ಬೆಂಗಳೂರು:ಕರೊನಾ ನಿಯಂತ್ರಕ್ಕಾಗಿ ಸರ್ಕಾರ ಲಾಕ್ ಡೌನ್ ಮುಂದುವರೆಸುತ್ತಿರುವುದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತಿದೆಯೇ? ವಾರಾಂತ್ಯದಲ್ಲಿ ನಗರದ ಮಾರುಕಟ್ಟೆಗಳಲ್ಲಿ ಜಮಾವಣೆಯಾಗುತ್ತಿರುವ ಜನಸಾಗರ ದೃಶ್ಯ ಹೌದೌದು ಎನ್ನುವಂತಿದೆ. ಇಂದು ಬಿಟ್ಟರೆ ಮುಂದೆ ಯಾವತ್ತೂ ಸಿಗುವುದಿಲ್ಲವೇನೋ ಎಂಬಂತೆ ಕೋಳಿ, ಮಾಂಸದ ಅಂಗಡಿ ಸೇರಿ ಮಾರುಕಟ್ಟೆಗಳಲ್ಲಿ ಜನಸಂದಣಿ ಏರ್ಪಡುತ್ತಿದೆ.ಅರೆಬರೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಿ ಜಾತ್ರೆಗೆ ಸೇರುವಂತೆ ಜನ ಜಮಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಒಂದೇ ಬಾರಿ ಅದಷ್ಟೂ ವಾಹನಗಳು ರಸ್ತೆಗಿಳಿಯುತ್ತಿದ್ದು ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅವಕಾಶ ಕೊಟ್ಟಿರುವ ನಾಲ್ಕೇ ಗಂಟೆಗಳಲ್ಲಿ ವಾರಕ್ಕಾಗುವಷ್ಟು ಕರೊನಾ ಹರಡಿಸಲಾಗುತ್ತಿದೆ. ರೋಗಲಕ್ಷಣವಿಲ್ಲದ ಸೋಂಕಿತರು, ಹೋಂಐಸೋಲೇಷನ್ ನಲ್ಲಿರುವ ಸೋಂಕಿತರರು ಈ ಜನಜಂಗುಳಿಯಲ್ಲಿ ಜಮಾವಣೆಯಾಗುತ್ತಿದ್ದು ಕರೊನಾ ಉಲ್ಭಣಕ್ಕೆ ಕಾರಣವಾಗುತ್ತಿದ್ದಾರೆ. ಇದು ಪ್ರತಿ ವಾರಾಂತ್ಯದಲ್ಲಿ ಕಂಡುಬರುವ ದೃಶ್ಯವಾಗಿದೆ. ಇದೇ ಪುನಾವರ್ತನೆಯಾದರೆ ಎಷ್ಟೇ ದಿನ ಲಾಕ್ ಡೌನ್ ಮುಂದುವರೆಸಿದರೂ ಕರೊನಾ ಕಂಟ್ರೋಲಿಗೆ ಬರುವುದು ಅನುಮಾನ. ಶುದ್ಧ ಅನುಮಾನ.ಪೊಲೀಸರ ಸುಳಿವಿಲ್ಲ:ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿಕೊಂಡು ತಪಾಸಣೆ ನಡೆಸಿ ವಾಹನ ಜಪ್ತಿ ಮಾಡುವುದರಲ್ಲೇ ಬಿಜಿಯಾಗಿರುವ ಪೊಲೀಸರು ಇಂಥ ಜಾಗಗಳತ್ತ ಸುಳಿಯುತ್ತಿಲ್ಲ.‌ ಬಿಬಿಎಂಪಿಗೆ ಹೊಸದಾಗಿ ಸೇರಿದ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಕರೊನಾ ಉಲ್ಭಣಕ್ಕೆ ಇದೇ ಪ್ರಮುಖ ಕಾರಣವಾಗುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ.
ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ
ನಬಾರ್ಡ್​ನಲ್ಲಿ ಕನ್ಸಲ್ಟಂಟ್​ಗಳ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ: 1.50 ಲಕ್ಷ ರೂ.ವರೆಗೆ ಸಂಬಳ
ನಿಮಗೂ ಮಕ್ಕಳಿದ್ದರೆ ಅವನ ದೇಹ ಬಯಸ್ತಿದ್ರಾ? ತನ್ನ ಹೆಂಡ್ತಿ, ಮಕ್ಕಳನ್ನೇ ಪಾಲಿಸದವ ನಿಮಗೇನು ಮಾಡಿಯಾನು?
ದೇಹ ಒಪ್ಪಿಸಿದ್ದೇನೆ, ಕಿಡ್ನಿ ಮಾರಿ 20 ಲಕ್ಷ ರೂ ಕೊಡುವೆ ಎಂದ್ರೂ ಕೇಳದೇ ಬೇರೆ ಮದ್ವೆಯಾಗ್ತಿದ್ದಾನೆ- ಏನು ಮಾಡಲಿ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
