ಗೆಟ್​ ಮಾಡಿಕೊಂಡಿದ್ದ ಎಂಟು ಮಂದಿಯ ಈ ಗ್ಯಾಂಗ್​ ಪ್ರತಿರಾತ್ರಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅವರನ್ನು ಬೆದರಿಸಿ ದೋಚುತ್ತಿದ್ದರು. ಅವರಿಂದ ಹಣ, ಒಡವೆ ಮತ್ತು ಮೊಬೈಲ್‌ಗಳನ್ನು ಕಸಿದುಕೊಳ್ಳುತ್ತಿದ್ದರು.
ಇದನ್ನೂ ಓದಿ:ಕಳ್ಳತನದಲ್ಲಿ ಪಾಲು ಕೇಳಿದ್ದಕ್ಕೆ ಡಬಲ್​ ಮರ್ಡರ್​- ಕೊಲೆಗಾರನೇ ಕೊಲೆಯಾದ!
ಇವರನ್ನು ಹೊಂಚು ಹಾಕಿ ಮೈಸೂರಿನ ಸರಸ್ವತಿಪುರಂ ಪೊಲೀಸರು ಬಂಧಿಸಿದ್ದಾರೆ. ಬೋಗಾದಿಯ ಶರತ್( 25), ಸುಮಂತ್(24), ದಿನೇಶ(26), ಕಾರ್ತಿಕ್(25), ಮರಟಿ ಕ್ಯಾತನಹಳ್ಳಿಯ ಧರ್ಮೇಶ(22), ಬೀರಿಹುಂಡಿಯ ಸುನೀಲ್ ಕುಮಾರ್(32), ಚಾಮರಾಜನಗರದ ಶಶಾಂಕ್(22), ಹೂಟಗಳ್ಳಿಯ ಮಹದೇವ (24) ಬಂಧಿತ ಆರೋಪಿಗಳು.
ರೈಲ್ವೆ ನಿಲ್ದಾಣ, ಗ್ರಾಮಾಂತರ ಬಸ್ ನಿಲ್ದಾಣ, ಸರಸ್ವತಿಪುರಂ ರೈಲ್ವೆ ಅಂಡರ್ ಬ್ರಿಡ್ಜ್‌ಗಳಲ್ಲಿ ಹೆಚ್ಚಾಗಿ ಒಂಟಿ ಸಂಚಾರ ಮಾಡುತ್ತಿದ್ದುದರಿಂದ ಅಲ್ಲಿಯೇ ಇವರು ದರೋಡೆ ದಂಧೆಗೆ ಇಳಿಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಿಬಿಎಂಪಿ 198 ವಾರ್ಡ್​ಗಳ ಮೀಸಲಾತಿ ಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + seventeen =
Remember me
