ಬಳ್ಳಾರಿ:ಉ‍ಪಮುಖ್ಯಮಂತ್ರಿಯಾಗಬೇಕೆಂದು ಬಹಳ ಕನಸು ಕಂಡಿದ್ದ ಸಚಿವ ಶ್ರೀರಾಮುಲು ಅವರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಈ ಬಾರಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರ ಕನಸು ಭಗ್ನವಾಗಿತ್ತು. ಆದರೆ ಇದೀಗ ಬಳ್ಳಾರಿಯೂ ಅವರ ಕೈತಪ್ಪಿದೆ.
ಶ್ರೀರಾಮುಲು ಅವರಿಗೆ ಬಳ್ಳಾರಿಯ ಉಸ್ತುವಾರಿಯಾಗಬೇಕು ಎಂಬ ಬಹುದೊಡ್ಡ ಕನಸಿತ್ತು. ಆದರೆ ಅದು ಕೂಡ ಈಗ ಭಗ್ನವಾಗಿದೆ. ಕರೊನಾ ಹಾಗೂ ಪ್ರವಾಹ ನಿರ್ವಹಣೆಯ ಹೆಸರಿನಲ್ಲಿ ನೂತನ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿಯನ್ನ ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯನ್ನು ಆನಂದ್ ಸಿಂಗ್‌ ಅವರಿಗೆ ನೀಡಲಾಗಿದೆ.
ಶ್ರೀರಾಮುಲುಗೆ ಚಿತ್ರದುರ್ಗದ ಜಿಲ್ಲೆಯನ್ನು ಹಂಚಿಕೆ ಮಾಡಲಾಗಿದೆ. ಶ್ರೀರಾಮುಲು ನಾಲ್ಕು ಬಾರಿ ಸಚಿವರಾಗಿದ್ದರೂ ತಾವು ಬಯಸಿದ ಬಳ್ಳಾರಿ ಉಸ್ತುವಾರಿ ಸಿಕ್ಕಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ಬಳ್ಳಾರಿ ಉಸ್ತುವಾರಿ ಪಡೆಯಲು ಬಾರಿ ಲಾಬಿ ಮಾಡಿದ್ದರೂ ಆಗಲೂ ಅವರು ವಿಫಲರಾಗಿದ್ದರು.
ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಕಾಂಗ್ರೆಸ್‌ ಶಾಸಕ ಜಮೀರ್ ಅಹಮ್ಮದ್‌ ಖಾನ್‌: ED ರೇಡ್‌!

ರಾಜ್ಯದಲ್ಲೂ ಐಸಿಸ್‌ ಉಗ್ರರ ಲಿಂಕ್‌! ಮಾಜಿ ಶಾಸಕನ ಮೊಮ್ಮಗ ಸೇರಿ ನಾಲ್ವರು ಅರೆಸ್ಟ್‌- ಹಿನ್ನೆಲೆ ಭಯಾನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 4 =
Remember me
