ದಾವಣಗೆರೆ:ದಾವಣಗೆರೆಯಲ್ಲಿ ತಡ ರಾತ್ರಿ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮಧ್ಯರಾತ್ರಿ 2 ಗಂಟೆಯವರೆಗೂ ಅಕ್ರಮವಾಗಿ ಯುವಕ ಯುವತಿಯರು ಸೇರಿ ಪಾರ್ಟಿ ಮಾಡಿದ್ದಾರೆ.
ದಾವಣಗೆರೆಯ ಪಕ್ಕದ ಮಿಟ್ಲಕಟ್ಟೆ ಗ್ರಾಮದಲ್ಲಿರುವ ‘ದಿ ಸ್ಟೇಜ್’ ಹೋಟೆಲ್​ನಲ್ಲಿ ಈ ಘಟನೆ ನಡೆದಿದೆ. ಯುವಕ-ಯುವತಿಯರು ಸೇರಿ ರಾತ್ರಿ 2 ಗಂಟೆಯವರೆಗೂ ಡಿಜೆ ಸಾಂಗ್​ಗಳಿಗೆ ಕುಣಿಯುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸರ ದಾಳಿಯಾಗುತ್ತಿದ್ದಂತೆಯೇ ನಶೆಯಲ್ಲಿದ್ದ ಯುವಕ-ಯುವತಿಯರು ಮುಖ ಮುಚ್ಚಿಕೊಂಡು ಅಲ್ಲಿಂದ ಹೊರ ನಡೆದಿದ್ದಾರೆ. ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಂಡುಬಂದಿದೆ. ಪಾರ್ಟಿಯಲ್ಲಿ ಮಾದಕವಸ್ತು ಬಳಕೆಯಾಗಿರುವ ಬಗ್ಗೆ ಶಂಕೆಯೂ ವ್ಯಕ್ತವಾಗಿದೆ.
ಪ್ರತಿ ವೀಕೆಂಡ್​ಗಳಲ್ಲಿ ಅಕ್ರಮವಾಗಿ ಇಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ದಾವಣಗೆರೆಯ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್​ನವರೇ ಈ ಪಾರ್ಟಿ ಆಯೋಜನೆ ಮಾಡುತ್ತಿದ್ದು, ಕೇವಲ ಜೋಡಿಗಳಿಗೆ ಮಾತ್ರ ಪಾರ್ಟಿಗೆ ಪ್ರವೇಶ ನೀಡಲಾಗುತ್ತಿತ್ತು ಎಂಬ ವಿಷಯವೂ ತಿಳಿದು ಬಂದಿದೆ.(ದಿಗ್ವಿಜಯ ನ್ಯೂಸ್​)
ಚುನಾವಣಾ ಅಫಿಡವಿಟ್​ನಲ್ಲಿ 73, ವೆಬ್​ಸೈಟ್​ನಲ್ಲಿ 74, ಜನ್ಮದಿನ ನಡೆದದ್ದು 75! ಸಿದ್ದು ವಯಸ್ಸಿನ ಬಿಸಿಬಿಸಿ ಚರ್ಚೆ

ರಾಮಾಯಣ ರಸಪ್ರಶ್ನೆಯಲ್ಲಿ ಅಗ್ರಸ್ಥಾನ ಪಡೆದ ಮುಸ್ಲಿಂ ಯುವಕರು: ಸಾಧನೆ ಕುರಿತು ಅವರು ಹೇಳಿದ್ದು ಹೀಗೆ…

ಗ್ರಾಹಕರಿಗೆ ಸ್ಪಂದಿಸದ ಬಿಎಸ್​ಎನ್​ಎಲ್​ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಸಚಿವ: 24 ತಿಂಗಳ ಡೆಡ್​ಲೈನ್​, ಇಲ್ಲದಿದ್ರೆ ಮನೆಗೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 9 =
Remember me
