ಮೈಸೂರು:ವ್ಯಾಪಾರಿಯೊಬ್ಬರು ಭಾರಿ ಹಣದೊಂದಿಗೆ ನಿನ್ನೆ ರಾತ್ರಿಯ ವೇಳೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಣದ ಚೀಲವಿದ್ದ ಬ್ಯಾಗ್‌ ಅನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಚಾಮರಾಜ ಮೊಹಲ್ಲಾ ನಿವಾಸಿ ಪ್ರೇಮ್‌ ಕುಮಾರ್‌ ಅವರು ಕರ್ತವ್ಯ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರನ್ನು ಅಡ್ಡಗಟ್ಟಿದ ಇಬ್ಬರು ಸುಲಿಗೆಕೋರರು, ಅವರ ಬಳಿ ಇದ್ದ 1.8 ಲಕ್ಷ ರೂ. ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಮನೆಗೆ ತೆರಳುತ್ತಿದ್ದ ವೇಳೆ ಸುಖಾಸುಮ್ಮನೆ ಕ್ಯಾತೆ ತೆಗೆದಿರುವ ದುಷ್ಕರ್ಮಿಗಳು ಅವರನ್ನು ಸ್ಕೂಟರ್‌ನಿಂದ ಕೆಳಕ್ಕೆ ಬೀಳಿಸಿ ಈ ಕೃತ್ಯ ಎಸಗಿದ್ದಾರೆ. ನಾನು ಬಂಡಿಪಾಳ್ಯದಲ್ಲಿ ‌ಮಳಿಗೆ ಹೊಂದಿದ್ದು ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿಕೊಂಡು ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದೆ. ಈ ವೇಳೆ ಮತ್ತೊಂದು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಖದೀಮರು, ದಳವಾಯಿ ಶಾಲೆ ಬಳಿ ಅಡ್ಡ ಹಾಕಿ ನಮ್ಮ ಮೇಲೆ ಏಕೆ ಉಗಿದೆ ಎಂದು ವಿನಾ ಕಾರಣ ಜಗಳ ತೆಗೆದು ನನ್ನನ್ನು ಸ್ಕೂಟರ್‌ನಿಂದ ಕೆಳಗೆ ಬೀಳಿಸಿದರು ಎಂದು ಪ್ರೇಮ್‌ಕುಮಾರ್‌ ಹೇಳಿದ್ದಾರೆ.
ನಂತರ ಒಬ್ಬ ನನ್ನನ್ನು ರಸ್ತೆ ಬದಿಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ. ಮತ್ತೊಬ್ಬ ಸ್ಕೂಟರ್‌ನ ಡಿಕ್ಕಿಯಲ್ಲಿದ್ದ 1.8 ಲಕ್ಷ ರೂ. ಹಣವನ್ನು ಎತ್ತಿಕೊಂಡು, ನಂತರ ನನ್ನ ಮೇಲೆಯೂ ಹಲ್ಲೆ ನಡೆಸಿದ. ಈ ಘಟನೆಯ ನಂತರ ತಮ್ಮ ಸ್ಕೂಟರ್‌ನಲ್ಲಿ ಪರಾರಿಯಾದರು ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಕೆ.ಆರ್‌. ಠಾಣೆ ಪೊಲೀಸರಲ್ಲಿ ಪ್ರೇಮ್‌ಶೇಖರ್‌ ದೂರು ಸಲ್ಲಿಸಿದ್ದಾರೆ. ಹಣ ಕಿತ್ತುಕೊಂಡು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆ.ಆರ್‌. ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ.
ತಾನು ಲವರ್‌ ಜತೆ ಮದುವೆಯಾಗಲು ಪತ್ನಿಯ ಸ್ಕೂಟಿಗೆ ಟ್ರ್ಯಾಕರ್‌ ಫಿಕ್ಸ್‌ ಮಾಡಿದ ಪತಿರಾಯ!

ಪತಿ ಪಕ್ಕದ ಮನೆಯ ಗಂಡ ಬಿಟ್ಟ ಆಂಟಿಯ ಜತೆ ತುಂಬಾ ಸಲುಗೆಯಿಂದಿದ್ದಾರೆ- ಸರಿದಾರಿಗೆ ಹೇಗೆ ತರಲಿ?

ಪ್ಯಾಂಟ್‌ ಜಿಪ್‌ ತೆಗೆಯುವುದು, ಬಟ್ಟೆಯ ಮೇಲಿನಿಂದ ಅಂಗ ಮುಟ್ಟುವುದು… ವಿವಾದಿತ ಲೇಡಿ ಜಡ್ಜ್‌ಗೆ ಬಡ್ತಿ ಕಟ್‌!

ಗಂಡನ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಪತ್ನಿ, ಮಕ್ಕಳಿಗೆ ಹಕ್ಕಿದೆಯೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 3 =
Remember me
