ಕೊಡಗು:ಕಾಕತಾಳಿಯವೋ, ಉದ್ದೇಶಪೂರ್ವಕವೋ… ಕೆಲವೊಮ್ಮೆ ಹೀಗೆಯೇ ನಡೆದಿದೆ ಎಂದು ಹೇಳುವುದೇ ಕಷ್ಟ. ಆದರೂ ಎಷ್ಟೋ ಸಂದರ್ಭಗಳಲ್ಲಿ ಆ ಘಟನೆ ನಡೆದಿರುವುದು ಕಾಕತಾಳೀಯ ಎಂದು ಹೇಳಲು ಸಾಧ್ಯವೇ ಇಲ್ಲ ಎನಿಸಿಬಿಡುತ್ತದೆ.
ಅಂಥದ್ದೇ ಒಂದು ವಿಚಿತ್ರ ಹಾಗೂ ಕುತೂಹಲ ಘಟನೆ ನಡೆದಿರುವುದು ಬ್ರಹ್ಮಗಿರಿ ಬೆಟ್ಟದ ಭೂಕುಸಿತದ ಸ್ಥಳದಲ್ಲಿ ಸಿಕ್ಕ ಕುರುಹು. ಈ ಕುರುಹು ಈಗ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಹೌದು. ಪ್ರಧಾನ ಅರ್ಚಕ ನಾರಾಯಾಣಾಚಾರ್ ಅವರ ಇಡೀ ಕುಟುಂಬವನ್ನೇ ಜೀವಂತ ಸಮಾಧಿ ಮಾಡಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಒಂದು ಪುಸ್ತಕ ಇದೀಗ ಸಿಕ್ಕಿದೆ. ಅದೇ ‘ಸಮಾಧಿ ನಿರ್ಣಯ’!
ಇದೇ 5ನೇ ತಾರೀಖಿನಂದು ಪ್ರಧಾನ ಅರ್ಚಕ ನಾರಾಯಾಣಾಚಾರ್, ಪತ್ನಿ ಶಾಂತ, ಸಹೋದರ ಆನಂದತೀರ್ಥ, ಸಹಾಯಕ ಅಚ೯ಕರಾದ ಪವನ್, ರವಿಕಿರಣ್ ಅವರು ನಾಪತ್ತೆಯಾಗಿದ್ದು, ಇವರು ಭೂಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿರುವ ಬೆನ್ನಲ್ಲೇ ಇಂಥದ್ದೊಂದು ಪುಸ್ತಕವೀಗ ‘ಜೀವಂತ’ವಾಗಿ ರಕ್ಷಣಾ ಸಿಬ್ಬಂದಿಯ ಕೈ ಸೇರಿದೆ.
ವಿಪರೀತ ಮಳೆಯಿದ್ದ ಹಿನ್ನೆಲೆಯಲ್ಲಿ ಹಿಂದಿನ ದಿನವೇ ನಾರಾಯಣಾಚಾರ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಬನ್ನಿ ಸ್ವಾಮಿ ಎಂದು ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ, ನಾರಾಯಣಾಚಾರ್ ಅವರು ಕಾವೇರಿ ಸನ್ನಿಧಿಯಲ್ಲಿಯೇ ಇರುವುದಾಗಿ ಹಠ ಹಿಡಿದು ಅಲ್ಲಿಯೇ ನೆಲೆಸಿದ್ದರು.
ಇದನ್ನೂ ಓದಿ:ಕುರಿಬಿಟ್ಟು ಬರಲಾರೆ: ಪ್ರವಾಹದಲ್ಲಿ ಪ್ರಾಣ ಹೋಗುತ್ತಿದ್ದರೂ ಐದು ದಿನ ಕದಲದ ಕುರಿಗಾಹಿ!
ಮಾರನೆಯ ದಿನವೇ ಇಡೀ ಕುಟುಂಬ ಸಮಾಧಿಯಾಗಿ ಹೋಗಿದೆ. ಇದರ ಸಮಯದಲ್ಲಿಯೇ ನಾರಾಯಣಾಚಾರ್‌ ಅವರ ಮೃತದೇಹ ಪತ್ತೆಯಾಗಿಲ್ಲವಾದರೂ ಸಾವಿನ ರಹಸ್ಯವನ್ನು ಹೇಳುವ ಪುಸ್ತಕ ಮಾತ್ರ ಪತ್ತೆಯಾಗಿದೆ. ಮರಣ ಎಂದರೇನು? ಅದು ಏಕೆ ಬರುತ್ತದೆ? ಮರಣವನ್ನು ಹೇಗೆ ಗೆಲ್ಲಬಹುದು? ಸಮಾಧಿ ಲಕ್ಷಣವೇನು? ಸಮಾಜ ಭಂಗದಿಂದ ಏನು ದುಃಖ ಬರುತ್ತದೆ ಎಂಬ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಅರ್ಚಕರಾಗಿದ್ದ ನಾರಾಯಾಣಾಚಾರ್‌ ಅವರು ಭೂಕುಸಿತದಿಂದ ಸಮಾಧಿಯಾಗುವ ಸಮಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದರಾ ಎಂಬ ಸಂದೇಹವು ಈಗ ಆ ಪುಸ್ತಕ ನೋಡಿದವರನ್ನು ಕಾಡುತ್ತಿದೆ. ಈ ಪುಸ್ತಕದಲ್ಲಿ ಇರುವ ಸಾಲುಗಳನ್ನು ನೋಡಿದರೆ, ನಾರಾಯಣಾಚಾರ್‌ ಅವರಿಗೆ ಸಾವಿನ ಮುನ್ಸೂಚನೆ ಸಿಕ್ಕಿತ್ತಾ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡತೊಡಗಿದೆ.
ಪ್ರವಾಹದ ವೇಳೆ ಸೆಲ್ಫಿ ಆಸೆನಾ? ಹಾಗಿದ್ರೆ ಆರು ತಿಂಗಳು ಜೈಲಿಗೆ ಹೋಗಲು ರೆಡಿಯಾಗಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − five =
Remember me
