ಮೈಸೂರು:ಮದುಮಗ ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ ಮಾಡಿ ಮದುವೆ ಕ್ಯಾನ್ಸಲ್​ ಆಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ವಧುವಿನಿಂದಾಗಿ ಕ್ಯಾನಲ್​ ಆಗಿ ಭಾರಿ ರಾದ್ಧಾಂತ ನಡೆದಿದೆ. ವಧುವಿನಿಂದಾಗಿ ಕೊನೆ ಕ್ಷಣದಲ್ಲಿ ಮದುವೆ ಮುರಿದುಬಿದ್ದು ಅಲ್ಲೋಲ ಕಲ್ಲೋಲವಾಗಿದೆ.
ಮೈಸೂರಿನ ಸುಣ್ಣದಕೇರಿ ಯುವತಿಯ ಮದುವೆ, ಎಚ್.ಡಿ ಕೋಟೆ ತಾಲ್ಲೂಕಿನ ಯುವಕನ ಜತೆ ನಿಶ್ಚಯವಾಗಿತ್ತು. ಆದರೆ ಯುವತಿ ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಈ ವಿಷಯವನ್ನು ಬಾಯಿ ಬಿಟ್ಟಿರಲಿಲ್ಲ. ಈ ನಡುವೆ ಆಕೆಗೆ ಮದುವೆ ಫಿಕ್ಸ್​ ಆದಾಗ ಆಕೆಯ ಪ್ರಿಯಕರನಿಂದ ವರನಿಗೆ ಮದುವೆಯಾಗದಂತೆ ಮೆಸೇಜ್ ಬಂದಿದೆ.
ಈ ಬಗ್ಗೆ ಯುವತಿಯನ್ನು ವಿಚಾರಿಸಿದಾಗ ಈ ಮೆಸೇಜ್​ಗೂ ತನಗೂ ಸಂಬಂಧವೇ ಇಲ್ಲ ಎಂದಿದ್ದಾಳೆ. ಆದ್ದರಿಂದ ಐದು ಲಕ್ಷ ಖರ್ಚು ಮಾಡಿ ಮದುವೆಗೆ ಸಿದ್ಧತೆ ನಡೆದಿತ್ತು. ಇನ್ನೇನು ಎಲ್ಲಾ ಕಾರ್ಯಗಳು ಮುಗಿದು ಮದುಮಗ ಆಕೆಗೆ ಮಂಗಳಸೂತ್ರ ಕಟ್ಟಬೇಕಿತ್ತು. ಅಷ್ಟರಲ್ಲಿಯೇ ಯುವತಿ ಕುಸಿದು ಬಿದ್ದಂತೆ ನಾಟಕವಾಡಿದ್ದಾಳೆ. ಎಲ್ಲರೂ ಗಾಬರಿಯಿಂದ ಹತ್ತಿರ ಹೋಗಿ ನೋಡಿದಾಗ ಎಚ್ಚರಗೊಂಡವಳಂತೆ ಮಾಡಿದ ಆಕೆ ನಾನು ಇವನನ್ನು ಮದುವೆಯಾಗುವುದಿಲ್ಲ, ನನ್ನ ಪ್ರೇಮಿಯನ್ನೇ ಮದುವೆಯಾಗುತ್ತೇನೆ ಎಂದಿದ್ದಾಳೆ.
ಇದರಿಂದ ಮದುವೆ ಮನೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ವರನ ಕಡೆಯವರು ಗಾಬರಿಗೊಂಡಿದ್ದಾರೆ. ಕೊನೆಗೆ ಈ ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿತು.
ವಧುವಿಗೆ ಚಿನ್ನ, ರೇಷ್ಮೆ ಸೀರೆಗಾಗಿ ಲಕ್ಷ ಖರ್ಚು ಮಾಡಿದ್ದು, ಈಗ ವಧು ಈ ರೀತಿ ಪಟ್ಟು ಹಿಡಿದಿರುವುದಾಗಿ ವರನ ಕುಟುಂಬದವರು ಗಲಾಟೆ ಮಾಡಿದರು. ಕೊನೆಗೆ ಪೊಲೀಸರ ಸಮ್ಮುಖದಲ್ಲಿ ಮಾತುಕತೆ ನಡೆದಿದೆ. ಮದುವೆಯನ್ನು ಕ್ಯಾನ್ಸಲ್​ ಮಾಡಿ, ವಧುವಿಗೆ ನೀಡಿದ ಆಭರಣಗಳನ್ನು ವಾಪಸ್​ ನೀಡುವಂತೆ ಪೊಲೀಸರು ಹೇಳಿದ್ದಾರೆ. ಅದರಂತೆ ಅವರು ತಾವು ನೀಡಿರುವ ಚಿನ್ನಾಭರಣ ವಾಪಸ್​ ಪಡೆದುಕೊಂಡಿದ್ದಾರೆ.
ಖರ್ಚು ಮಾಡಿದ ಹಣ ವಾಪಸ್ ಪಡೆದು ವರನ ಕಡೆಯವರು ವಾಪಸ್​ ಹೋಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಟ್ರೋಲ್​ ಆಗಲೆಂದೇ ಅರ್ಧಂಬರ್ಧ ಬಟ್ಟೆ ತೊಡುವ ಉರ್ಫಿಯ ಆದಾಯ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ

ಅವಳು ನನ್ನನ್ನು ಬೆತ್ತಲೆ ನೋಡಿದ್ರೆ ಈ ಪ್ರಶ್ನೆಗೆ ಉತ್ತರಿಸಲಿ ನೋಡೋಣ: ವಿಶ್ವದ ನಂ.1 ಶ್ರೀಮಂತನ ಚಾಲೆಂಜ್​​!

ಪಕ್ಕದ್ಮನೆ ಆಂಟಿ ಮೇಲೆ ಕಣ್ಣು ಹಾಕಿದ ಕಿರಾತಕ, ಗಂಡನಿಗೆ ಕೆಲ್ಸ ಕೊಡಿಸಿ ಆಸೆ ತೀರಿಸಿಕೊಂಡ: ಹುಬ್ಬಳ್ಳಿ ಪೊಲೀಸರೂ ಗಪ್​ಚುಪ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twenty =
Remember me
