ಬಳ್ಳಾರಿ:ಈ ಸುದ್ದಿಯನ್ನು ಓದಿದರೆ ನಿಜಕ್ಕೂ ಎಂತೆಂಥ ಮನಸ್ಥಿತಿಯವರು ಇರುತ್ತಾರಪ್ಪಾ ಎಂದು ಅನ್ನಿಸದೇ ಇರಲಾರದು. ಜೀವನದಲ್ಲಿ ಎಷ್ಟೊಂದು ಸಮಸ್ಯೆಗಳು ಬಂದರೂ ಎದೆಗುಂದದೇ ಅದನ್ನು ಧೈರ್ಯದಿಂದ ಎದುರಿಸುವವರು ಎಷ್ಟೋ ಮಂದಿ ಇದ್ದಾರೆ.
ಆದರೆ ಪತ್ನಿಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ ಎಂದು ಮನನೊಂದು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ನಂಬುವಿರಾ?
ಇಂಥದ್ದೊಂದು ವಿಚಿತ್ರ ಹಾಗೂ ದೌರ್ಭಾಗ್ಯದ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ. ಮದುವೆಯಾಗಿ ನಾಲ್ಕೇ ತಿಂಗಳಿಗೆ ಈ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ!
ಇದನ್ನೂ ಓದಿ:ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಗ್ರಾಮದ ಶರಣೇಶ (29) ಎಂಬಾತ ಈ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಯುವಕ. ನಾಲ್ಕು ತಿಂಗಳ ಹಿಂದೆಯಷ್ಟೆ ಕುಟುಂಬದವರು ನಿಶ್ಚಯಿಸಿದ್ದ ಯುವತಿಯೊಂದಿಗೆ ವಿವಾಹವಾಗಿದ್ದನು. ಪಾಲಕರ ಇಚ್ಛೆಯಂತೆ ಮದುವೆಯಾಗಿದ್ದ ಶರಣೇಶ್‌ಗೆ ತನ್ನ ಪತ್ನಿ ಒಳ್ಳೊಳ್ಳೆ ಅಡುಗೆ ಮಾಡಿ ಬಡಿಸಬೇಕು ಎಂಬ ಕನಸಿತ್ತು.
ಆದರೆ ಆಕೆಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿರಲಿಲ್ಲ. ಇದರಿಂದ ಶರಣೇಶ‌ ತುಂಬಾ ನೊಂದುಕೊಂಡಿದ್ದ. ಮದುವೆಯಾಗಿ ನಾಲ್ಕು ತಿಂಗಳಾದರೂ ಅಡುಗೆಯನ್ನು ಆಕೆ ಸರಿಯಾಗಿ ಮಾಡಲು ಕಲಿತಿಲ್ಲ ಎನ್ನುವ ಅಸಮಾಧಾನ ತುಂಬಾ ಆತನನ್ನು ಕಾಡುತ್ತಿತ್ತು.
ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವಿಷಯವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ಕೂಡ ಆಗುತ್ತಿತ್ತು.
ಇಂದು ಇದರಿಂದ ಮನನೊಂದ ನವ ವಿವಾಹಿತ ಶರಣೇಶ ತನ್ನ ಗ್ರಾಮ ಹೊರವಲಯದಲ್ಲಿರುವ ಹೊಲದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‌‌ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದರಾಮಯ್ಯ ಪುತ್ರನಿಗೂ ಕರೊನಾ ಸೋಂಕು ದೃಢ

ಮಲ್ಯ ಕೇಸ್‌ಗೆ ಟ್ವಿಸ್ಟ್‌: ಮಹತ್ವದ ದಾಖಲೆಗಳು ಕೋರ್ಟ್ ಫೈಲ್‌ನಿಂದ ಮಿಸ್ಸಿಂಗ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
