ಬೆಂಗಳೂರು:ನಗರದ ಸಿ.ವಿ.ರಾಮನ್​ ಆಸ್ಪತ್ರೆಯಲ್ಲಿ ನರ್ಸ್​ ಆಗಿರುವ ನವೀನ್​ ರಾಜ್​ ಅವರಿಗೆ ಈ ಬಾರಿಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯ ಲಭಿಸಿದೆ. ಇದಕ್ಕೆ ಕಾರಣ ಇವರು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್​ ಮಾಡಿ ಕರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು.
2020ರಲ್ಲಿ ನವೀನ್ ರಾಜ್ ಅವರ ಮದುವೆಗೆ ಸಿದ್ಧತೆ ನಡೆದಿತ್ತು. ಮನೆಯಲ್ಲಿ ಎಲ್ಲರೂ ಸಂಭ್ರಮದಲ್ಲಿ ಇದ್ದರು. ಆದರೆ ಈ ಸಮಯ ಕರೊನಾ ಬೆಚ್ಚಿಬೀಳಿಸಿದ್ದ ಸಮಯ. ಎಲ್ಲೆಲ್ಲೂ ಹೆಣಗಳ ರಾಶಿ. ವೈದ್ಯರು ಮತ್ತು ನರ್ಸ್​ಗಳ ಜೀವನವೂ ಅಕ್ಷರಶಃ ನರಕಮಯವಾಗಿತ್ತು. ಆದ್ದರಿಂದ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರ ನರಳಾಡುತ್ತಿರುವಾಗಿ ತಾವು ಮದುವೆಯ ಸಂಭ್ರಮದಲ್ಲಿ ಇರುವುದು ಸರಿಯಲ್ಲ ಎಂದುಕೊಂಡ ನವೀನ್​, ಮದುವೆಯನ್ನೇ ಮುಂದೂಡಿದ್ದರು. ನಂತರ ಮದುವೆ ಕ್ಯಾನ್ಸಲ್​ ಆಗಿದ್ದರಿಂದ ಸದ್ಯ ಸಿಂಗಲ್​ ಆಗಿಯೇ ಉಳಿದಿದ್ದಾರೆ. ಕರೊನಾ ಸಮಯದಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡು ರೋಗಿಗಳ ಆರೈಕೆ ಮಾಡಿದ್ದು ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ತಂದುಕೊಟ್ಟಿದೆ.
ನಿನ್ನೆ (ಗುರುವಾರ) ನಡೆದ ಸಮಾರಂಭದಲ್ಲಿ 12 ಜನರಿಗೆ ಈ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ ನವೀನ್​ ಕೂಡ ಒಬ್ಬರು. ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಕಂಡ ಭಯಾನಕ ದೃಶ್ಯಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಮಾಡಿದ ಸೇವೆಗಳ ಕುರಿತು ನವೀನ್​ ಮನಮುಟ್ಟುವಂತೆ ವಿವರಿಸಿದರು.
ಆ ಸಮಯದಲ್ಲಿ ನನ್ನ ಪಾಲಕರೂ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿನ ಜವಾಜಬ್ದಾರಿ ಮತ್ತು ಅವರನ್ನು ನೋಡಿಕೊಳ್ಳುವ ಉದ್ದೇಶದಿಂದ ಮದುವೆ ಮಾಡಿಕೊಳ್ಳುವ ನಿರ್ಧಾರ ಮುಂದೂಡಿದೆ. ಕರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿದೆ ಎನ್ನುವ ನವೀನ್​, ಇದೀಗ ತಮಗಾಗಿ ಅಪ್ಪ-ಅಮ್ಮ ವಧು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನಾಚಿಕೆಯಿಂದ ಹೇಳುತ್ತಾರೆ.
ಇದೇ ಸಂದರ್ಭದಲ್ಲಿ ಅವರು ಎರಡನೇ ಅಲೆಯ ಭೀಕರತೆ ಕುರಿತು ವಿವರಿಸಿದರು. ಅದು ಇಂದಿಗೂ ನನ್ನನ್ನೂ ಕಾಡುತ್ತಿದೆ. 26 ವರ್ಷದ ಯುವಕನೋರ್ವ ನನ್ನ ಹೆಗಲ ಮೇಲೆಯೇ ಕುಸಿದು ಬಿದ್ದ. ಆ ಸಮಯದಲ್ಲಿ ದಿನಕ್ಕೆ 24 ಗಂಟೆ ಕೆಲಸ ಮಾಡುತ್ತಿದ್ದೆ. ಎರಡು ದಿನಗಳಿಗೊಮ್ಮೆ ಕೇವಲ 4 ಗಂಟೆ ಮಾತ್ರ ರೆಸ್ಟ್ ಮಾಡಲಾಗುತ್ತಿತ್ತು ಎಂದು ಹೇಳಿದರು. ನಾನು ಎಂದಿಗೂ ನನ್ನ ಫೋನ್ ಸ್ವಿಚ್ಛ್ ಆಫ್ ಮಾಡಿಲ್ಲ. ನನ್ನ ಫೋನ್ ಸ್ವಿಚ್ಛ್ ಆಫ್ ಆಗದರಲಿ ಎಂದು ಸೂಪರಿಂಟೆಂಡೆಂಟ್ ಪವರ್ ಬ್ಯಾಂಕ್ ನೀಡಿದ್ದನ್ನು ನವೀನ್ ಹೇಳಿ ತಮ್ಮ ಕಾರ್ಯವೈಖರಿ ಬಗ್ಗೆ ವಿವರಿಸಿದರು.
ನೀನು ರೌಡಿ, ಮದ್ವೆಯಾಗಲ್ಲ ಎಂದಳು ಯುವತಿ: ಜೈಲಿನಿಂದ ಬಂದವನೇ ಕೊಲೆ ಮಾಡಿ ಎಸ್ಕೇಪ್​!

ಮುತ್ತಾತ, ತಾತ, ಅಪ್ಪ, ಮಕ್ಕಳು, ಮೊಮ್ಮಕ್ಕಳು… ಎಲ್ಲ ಸತ್ತರೂ ಕೋರ್ಟ್​ನಲ್ಲಿ ಮುಗಿದಿಲ್ಲ ಈ ಕೇಸು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + six =
Remember me
