ಬೆಂಗಳೂರು:ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜೊತೆಜೊತೆಯಲಿ ಧಾರಾವಾಹಿ ಸದ್ಯ ಬಹಳ ಚರ್ಚೆಯಲ್ಲಿದೆ. ಇದರಲ್ಲಿನ ಬಹುಜನಪ್ರಿಯ ಕಿರುತೆರೆ ನಟ ಅನಿರುದ್ಧ್​ (ನಾಯಕ ಆರ್ಯವರ್ಧನ್​ ಪಾತ್ರಧಾರಿ) ಕುರಿತು ವಿವಾದ ಎದ್ದ ಬೆನ್ನಲ್ಲೇ ಅವರನ್ನು ಧಾರಾವಾಹಿಯಿಂದ ಹೊರಕ್ಕೆ ಹಾಕಲಾಗಿದೆ.
ಸದ್ಯ ಅವರು ಇದ್ದಾಗ ಎಷ್ಟು ಚಿತ್ರೀಕರಣ ನಡೆದಿತ್ತೋ ಆ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಅನಿರುದ್ಧ್​ ಅವರ ಜಾಗದಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ನಮಗೆ ಅವರೇ ಬೇಕು ಎಂದು ಅನೇಕ ಮಂದಿ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇವುಗಳ ನಡುವೆಯೂ ಅನಿರುದ್ಧ್​ ಅವರನ್ನು ಮುಂದುವರೆಸುವ ಬಗ್ಗೆ ನಿರ್ಮಾಪಕರು ಯಾವುದೇ ಸುದ್ದಿಯನ್ನು ಕೊಡಲಿಲ್ಲ. ಆರ್ಯವರ್ಧನ್ ಪಾತ್ರಧಾರಿಯಾಗಿ ವಿಜಯ್​ ರಾಘವೇಂದ್ರ, ಹರೀಶ್​ ರಾಜ್ ಅಥವಾ ಅನೂಪ್​ ಭಂಡಾರಿ ಬರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
ಇವುಗಳ ನಡುವೆಯೇ ಇದೀಗ ಹೊಸ ಪಾತ್ರದ ಎಂಟ್ರಿಯಾಗಿದೆ. ಆದರೆ ಇವರು ಆರ್ಯವರ್ಧನ್​ ಪಾತ್ರಧಾರಿಯಾಗಿ ಬರುತ್ತಿಲ್ಲ, ಬದಲಿಗೆ ಅವರ ಸಹೋದರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಹೆಸರು ಹರೀಶ್​ ರಾಜ್.
ಇವರು ಎಂಟ್ರಿ ಕೊಡುತ್ತಿರುವ ಪ್ರೊಮೊ ಬಿಡುಗಡೆಯಾಗಿದೆ.ಇದರಲ್ಲಿ ಹರೀಶ್​ ಕಾಣಿಸಿಕೊಂಡಿದ್ದಾರೆ. . 700 ಕೋಟಿ ರೂ. ಸಾಲ ಮಾಡಿ ಸಂಕಷ್ಟದಲ್ಲಿ ಸಿಲುಕಿರುವ ವಿಶ್ವಾಸ್​ ದೇಸಾಯಿ ಎಂಬ ಪಾತ್ರದಲ್ಲಿ ಹರೀಶ್​ ರಾಜ್​ ಕಾಣಿಸಿಕೊಂಡಿದ್ದಾರೆ. ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು ಒಬ್ಬ ಆರ್ಯವರ್ಧನ್, ಮತ್ತೊಬ್ಬ ವಿಶ್ವಾಸ್ ದೇಸಾಯಿ. ವಿಶ್ವಾಸ್ ದೇಸಾಯಿ ಈಗ ಸಂಕಷ್ಟದಲ್ಲಿದ್ದು, ತಾಯಿ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಅದಕ್ಕೆ ಪ್ರಿಯದರ್ಶಿನಿ, ಆರ್ಯವರ್ಧನ್‍ಗೆ ಹೇಳಿ ತನ್ನ ಮಗನ ಸಂಕಷ್ಟ ದೂರ ಮಾಡುವ ಪ್ರಯತ್ನದಲ್ಲಿ ಇದ್ದಾಳೆ.
ಈ ಕುರಿತು ಮಾತನಾಡಿರುವ ಜೀ ಕನ್ನಡದ ಫಿಕ್ಷನ್​ ಮುಖ್ಯಸ್ಥ ಸುಧೀಂದ್ರ ಭಾರದ್ವಾಜ್​ ಅವರು, “ಹರೀಶ್​ ರಾಜ್​ ಅವರ ಪಾತ್ರ ಈ ಧಾರಾವಾಹಿಯಲ್ಲಿ ಆರ್ಯವರ್ಧನ್​ ಸಹೋದರನದ್ದು. ಈ ಪಾತ್ರದಿಂದ ಅನು ಪಾತ್ರದ ಜೀವನದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಎಂಬ ನಿಟ್ಟಿನಲ್ಲಿ ಧಾರಾವಾಹಿ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಇವೆಲ್ಲವುಗಳ ನಡುವೆ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಪಾತ್ರಕ್ಕೆ ಯಾರು ಬರ್ತಾರೆ ಅನ್ನುವ ಕುತೂಹಲ ಮಾತ್ರ ಹಾಗೆಯೇ ಉಳಿದಿದೆ.
ಅವರು ಹಿಂದಿನ ಸಂಚಿಕೆಯಲ್ಲಿ ಮನನೊಂದುಕೊಂಡು ಮನೆಬಿಟ್ಟು ಹೋದ ದೃಶ್ಯ ಇದ್ದಾಗ ಇದೇ ಕೊನೆ, ಮತ್ತೆ ವಾಪಸ್​ ಬರುವುದಿಲ್ಲ. ಈ ಪಾತ್ರ ಮುಗಿಯಿತು ಎಂದು ಅಂದುಕೊಂಡವರೇ ಹೆಚ್ಚು. ಆದರೆ ಪುನಃ ಅವರನ್ನು ಪತ್ನಿ ವಾಪಸ್​ ಮನೆಗೆ ಕರೆದುಕೊಂಡು ಬಂದಿದ್ದಾರೆ. ಹಾಗಿದ್ದರೆ ಅವರ ಪಾತ್ರಕ್ಕೆ ಅಂತ್ಯ ಹೇಗಾಗುತ್ತದೆ, ಯಾರು ಬರುತ್ತಾರೆ ಎನ್ನುವ ಕುತೂಹಲ ಧಾರಾವಾಹಿ ಪ್ರಿಯರದ್ದು.
ಬೆತ್ತಲಾಗಿ ಪೊಲೀಸರ ಕೈಗೆ ಸಿಕ್ಕಿಕೊಂಡ ನಟ ರಣವೀರ್​: 2 ಗಂಟೆ ಪೊಲೀಸ್​ ಡ್ರಿಲ್- ನಟ ಹೇಳಿದ್ದೇನು ನೋಡಿ…

ಚಿರು ಸರ್ಜಾ ಸಾವಿನ ನಂತರ 2ನೇ ಮದುವೆ ಆಗ್ತಿದ್ದಾರಾ ನಟಿ ಮೇಘನಾ ರಾಜ್? ಸಂದರ್ಶನದಲ್ಲಿ ಅವರು ಹೇಳಿದ್ದೇನು ಕೇಳಿ…​

ವೈಜಯಂತಿ ಮಾಲಾ@86: ಮೊದಲ ಬಾರಿಗೆ ಬಿಕಿನಿ ಧರಿಸಿ ಸಿನಿ ಜಗತ್ತಲ್ಲಿ ಹಂಗಾಮಾ ಸೃಷ್ಟಿಸಿದ್ದ ನಟಿ ಬಿಚ್ಚಿಟ್ಟ ಅನುಭವದ ಬುತ್ತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
