ಯಾದಗಿರಿ:18 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಹಾಕಿಸುವ ಟಾರ್ಗೆಟ್‌ ರೀಚ್‌ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಪರದಾಡುತ್ತಿದ್ದರೆ, ಲಸಿಕೆಯಿಂದ ಆಗಿರುವ ಕೆಲವು ಅಡ್ಡಪರಿಣಾಮಗಳನ್ನು ತಿಳಿದುಕೊಂಡಿರುವ ಜನರು ಇದನ್ನು ಹಾಕಿಕೊಳ್ಳಲು ಹಿಂಜರಿಯುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ.ಕರೊನಾ ಲಸಿಕೆ ಕುರಿತು ಎಷ್ಟೇ ಅರಿವು ಮೂಡಿಸಿದರೂ ಹಲವು ಗ್ರಾಮೀಣ ಭಾಗದ ಜನರು ಇದರ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲ. ಪ್ರತಿಯೊಬ್ಬರಿಗೆ ಲಸಿಕೆ ನೀಡುವ ಸಂಬಂಧ ಆರೋಗ್ಯ ಇಲಾಖೆ ಸಿಬ್ಬಂದಿ ಈಗ ಹಳ್ಳಿಗಳತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಇವರನ್ನು ನೋಡುತ್ತಿದ್ದಂತೆಯೇ ಹಳ್ಳಿಗರು ಓಡಿಹೋಗುತ್ತಿದ್ದಾರೆ!ಅಂತೂ ಇಂತೂ ಅವರ ಮನವೊಲಿಸಿ ಲಸಿಕೆ ಹಾಕಿಸಿಕೊಳ್ಳಿ ಎಂದರೆ, ಮೊದಲು ಹತ್ತು ಲಕ್ಷ ರೂಪಾಯಿ ಕೊಡಿ, ಆಮೇಲೆ ಸೂಜಿ ಹಾಕಿ ಎಂದು ಯಾದಗಿರಿ ಜಿಲ್ಲೆ ಬಳಿಚಕ್ರ ಗ್ರಾಮ ಜನರು ಹೇಳುತ್ತಿರುವುದಾಗಿ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ನರೆಗಾ ಕೂಲಿ ಕಾರ್ಮಿಕರಿಗೆ ಲಸಿಕೆ ನೀಡಲು ಮುಂದಾದಾಗ ಈ ರೀತಿ ಮಾತು ಹೇಳುತ್ತಿದ್ದಾರೆ. ನಮಗೇನಾದ್ರೂ ಆದರೆ ಮಕ್ಕಳನ್ನು ಕುಟುಂಬವನ್ನು ನೋಡಿಕೊಳ್ಳೋರು ಯಾರು? ಅದಕ್ಕೆ ಮೊದಲು 10 ಲಕ್ಷ ರೂ. ಕೊಡಿ ಆಮೇಲೆ ಸೂಜಿ ಚುಚ್ಚಿ ಎಂದು ಹಲವರು ಆವಾಜ್‌ ಹಾಕುತ್ತಿದ್ದಾರೆ.ಇನ್ನು ಕೆಲವರು ಯಾರನ್ನು ಕರೆಸುತ್ತಿರಿ ಕರಿಸಿ ನಾವು ನೋಡ್ತೇವೆ ಎಂದು ಅವಾಜ್ ಹಾಕಿದರೆ, ಲಸಿಕೆ ಪಡೆದಾಗ ಏನಾದ್ರೂ ಆದ್ರೆ ನಾವೇ ಜವಾಬ್ದಾರರು ಎಂದು ಬರೆದುಕೊಡಿ ಇನ್ನು ಹಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ವ್ಯಾಕ್ಸಿನ್ ಟಾರ್ಗೆಟ್ ರೀಚ್ ಮಾಡಲು ಆರೋಗ್ಯ ಸಿಬ್ಬಂದಿ ಪರದಾಡುವಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿ ರಾಗಪ್ರಿಯ ಮುಂದೆ ಅಳಲು ತೋಡಿಕೊಂಡಿದ್ದಾರೆ ಆಶಾ ಕಾರ್ಯಕರ್ತೆ ಅನಿತಾ ಹಿರೇಮಠ.
ಇಲ್ಲಿದೆ ನೋಡಿ ಗಲಾಟೆಯ ವಿಡಿಯೋ:
ಕರೊನಾ ಲಸಿಕೆ ಹಾಕಿಸಲು ಬಂದ ಆಶಾ ಕಾರ್ಯಕರ್ತೆಯರಿಗೆ ಆವಾಜ್‌ ಹಾಕಿರುವ ಘಟನೆ ಯಾದಗಿರಿ ಜಿಲ್ಲೆ ಬಳಿಚಕ್ರ ಗ್ರಾಮದಲ್ಲಿ ನಡೆದಿದೆpic.twitter.com/mpwnodplGG— Vijayavani (@VVani4U)August 16, 2021
ಕರೊನಾ ಲಸಿಕೆ ಹಾಕಿಸಲು ಬಂದ ಆಶಾ ಕಾರ್ಯಕರ್ತೆಯರಿಗೆ ಆವಾಜ್‌ ಹಾಕಿರುವ ಘಟನೆ ಯಾದಗಿರಿ ಜಿಲ್ಲೆ ಬಳಿಚಕ್ರ ಗ್ರಾಮದಲ್ಲಿ ನಡೆದಿದೆpic.twitter.com/mpwnodplGG

ಭೂಕಂಪಕ್ಕೆ ಮೃತ್ಯಕೂಪವಾದ ಹೈಟಿ: ಬೀದಿಬೀದಿಗಳಲ್ಲಿ ಹೆಣಗಳ ರಾಶಿ- ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
