ಮೈಸೂರು:ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈ‌ನಲ್ಲಿ ತೀರ್ಮಾನ ಆಗಲಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸುತ್ತೂರು ಮಠದ ಸ್ವಾಮೀಜಿಯನ್ನು ಭೇಟಿಯಾಗಲು ಬೆಳಗಾವಿಯಿಂದ ಅವರು ಬರುತ್ತಿದ್ದ ನಡುವೆಯೇ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಶುರುವಾಗಿತ್ತು. ಸಚಿವ ಸ್ಥಾನಕ್ಕಾಗಿ ಅವರು ಬರುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆ ಸುದ್ದಿಗೆ ತೆರೆ ಎಳೆಯಲು ಪ್ರಯತ್ನಿಸಿದ ಜಾರಕಿಹೊಳಿ, ಸುತ್ತೂರು ಮಠಕ್ಕೆ ಬಂದಿರೋದು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಅಷ್ಟೇ. ಇಲ್ಲಿ ಬಂದಿರುವ ಹಿಂದೆ ರಾಜಕೀಯ ಉದ್ದೇಶವಿಲ್ಲ. ಸ್ವಾಮೀಜಿ ಅವರ ತಾಯಿ ಮೃತಪಟ್ಟ ಕಾರಣ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳ್ತಿನಾ ? ಮಂತ್ರಿಗೋಸ್ಕರ ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡ್ತಿಲ್ಲ. ಸದ್ಯ ರಾಜೀನಾಮೆ ಇಲ್ಲ. ಎಲ್ಲವನ್ನೂ ಮುಂಬೈನಲ್ಲಿಯೇ ಮಾತನಾಡುವೆ ಎಂದು ಹೇಳಿದರು. ಮೈಸೂರಿಗೆ ಸ್ವಾಮೀಜಿಯವರನ್ನು ಭೇಟಿಯಾಗಲು ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಕಂಬಕ್ಕೆ ಟ್ಯಾಂಕರ್‌ ಡಿಕ್ಕಿ: ಫ್ರೀ ಡೀಸೆಲ್‌ ತುಂಬಿಸಿಕೊಳ್ಳಲು ಮುಗಿಬಿದ್ದ ಜನ

ಲಸಿಕೆಗೆ ಒತ್ತಾಯಿಸುವುದು, ಸೌಲಭ್ಯ ಕಟ್‌ ಎನ್ನುವ ಬೆದರಿಕೆ ಹಾಕುವುದು ಕಾನೂನುಬಾಹಿರ ಎಂದ ಹೈಕೋರ್ಟ್‌

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − 4 =
Remember me
