ಮೈಸೂರು:ಪತ್ನಿಯನ್ನು ಕಳೆದುಕೊಂಡಿರುವ ಅಪ್ಪನಿಗೆ ವೃದ್ಧಾಪ್ಯದಲ್ಲಿ ಆಸರೆ ಬೇಕೆಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳು ಸೇರಿ 85 ವರ್ಷದ ವೃದ್ಧನಿಗೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿ, ಕುರಿ ವ್ಯಾಪಾರಿಯಾಗಿರುವ ಹಾಜಿ ಮುಸ್ತಫಾ ಅವರನ್ನು ಮೊಮ್ಮಕ್ಕಳು ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಇವರಿಗೆ ಜೀವನಸಾಥಿಯಾಗಿ ಬಂದವರು 65 ವರ್ಷದ ಫಾತಿಮಾ ಬೇಗಂ.
ಮುಸ್ತಫಾಗೆ ಸದ್ಯ 9 ಜನ ಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು, ಮೊಮ್ಮಕ್ಕಳೂ ಇದ್ದಾರೆ. ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಇರುವ ಕಾರಣ ಮುಸ್ತಫಾ ಒಂಟಿಯಾಗಿದ್ದರು. ಎರಡು ವರ್ಷದ ಹಿಂದೆ ಮುಸ್ತಫಾ ಪತ್ನಿ ಖುರ್ಷಿದ್ ಬೇಗಂ ಮೃತಪಟ್ಟಿದ್ದರಿಂದ ಒಂಟಿಯಾಗಿ ಇರಬೇಕಾಗಿತ್ತು. ಆದ್ದರಿಂದ ಇಳಿ ವಯಸ್ಸಿನಲ್ಲಿ ಜತೆಯಾಗಿ ಯಾರಾದರೂ ಆಸರೆಗೆ ಬೇಕು ಎನ್ನಿಸಿತು. ನಂತರ ಮಕ್ಕಳು, ಮೊಮ್ಮಕ್ಕಳು ‘ವಧು’ವಿನ ಹುಡುಕಾಟದಲ್ಲಿ ತೊಡಗಿದಾಗ ಒಂಟಿಯಾಗಿದ್ದ 65 ವರ್ಷದ ಫಾತಿಮಾ ಬೇಗಂ ಸಿಕ್ಕರು. ಅವರು ಕೂಡ ಮದುವೆಗೆ ಒಪ್ಪಿದ್ದರಿಂದ ನಿಖಾ ಮಾಡಲಾಗಿದೆ.
ಮುಸ್ತಫಾ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸಮ್ಮುಖದಲ್ಲಿ‌ ಫಾತಿಮಾಬೇಗಂ ಅವರನ್ನು ನಿಖಾ ಆಗಿದ್ದಾರೆ.
VIDEO: ಅದ್ಧೂರಿಯಾಗಿ ಮದ್ವೆಯಾಗಲು ಸಿನಿಮೀಯ ಸ್ಟೈಲ್‌ನಲ್ಲಿ ಬ್ಯಾಂಕ್‌ ದರೋಡೆ ಮಾಡಿ ಸಿಕ್ಕಬಿದ್ದ ವಿಜಯಪುರದ ಭೂಪ!

ಗೂಗಲ್‌ ನೋಡಿ ದರೋಡೆ ಕಲಿತ ಬೆಂಗಳೂರಿನ ಇಂಜಿನಿಯರ್‌! ಆದ್ರೆ ಉಳಿದದ್ದು ಗೊತ್ತಾಗದೇ ಸಿಕ್ಕಿಬಿದ್ದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
