ಬೆಂಗಳೂರು:ಸದ್ಯ ಕರೊನಾ ವೈರಸ್​ ಎರಡನೆಯ ಅಲೆಗೆ ಬಹುತೇಕ ಎಲ್ಲಾ ರಾಜ್ಯಗಳೂ ನಲುಗುತ್ತಿವೆ. ಅದರಲ್ಲಿಯೂ ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಕರೊನಾ ಕೇಸ್​ ದಾಖಲಾಗುತ್ತಿರುವುದ ಕರ್ನಾಟಕ, ಕೇರಳದಲ್ಲಿ. ನಂತರದ ಸ್ಥಾನ ಆಂಧ್ರಪ್ರದೇಶ, ತಮಿಳುನಾಡು.ಆದ್ದರಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂಗೆ ಸರ್ಕಾರ ಮುಂದಾಗಿದೆ.
ನಾಳೆಯಿಂದ ಅಂದರೆ ಏಪ್ರಿಲ್​ 10ರಿಂದ ಏಪ್ರಿಲ್​ 20ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಕಲಬುರಗಿ, ತುಮಕೂರು, ಕಲಬುರಗಿ ಜಿಲ್ಲೆಗಳಲ್ಲಿ ನಗರಕ್ಕೆ ಮಾತ್ರ ಸೀಮಿತವಾಗುತವಂತೆ ಇದು ಜಾರಿಯಾಗಲಿದೆ.
ಒಂದು ವೇಳೆ ಈ ಅವಧಿಯಲ್ಲಿಯೂ ಕರೊನಾ ನಿಯಂತ್ರಣಕ್ಕೆ ಬಾರದೇ ಹೋದರೆ, ಜನರು ಸಹಕರಿಸದೇ ಹೋದರೆ ಲಾಕ್​ಡೌನ್​ ಆದರೂ ಅಚ್ಚರಿಯಿಲ್ಲ. ಸದ್ಯ ನೈಟ್​ ಕರ್ಫ್ಯೂಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಸರ್ಕಾರ ವಿಧಿಸಿದೆ.
ಒಟ್ಟು 10 ದಿನಗಳ ಕಾಲ ಈ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಸಂದರ್ಭದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಡಿಸ್ಕೊಥೆಕ್, ಪಬ್, ಕ್ಲಬ್‍ಗಳು, ಗಾರ್ಮೆಂಟ್ಸ್, ಕೈಗಾರಿಕೆಗಳು, ಹೋಟೆಲ್‍ಗಳು, ಸಭೆ-ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ಔತಣಕೂಟಗಳು, ಹಾರ್ಡ್‍ವೇರ್, ಮಾಲ್‍ಗಳು, ಮಾರುಕಟ್ಟೆ, ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳು ಸಂಪೂರ್ಣ ಮುಚ್ಚಬೇಕಿದೆ.
ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು, ಕಂಪೆನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕರೊನಾ ಕರ್ಫ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರು ಇರಬೇಕು ಎಂದು ಸರ್ಕಾರ ಹೇಳಿದೆ.
ಆದರೆ ಆಸ್ಪತ್ರೆ, ಅಂಬ್ಯುಲೆನ್ಸ್​, ಬಸ್ ಸಂಚಾರ, ಹಣ್ಣು, ಹಾಲು, ತರಕಾರಿ, ಔಷಧಿ ಅಂಗಡಿಗಳು ತೆರೆದೇ ಇರುತ್ತವೆ.ನೈಟ್​ ಕರ್ಫ್ಯೂ ಸಂದರ್ಭದಲ್ಲಿ ಯಾರೂ ಗುಂಪುಗೂಡುವಂತಿಲ್ಲ, ಹೋಟೆಲ್, ರೆಸ್ಟೋರೆಂಟ್, ಪಾರ್ಟಿ ಇತ್ಯಾದಿಗಳನ್ನು ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ.
ನೈಟ್​ ಕರ್ಫ್ಯೂ ಏಕೆ?
ಅಷ್ಟಕ್ಕೂ ನೈಟ್​ ಕರ್ಫ್ಯೂಗೂ ಕರೊನಾಕ್ಕೂ ಏನು ಸಂಬಂಧ ಎಂದು ಕೇಳುವವರೇ ಹೆಚ್ಚು. ಹಗಲಿಗೆ ಹೋಲಿಸಿದರೆ ರಾತ್ರಿ ತಂಪಾದ ಹವೆ ಇರುತ್ತದೆ. ಆದ್ದರಿಂದ ವೈರಸ್ ಬೇಗಣೆ ಚದುರಿ ಹೋಗುವುದಿಲ್ಲ. ಒಟ್ಟಿಗೇ ಒಂದೇ ಕಡೆ ಇರುತ್ತದೆ. ಬಿಸಿಲಿನಲ್ಲಿ ಇರುವ ಅತಿನೇರಳೆ ಕಿರಣ ರಾತ್ರಿಯ ಹೊತ್ತು ಕಡಿಮೆಯಾಗುತ್ತಾ ಸಾಗುತ್ತದೆ. ಆದ್ದರಿಂದ ಹೊರಗಿನ ಸ್ಥಳದಲ್ಲೂ ರಾತ್ರಿಯ ಹೊತ್ತು ವೈರಸ್ ಬದುಕುಳಿಯುವ ಸಾಧ್ಯತೆ ಹೆಚ್ಚೇ ಇರುತ್ತದೆ. ಈ ಸಂದರ್ಭದಲ್ಲಿ ಓಡಾಟ, ಒಟ್ಟುಗೂಡುವಿಕೆ ಕಡಿಮೆ ಮಾಡಿದರೆ ತಕ್ಕಮಟ್ಟಿಗೆ ಕರೊನಾ ಹಾವಳಿ ಹರಡುವುದನ್ನು ತಪ್ಪಿಸಬಹುದು ಎನ್ನುವುದು ತಜ್ಱರ ಅಭಿಮತ.
ಗುಂಡು ಕೊಟ್ಟಿಲ್ಲವೆಂದು ವಿಮಾನಕ್ಕೇ ಬೆಂಕಿ ಇಡಲು ಹೊರಟಳು ಈ ಮಾಡೆಲ್​- ಹೌಹಾರಿದ ಪ್ರಯಾಣಿಕರು!

ಮಗುವಿಗಾಗಿ ಮರು ಮದ್ವೆಯಾದ್ರೆ ಇಬ್ಬರಿಗೂ ಮಕ್ಕಳಾದ್ವು- ಎರಡನೆ ಹೆಂಡ್ತಿ ಮಕ್ಕಳಿಗೆ ಆಸ್ತಿ ಸಿಗಲ್ವಾ?

ಈಗ ಮಾಡಿರೋದ್ರಲ್ಲಿ ಲೋಪವಿದೆಯಾ ಹೇಳಿ… ಯಾರ‍್ಯಾರದೋ ಮಾತು ಕೇಳಬೇಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − two =
Remember me
