ಬೆಂಗಳೂರು:ಹಣದ ಸಮಸ್ಯೆಯಿಂದ ಡಯಾಲಿಸಿಸ್ ಸೇವೆ ಪಡೆಯಲು ಹರಸಾಹಸಪಡುತ್ತಿರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಇನ್ನು ಮುಂದೆ ಪರದಾಡಬೇಕಿಲ್ಲ. ಊದುಬತ್ತಿ ತಯಾರಕರು ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಪಂಗಿರಾಮನಗರದ ಮಿಷನ್ ರಸ್ತೆಯಲ್ಲಿ ಹೊಸದಾಗಿ ತೆರೆದಿರುವ ಸುಸಜ್ಜಿತ ‘ಆಶಾ ಕಿರಣ್ ಡಯಾಲಿಸಿಸ್ ಸೆಂಟರ್’ನಲ್ಲಿ ಉಚಿತವಾಗಿ ಡಯಾಲಿಸಿಸ್ ಮತ್ತು ಔಷಧ ಸೇವೆ ಲಭ್ಯವಿದೆ. ಈ ಆಸ್ಪತ್ರೆ ಭಾನುವಾರ ಲೋಕಾರ್ಪಣೆಗೊಂಡಿದ್ದು, ಆರೋಗ್ಯ ಸಚಿವ ಸುಧಾಕರ್ ಉದ್ಘಾಟನೆ ಮಾಡಿದ್ದಾರೆ.
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಯಾವುದೇ ಧರ್ಮದ ರೋಗಿಗಳು ಉಚಿತವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಬಹುದು. ಜತೆಗೆ, ಔಷಧ ಮತ್ತು ಊಟವೂ ಸಿಗಲಿದೆ. ಅಂದಾಜು 6 ಕೋಟಿ ರೂ. ವೆಚ್ಚದಲ್ಲಿ ಈ ಆಸ್ಪತ್ರೆ ಸ್ಥಾಪನೆಯಾಗಿದೆ. ರೋಗಿಗಳು ಒಂದು ನಯಾಪೈಸೆಯೂ ಹಣ ಪಾವತಿಸುವಂತಿಲ್ಲ. ಆಸ್ಪತ್ರೆಯಲ್ಲಿ 28 ಹಾಸಿಗೆಗಳಿವೆ. ಆಧುನಿಕ ವೈದ್ಯಕೀಯ ಸಲಕರಣೆಗಳನ್ನು ಅಳವಡಿಸಲಾಗಿದೆ. ಎರಡು ಶಿಫ್ಟ್​ಗಳಲ್ಲಿ ಡಯಾಲಿಸಿಸ್ ಸೇವೆ ರೋಗಿಗಳಿಗೆ ಸಿಗಲಿದೆ. ತಜ್ಞ ವೈದ್ಯರು ಸೇರಿ 12 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ನಿತ್ಯ 40 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ಪ್ರಮುಖ ದಾನಿಯಾದ ಸುಂಕು ಗುಂಡಯ್ಯ ಶೆಟ್ಟಿ ಹಾಗೂ ಕೆ.ಎನ್.ಸತ್ಯಂ ಶೆಟ್ಟಿ ಹೆಸರಿನಲ್ಲಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕ ತೆರೆಯಲಾಗಿದೆ. ಮುಂದಿನ 2-3 ತಿಂಗಳಲ್ಲಿ ಪ್ರತಿ ನಿತ್ಯ 100 ರೋಗಿಗಳಿಗೆ ಸೇವೆ ನೀಡುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ. ರಾಜ್ಯದ ಯಾವುದೇ ಭಾಗದಿಂದ ಬರುವ ರೋಗಿಗಳಿಗೂ ಈ ಸೇವೆ ಲಭ್ಯವಿದೆ.
ಆಶಾಕಿರಣ ಮೂಡಲಿ:ರೋಗಿಗಳ ಬದುಕಿನಲ್ಲಿ ಭರವಸೆ ತುಂಬುವುದಕ್ಕೆ ಆಶಾ ಮತ್ತು ರೋಗಿಗಳ ಜೀವನದಲ್ಲಿ ಬೆಳಕು ತರಲು ಕಿರಣ ಕಾರಣವಾಗಿರುತ್ತೆ. ಹಾಗಾಗಿ, ಆಸ್ಪತ್ರೆಗೆ ಆಶಾ ಕಿರಣ್ ಎಂದು ನಾಮಕಾರಣ ಮಾಡಲಾಗಿದೆ ಎನ್ನುತ್ತಾರೆ ಮೈಸೂರು ಊದುಬತ್ತಿ ತಯಾರಕರು ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸುಂಕು ಜಗನ್ನಾಥ್. ಕರೊನಾ ಸಂದರ್ಭದಲ್ಲಿ ಡಯಾಲಿಸಿಸ್ ಸೇವೆ ಸಿಗದೆ ನೂರಾರು ರೋಗಿಗಳು ಉಸಿರು ನಿಲ್ಲಿಸಿದ್ದರು. ಅಂಥ ಸಮಸ್ಯೆ ಬಾರದಂತೆ ದಾನಿಗಳ ನೆರವು ಮೂಲಕ ಮತ್ತು ನಮ್ಮ ಸ್ವಂತ ಹಣದಿಂದ ಈ ಆಸ್ಪತ್ರೆ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ರೋಗಿಗಳಿಗೆ ಅಂಗಾಂಗ ಜೋಡಣೆ ವ್ಯವಸ್ಥೆ ಕಲ್ಪಿಸುವ ಹೊಸ ಆಸ್ಪತ್ರೆ ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ. ಯೋಜನೆ ಕಾರ್ಯರೂಪಕ್ಕೆ ತರಲು ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಸಾಕಷ್ಟು ದಾನಿಗಳೂ ಸಹ ಇದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
24X7 ಸೇವೆ ಲಭ್ಯ: ಆಶಾ ಕಿರಣ್ ಡಯಾಲಿಸಿಸ್ ಸೆಂಟರ್ ಟ್ರಸ್ಟ್‌ನ ಟ್ರಸ್ಟಿ ಸುಂಕು ಗುಂಡಯ್ಯ ರಾಧಾಕೃಷ್ಣ ಮಾತನಾಡಿ, ದಿನದ 24 ಗಂಟೆಯೂ ವೈದ್ಯರು ಇರುತ್ತಾರೆ. ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಮತ್ತು ಔಷಧ ಸೇವೆ ರೋಗಿಗಳಿಗೆ ಸಿಗಲಿದೆ. ಪ್ರತಿ ವಾರ 2-3 ಬಾರಿ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ದೇಶದಲ್ಲಿ ಒಟ್ಟಾರೆ 380 ಡಯಾಲಿಸಿಸ್ ಸೆಂಟರ್‌ಗಳು ಉಚಿತವಾಗಿ ಸೇವೆ ಒದಗಿಸುತ್ತಿವೆ. ಪ್ರತಿ ನಿತ್ಯ ಡಯಾಲಿಸಿಸ್‌ಗೆ ಬೇಡಿಕೆ ಹೆಚ್ಚುತ್ತಿದೆ. ಈ ಸಮಸ್ಯೆ ನಿವಾರಿಸುವ ಸಲುವಾಗಿ ಆಸ್ಪತ್ರೆ ತೆರೆಯಲಾಗಿದೆ ಎಂದರು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳು ಈ ಸೇವೆ ಬಳಸಿಕೊಳ್ಳಬೇಕು. ನಮ್ಮ ಸುತ್ತಮುತ್ತ ಇರುವ ಸ್ನೇಹಿತರು, ಕುಟುಂಬದ ಸದಸ್ಯರು, ಉದ್ಯಮಿಗಳು ಸೇರಿ ಇತರರು ಲಕ್ಷಾಂತರ ರೂಪಾಯಿ ದಾನ ನೀಡಿದ್ದಾರೆ. ಟ್ರಸ್ಟ್ ರಚಿಸಿಕೊಂಡು ಆಸ್ಪತ್ರೆ ಮೇಲ್ವಿಚಾರಣೆ ಮಾಡಲಾಗುವುದು. ದಾನಿಗಳ ಇಲ್ಲದಿದ್ದರೂ ಆಸ್ಪತ್ರೆ ಕಾರ್ಯಾಚರಣೆ ನಡೆಸುವುದಕ್ಕೆ ಪ್ರತ್ಯೇಕ ಹಣವನ್ನೂ ಇಡಲಾಗಿದೆ ಎಂದು ವಿವರಿಸಿದರು.
ಆಸ್ಪತ್ರೆ ವಿಳಾಸ:ಆಶಾ ಕಿರಣ್ ಡಯಾಲಿಸಿಸ್ ಸೆಂಟರ್, ನಂ.18/3, ಮೊದಲನೇ ಹಂತ, ಮಿಷನ್ ರಸ್ತೆ, ಸಂಪಂಗಿರಾಮನಗರ, ಬೆಂ-27.
VIDEO: ಕೋಲಾರದಲ್ಲಿ ತಯಾರಾಗ್ತಿದೆ ದೇಶದ ಅತಿದೊಡ್ಡ ತ್ರಿವರ್ಣ ಧ್ವಜ: ಆಹಾ! ಎಷ್ಟೆಲ್ಲಾ ವಿಶೇಷತೆಗಳು…

ವಿಚ್ಛೇದನಕ್ಕೆಂದು ಬಂದ ಐವರು ತುಮಕೂರಿನ ದಂಪತಿ, ಹಾರ ಬದಲಿಸಿಕೊಂಡು ಜತೆಯಾಗಿ ಹೋದರು!

ಕಾಂಗ್ರೆಸ್​ನ ‘ಸ್ವಾತಂತ್ರ್ಯ ನಡಿಗೆ’ಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬರುತ್ತಿರುವಿರಾ? ವಿಶೇಷ ಸೌಲಭ್ಯದ ಮಾಹಿತಿ ಇಲ್ಲಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 4 =
Remember me
