ದಾವಣಗೆರೆ:ಹೆರಿಗೆಯಾದ 2 ಗಂಟೆಯಲ್ಲಿ ನವಜಾತ ಶಿಶು ನಾಪತ್ತೆಯಾಗಿರುವ ಪ್ರಕರಣ ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾತ್ರಿ ನಡೆದಿದೆ.
ಸಂಬಂಧಿಕರ ಸೋಗಿನಲ್ಲಿ ಉಮ್ಮೇಸಲ್ಮಾ (22) ಎಂಬುವವರ ಮಗುವನ್ನು ಅಪಹರಿಸಿಕೊಂಡು ಅಪರಿಚಿತ ಮಹಿಳೆ ಪರಾರಿಯಾಗಿದ್ದು, ಸಿಸಿಟಿವಿಯಲ್ಲಿ ಘಟನಾ ದೃಶ್ಯಾವಳಿ ಸೆರೆಯಾಗಿದೆ. ಈ ಮಗು ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಉಮ್ಮೇಸಲ್ಮಾ- ಇಸ್ಮಾಯಿಲ್ ಜಬೀವುಲ್ಲಾ ದಂಪತಿಯದ್ದು.
ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಹೆರಿಗೆ ಬಳಿಕ ಮಗುವಿಗೆ ಬಟ್ಟೆ ತರಲು ಅವರು ಹೇಳಿದ್ದರು. ತಂದೆ ಬಟ್ಟೆ ತರುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು. ಸಂಬಂಧಿಕರ ಸೋಗಲ್ಲಿ ಬಂದ ಮಹಿಳೆ ಸಿಬ್ಬಂದಿಯಿಂದ ಮಗು ಪಡೆದು ಗಾಯಬ್ ಆಗಿದೆ.
ಮಗುವನ್ನು ಆಸ್ಪತ್ರೆಯ ಸಿಬ್ಬಂದಿಯೇ ಮಾರಾಟ ಜಾಲದ ಶಂಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ದಾಖಲಾಗಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.(ದಿಗ್ವಿಜಯ ನ್ಯೂಸ್​)
ಸಿಸಿಟಿವಿಯ ದೃಶ್ಯ ಇಲ್ಲಿದೆ ನೋಡಿ:
ಹೆರಿಗೆಯಾದ 2 ಗಂಟೆಯಲ್ಲಿ ನವಜಾತ ಶಿಶು ನಾಪತ್ತೆಯಾಗಿರುವ ಪ್ರಕರಣ ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದ್ದು ಅದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.pic.twitter.com/VtAq6jawZC
— Vijayavani (@VVani4U)March 17, 2022

ಕರುಳ ಕುಡಿಯನ್ನೇ ಜೀವಂತ ಹೂತು ಹಾಕಿದ ಅಮ್ಮ! ಪವಾಡಸದೃಶವಾಗಿ ಬದುಕಿದ ಮುದ್ದು ಕಂದ…

ಬಟ್ಟೆ ತೆಗೆಯದಿದ್ದರೂ, ಒಳ ಉಡುಪು ಇದ್ದಾಗ ದೌರ್ಜನ್ಯ ಎಸಗಿದರೂ ಅದು ಅತ್ಯಾಚಾರವೇ ಎಂದ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
