ಬೆಂಗಳೂರು:ನ್ಯಾಷನಲ್​ ಹೆರಾಲ್ಡ್​ ಪತ್ರಿಕೆಯ ಸಾವಿರಾರು ಕೋಟಿ ರೂಪಾಯಿ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಮುಖಂಡರ ಆಕ್ರೋಶ ಮುಗಿಲುಮುಟ್ಟಿದೆ. ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್​ ಗಾಂಧಿಯವರಿಗೆ ಜಾರಿ ನಿರ್ದೇಶನಾಲಯ ನೋಟಿಸ್​ ಜಾರಿಗೊಳಿಸಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ.
ಇದಾಗಲೇ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದ ಕೆಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಯುವ ಕಾಂಗ್ರೆಸ್​ ಅಧ್ಯಕ್ಷ ಮೊಹಮ್ಮದ್​ ನಲಪಾಡ್​, ರಾಹುಲ್​ ಗಾಂಧಿಯ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದಿದ್ದಾರೆ. ಹಾಗೆಯೇ ಬಿಜೆಪಿ ವಿರುದ್ಧ ಅವರು ಕಿಡಿಕಾರಿದ್ದಾರೆ.
ಪಬ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡುತ್ತಿದ್ದ ರೌಡಿ‌‌ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ.
ಗೊರಿಲ್ಲಾ ಶ್ರೀನಿವಾಸ ರಾಷ್ಟ್ರೀಯ ಅಧ್ಯಕ್ಷ.ಎಲ್ಲರೂ ಗೂಂಡಾಗಿರಿಯ ತುಣುಕುಗಳೇ.#ಗೂಂಡಾಕಾಂಗ್ರೆಸ್
— BJP Karnataka (@BJP4Karnataka)June 15, 2022

ಇದಕ್ಕೆ ಪ್ರತಿಕ್ರಿಯೆ ನೀಡಿ ಬಿಜೆಪಿಯ ಟ್ವಿಟರ್​ನಲ್ಲಿ ಸರಣಿ ಟ್ವೀಟ್​ ಮಾಡಲಾಗಿದೆ. ‘ಯಥಾರಾಜಾ ತಥಾ ಪ್ರಜಾ ಎಂಬುದು ಕಾಂಗ್ರೆಸ್ಸಿಗರಿಗೆ ಅನ್ವಯವಾಗುತ್ತದೆ. ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ, ಗ್ಯಾಸ್ ಕಾಲೇಜಿನಲ್ಲಿ ಬ್ಲೇಡು, ಚಾಕು ಚೂರಿ ಹಿಡಿದು ಗೂಂಡಾಗಿರಿ ನಡೆಸುತ್ತಿದ್ದವರು ಮೇಲ್ಮನೆಯ ವಿಪಕ್ಷ ನಾಯಕ’ ಎಂದು ಟ್ವಿಟರ್​ನಲ್ಲಿ ಟಾಂಗ್ ನೀಡಲಾಗಿದೆ.
ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ.
ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ.
ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು!#ಗೂಂಡಾಕಾಂಗ್ರೆಸ್
— BJP Karnataka (@BJP4Karnataka)June 15, 2022

ಇ‌ವರು ಜನರ ಪ್ರೀತಿಯಿಂದ ನಾಯಕರಾಗಿಲ್ಲ, ಜನರಿಗೆ ಭೀತಿ ಹುಟ್ಟಿಸಿ ನಾಯಕರಾಗಿದ್ದಾರೆ. ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ. ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ. ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು, ಪಬ್‌ನಲ್ಲಿ ಸಿಕ್ಕ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡುತ್ತಿದ್ದ ರೌಡಿ‌‌ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ. ಗೊರಿಲ್ಲಾ ಶ್ರೀನಿವಾಸ ರಾಷ್ಟ್ರೀಯ ಅಧ್ಯಕ್ಷ. ಎಲ್ಲರೂ ಗೂಂಡಾಗಿರಿಯ ತುಣುಕುಗಳೇ ಎಂದು ಸರಣಿ ಟ್ವೀಟ್​ನಲ್ಲಿ ತಿಳಿಸಲಾಗಿದೆ.
ಯತಾರಾಜಾ ತಥಾ ಪ್ರಜಾ ಎಂಬುದು ಕಾಂಗ್ರೆಸ್ಸಿಗರಿಗೆ ಅನ್ವಯವಾಗುತ್ತದೆ.
ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾದರೆ, ಗ್ಯಾಸ್ ಕಾಲೇಜಿನಲ್ಲಿ ಬ್ಲೇಡು, ಚಾಕು ಚೂರಿ ಹಿಡಿದು ಗೂಂಡಾಗಿರಿ ನಡೆಸುತ್ತಿದ್ದವರು ಮೇಲ್ಮನೆಯ ವಿಪಕ್ಷ ನಾಯಕ!
ಇ‌ವರು ಜನರ ಪ್ರೀತಿಯಿಂದ ನಾಯಕರಾಗಿಲ್ಲ, ಜನರಿಗೆ ಭೀತಿ ಹುಟ್ಟಿಸಿ ನಾಯಕರಾಗಿದ್ದಾರೆ.#ಗೂಂಡಾಕಾಂಗ್ರೆಸ್
— BJP Karnataka (@BJP4Karnataka)June 15, 2022

ಇಡಿಯಿಂದ ರಾಹುಲ್​ ಗಾಂಧಿ ಬಂಧನವಾಗುತ್ತಾ? ಛತ್ತೀಸ್​ಗಢ ಮುಖ್ಯಮಂತ್ರಿ ಕೊಟ್ಟ ಸ್ಫೋಟಕ ಉತ್ತರ ಹೀಗಿದೆ…

‘ನಮ್ಮ ಪ್ರವಾದಿ​, ನಮ್ಮ ಹೆಮ್ಮೆ’ ಎಂದು ನೂಪುರ್​ ವಿರುದ್ಧ ಪ್ರತಿಭಟಿಸಿದ ಭಾರತೀಯರನ್ನು ಗಡಿಪಾರು ಮಾಡಲಿದೆ ಕುವೈತ್​!

ಸಾವಿರಾರು ಕೋಟಿ ಲೂಟಿ ಆರೋಪ: ನಾಯಕರನ್ನು ಪ್ರಶ್ನಿಸಬೇಡಿ ಎಂದು ‘ರಾಜಭವನ ಚಲೊ’- ಕರೊನಾ ​ಎಚ್ಚರಿಕೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − 6 =
Remember me
