ಬೆಂಗಳೂರು:ರಾಜ್ಯ ಸರ್ಕಾರದ ಕುರಿತು ಸಚಿವ ಸಿ.ಪಿ.ಯೋಗೇಶ್ವರ್ ನೀಡಿದ ಹೇಳಿಕೆ ಕುರಿತು ಅವರಿಂದ ವಿವರಣೆ ಪಡೆದ ನಂತರ ಮುಂದಿನ ಕ್ರಮಕೈಗೊಳ್ಳುವೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ತಾವರಕೆರೆ ಕರೊನಾ ಆರೈಕೆ ಕೇಂದ್ರದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಇರುವುದು ಶುದ್ಧ ಬಿಜೆಪಿ ಸರ್ಕಾರ‌ ಇದರಲ್ಲಿ ಅನುಮಾನವೇ ಬೇಡ. ಮೂರು ಪಕ್ಷಗಳ ಸರ್ಕಾರವೆಂಬ ಹೇಳಿಕೆ ನೀಡಿದ್ದೇಕೆ ಎಂದು ಸಿ.ಪಿ.ಯೋಗೇಶ್ವರ್ ಗೆ ಕೇಳುವೆ ಎಂದರು.
ಉಳಿದ ಅವಧಿಗೂ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಆ ವಿಷಯದ ಚರ್ಚೆಯೂ ನಡೆದಿಲ್ಲ. ಬಿಎಸ್ ವೈ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದಲೂ ನಾಯಕತ್ವ ಬದಲಾವಣೆ ಕುರಿತು ಪ್ರಶ್ನೆಗಳು ತಲೆ ಎತ್ತುತ್ತಲೇ ಇವೆ. ಪಕ್ಷದ ವರಿಷ್ಠರು ಹಾಗೂ ನಾನು ಅಲ್ಲಗಳೆಯುತ್ತಾ‌ ಬಂದಿದ್ದೇವೆ.
ಕರೊನಾ ಸಂಕಷ್ಟ ಪರಿಹರಿಸುವುದಕ್ಕೆ ನಿಮ್ಮ ಮೊದಲ ಆದ್ಯತೆ ಮತ್ತು ಕರ್ತವ್ಯವೂ ಆಗಿದೆ. ಇಂತಹ ಸಂದರ್ಭದಲ್ಲಿ ಅನಗತ್ಯ ಗೊಂದಲ ಹುಟ್ಟು ಹಾಕುವುದು ಸರಿಯಲ್ಲ ಎಂದರು.
ಶಾಸಕರಿಗೆ ಖಡಕ್ ಸೂಚನೆ:ಕರೊನಾ ನಿಯಂತ್ರಣ, ಜನ ಜಾಗೃತಿ, ಸಮರ್ಪಕ ನಿರ್ವಹಣೆ, ಸೋಂಕಿತರ ಕುಟುಂಬ ನೆರವು ಇದಿಷ್ಟನ್ನೇ ಮಾಡಿ ಎಂದು ಪಕ್ಷದ ಎಲ್ಲ ಶಾಸಕರಿಗೆ ಖಡಕ್ ಸೂಚನೆ ನೀಡಲಾಗುವುದು. ನಾಯಕತ್ವ ಬದಲಾವಣೆ, ಇನ್ನಿತರ ರಾಜಕೀಯ ವಿಷಯಗಳ ಬಗ್ಗೆ ಹೇಳಿಕೆ ನೀಡಕೂಡದು. ಕರೊನಾದಿಂದ ಜನರ ರಕ್ಷಣೆ, ತೊಂದರೆ ಸಿಲುಕಿದವರಿಗೆ ಸಹಾಯ ಹಸ್ತ ಚಾಚುವ ಕಡೆಗೆ ಮಾತ್ರ ಗಮನಹರಿಸಲು ತಿಳಿಸಲಾಗುವುದು ಎಂದು ಕಟೀಲ್ ಹೇಳಿದರು.
ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು

ಮೇಟಿ ಲೈಂಗಿಕ ಹಗರಣ ಮುಚ್ಚಿಹಾಕಿದವರು ಈಗ ನೈತಿಕತೆ ಕಲಿಸ್ತಿದ್ದಾರೆಯೆ?- ಬೊಮ್ಮಾಯಿ ಕಿಡಿ

ಮಧ್ಯರಾತ್ರಿ ಧಗಧಗ ಹೊತ್ತಿ ಉರಿದ ಕಾರ್ಖಾನೆ- ಅಗ್ನಿ ಶಾಮಕ ದಳಕ್ಕೆ ಸಾಧ್ಯವಾಗದೇ ವಾಯುಪಡೆ ಕಾರ್ಯಾಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
