ಧಾರವಾಡ:ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಕಾಂಗ್ರೆಸ್​ನ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕಳೆದ ನವೆಂಬರ್ 5 ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ಬಂಧನ ಮಾಡಿತ್ತು. ಇದಾದ ನಂತರ ಧಾರವಾಡ ಜಿಲ್ಲಾ ಪ್ರಧಾನ ಮತ್ತು ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ಕೂಡ ಇವರಿಗೆ ಜಾಮೀನು ಸಿಕ್ಕಿರಲಿಲ್ಲ.
ಈ ಆದೇಶ ಪ್ರಶ್ನಿಸಿ ನಂತರ ಹೈಕೋರ್ಟ್ ಮೊರೆ ಹೋಗಿದ್ದರು. ಅನೇಕ ಬಾರಿ ಅರ್ಜಿಯ ವಿಚಾರಣೆ ಮುಂದೂಡುತ್ತ ಬಂದಿತ್ತು. ಇಂದು ವಿಚಾರಣೆ ಸಂಪೂರ್ಣಗೊಳಿಸಿರುವ ಕೋರ್ಟ್​, ಜಾಮೀನು ನೀಡಲು ನಿರಾಕರಿಸಿದೆ. ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದೆ.
ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದರು. ಈ ಆರೋಪ ನಿರಾಧಾರವಾಗಿದ್ದು, ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ಅವರು ಕೋರಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ನಟರಾಜ ಅವರು ವಾದವನ್ನು ಮಾನ್ಯ ಮಾಡದೇ ಅರ್ಜಿ ವಜಾಗೊಳಿಸಿದರು.
VIDEO: ವಿಐಪಿ ಕಾರ್​ ಬಿಟ್ಟು ಆಟೋದಲ್ಲಿ ಪಾಕ್​ ಪ್ರಧಾನಿ​? ಹೀಗೇಕಾಯ್ತೆಂದು ಪ್ರಶ್ನಿಸ್ತಿದ್ದಾರೆ ಜನ!

ನಶೆ ತಾರೆಗೆ ಅಂತೂ ಸಿಕ್ತು ಬೇಲ್​: 140 ದಿನಗಳ ಜೈಲುವಾಸದಿಂದ ಹೊರಬರಲಿರುವ ನಟಿ

https://www.vijayavani.net/s-nyayadevate-veeryanu-korateyinda/
ಬೈಡೆನ್​ಗೆ ಕೊನೆಯ ಪತ್ರ ಬರೆದ ಟ್ರಂಪ್​: ಇದು ಸಿಕ್ರೇಟ್​- ನಾನು ಹೇಳಲ್ಲ ಎಂದ ನೂತನ ಅಧ್ಯಕ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
