ಬೆಂಗಳೂರು:ಕಳೆದ ಆಗಸ್ಟ್​ನಲ್ಲಿ ನಡೆದಿದ್ದ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯ ಸೋದರಳಿಯ ನವೀನ್ ಜೈಲಿನಿಂದ ಹೊರಬಂದಿದ್ದಾನೆ. ನಿನ್ನೆ ಹೈಕೋರ್ಟ್​ನಿಂದ ಷರತ್ತುಬದ್ಧ ಜಾಮೀನು ಮಂಜೂರು ಆಗಿದ್ದು, ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಮೊಹಮ್ಮದ್​ ಪೈಗಂಬರ್​ ವಿರುದ್ಧ ನವೀನ್​ ಅವಹೇಳನಕಾರಿ ಪೋಸ್ಟ್​ ಹಾಕಿದ್ದನ್ನೆ ನೆಪಮಾಡಿಕೊಂಡ ಗಲಭೆಕೋರರು ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ ಭೈರಸಂದ್ರದಲ್ಲಿ ದಾಂಧಲೆ ನಡೆಸಿ ಪೊಲೀಸ್​ ಠಾಣೆ, ಶಾಸಕರ ನಿವಾಸ, ಕಂಡ ಕಂಡ ವಾಹನಕ್ಕೆಲ್ಲ ಬೆಂಕಿ ಇಟ್ಟು ಗಲಭೆ ಸೃಷ್ಟಿಸಿದ್ದರು.
ನವೀನ್​ ಖುದ್ದಾಗಿ ಯಾವುದೇ ಪೋಸ್ಟ್​ ಫೇಸ್​ಬುಕ್​ನಲ್ಲಿ ಹಾಕಿರಲಿಲ್ಲ. ಬದಲಿಗೆ ಹಿಂದೂ ದೇವರಿಗೆ ಅವಹೇಳನ ಆಗುವಂತೆ ಹಾಕಿರುವ ಪೋಸ್ಟ್​ಗೆ ಕಮೆಂಟ್​ ಮಾಡಿದ್ದ ನವೀನ್​, ಇಸ್ಲಾಂ ಧರ್ಮದ ವಿರುದ್ಧ ಪೋಸ್ಟ್​ ಮಾಡಿದ್ದ. ಆದರೆ ಮೂಲವನ್ನು ಬಿಟ್ಟ ಗಲಭೆಕೋರರು ಈ ಕಮೆಂಟನ್ನೇ ದೊಡ್ಡದಾಗಿ ಬಿಂಬಿಸಿ ಗಲಭೆ ಸೃಷ್ಟಿಸಿದ್ದರು.
ಇದನ್ನೂ ಓದಿ:ಡಿಜೆಹಳ್ಳಿ ಗಲಭೆಕೋರರೊಂದಿಗೆ ಸಂಪರ್ಕ- ಕಾಲ್​ ರೆಕಾರ್ಡ್ಸ್​ನಿಂದ ‘ಸಿಕ್ಕಿಬಿದ್ದ’ ಸಂಪತ್​ರಾಜ್​ಅದನ್ನೇ ನವೀನ್​ ಸ್ಪಷ್ಟಪಡಿಸಿದ್ದಾನೆ. ‘ನಾನು ಯಾವುದೇ ಪೋಸ್ಟ್​ ಹಾಕಿರಲಿಲ್ಲ. ಬದಲಿಗೆ ಫಿರೋಜ್ ಪಾಷಾ ಎಂಬಾತ ಹಾಕಿದ್ದ ಪೋಸ್ಟ್​ಗೆ ರಿಪ್ಲೈ ಮಾಡಿದ್ದೆ. ಅದೂ ಖುದ್ದಾಗಿ ನಾನೇ ಸೃಷ್ಟಿಸಿರುವ ರಿಪ್ಲೈ ಕೂಡ ಅಲ್ಲ. ಹಿಂದೂ ದೇವರ ವಿರುದ್ಧ ಅವಹೇಳನಕಾರಿ ಪೋಸ್ಟ್​ ಹಾಕಿದ್ದ ಕಾರಣ, ಇಸ್ಲಾಂ ಧರ್ಮದ ವಿರುದ್ಧ ಏನು ಇರಬಹುದು ಎಂದು ಗೂಗಲ್​ನಲ್ಲಿ ಸರ್ಚ್​ ಮಾಡಿದ್ದೆ. ಆಗ ಸಿಕ್ಕಿದ್ದನ್ನೇ ಡೌನ್​ಲೋಡ್​ ಮಾಡಿಕೊಂಡು ರಿಪ್ಲೈನಲ್ಲಿ ಹಾಕಿದ್ದೆ. ಆದರೆ ಅದನ್ನು ಕೆಲವೇ ಗಂಟೆಗಳಲ್ಲಿ ಡಿಲೀಟ್​ ಕೂಡ ಮಾಡಿದ್ದೆ. ಆದರೆ ಅದು ಇಷ್ಟು ದೊಡ್ಡ ಗಲಭೆಗೆ ಕಾರಣ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾನೆ.
ನಾನು ಈ ರೀತಿ ಪೋಸ್ಟ್​ ಹಾಕಿದ್ದು ತಪ್ಪು. ಇದರಿಂದ ಅನೇಕ ಮಂದಿಗೆ ದೊಡ್ಡ ಮಟ್ಟದಲ್ಲಿಯೇ ಸಮಸ್ಯೆಯಾಯಿತು. ಆದ್ದರಿಂದ ಎಲ್ಲರಲ್ಲೂ ನಾನು ಕ್ಷಮೆ ಕೋರುತ್ತೇನೆ. ಆದರೆ ಹಿಂದೂ ದೇವತೆಯನ್ನು ಹೀಯಾಳಿಸಿದ್ದರಿಂದ ನನಗೆ ಸುಮ್ಮನೆ ಇರಲು ಆಗಲಿಲ್ಲ. ಆದರೆ ಇಲ್ಲಿ ನಡೆದಿರುವ ಗಲಭೆಗೆ ಬೇರೆಯೇ ಕಾರಣ ಇತ್ತು ಎಂದು ನಂತರ ತಿಳಿಯಿತು. ರಾಜಕೀಯವಾಗಿ ನನ್ನ ಮಾವ ಅಖಂಡ ಶ್ರೀನಿವಾಸರವರ ಮುಗಿಸಬೇಕು ಅಂತ ಮಾಡಿದ ಪಿತೂರಿ ಅಂತ ಗೊತ್ತಾಗಿದೆ ಎಂದೂ ನವೀನ್ ಹೇಳಿದ್ದಾನೆ.
ಮೋದಿಜೀ… ಸುಳ್​ ಹೇಳ್ಬೇಡಿ… ಬಿಹಾರಿಗಳಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರಿ?

ಉಗ್ರರ ಉರುಳಿಸಲು ಒಂದೇ ಸೆಕೆಂಡ್​ ಸಾಕಿತ್ತು ಯೋಧರಿಗೆ… ಆದರೆ ಅಲ್ಲಿ ಆದದ್ದೇ ಪವಾಡ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
