ಬೆಂಗಳೂರು:ರಾಜ್ಯದಲ್ಲಿ 20-30 ಹಾಸಿಗೆಗಳ ಸಾಮರ್ಥ್ಯದ ನರ್ಸಿಂಗ್ ಹೋಮ್ ಗಳು ಹಣದಾಸೆಗಾಗಿ ಕರೊನಾ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತಿಲ್ಲ ಈ ಕುರಿತು ಕಾನೂನು ಜಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಕರೊನಾ ಸೋಂಕಿತರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಜೀವ ರಕ್ಷಣೆ ಉದ್ದೇಶದಿಂದ ಈ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಹೇಳಿದರು.
ದೊಡ್ಡ ಆಸ್ಪತ್ರೆಗಳು ತಮ್ಮದೇ ಆದ ಆಮ್ಲಜನಕ ಘಟಕಗಳನ್ನು ಹೊಂದಿರುತ್ತವೆ. ಸಣ್ಣ ಆಸ್ಪತ್ರೆಗಳಿಗೆ ಇದು‌ ಸಾಧ್ಯವಾಗದು. ಅಲ್ಲದೆ ಪ್ರತಿದಿನ 3 ಸಿಲಿಂಡರ್ ಬೇಕಾಗಲಿದ್ದು, ಸಕಾಲಕ್ಕೆ ಲಭಿಸದಿದ್ದರೆ‌ ಕಷ್ಟ. ಈ ಹಿನ್ನೆಲೆಯಲ್ಲಿ ಕರೊನಾ ಸೋಂಕಿತರು ಹೊರತುಪಡಿಸಿ ಉಳಿದ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವುದು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗುವುದು ಎಂದರು.
ಬೀದರ್ ಬಿಮ್ಸ್ ವಿಶೇಷ ಪ್ರಕರಣ. ಅಲ್ಲಿ ಈಗಾಗಲೇ ಅಧಿಕ ಸಂಖ್ಯೆಯ ಸೋಂಕಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಿದ್ದು, 1-2 ದಿನಗಳಲ್ಲಿ ಸ್ವತಃ ಭೇಟಿ ನೀಡುವೆ ಎಂದು ಸುಧಾಕರ್ ತಿಳಿಸಿದರು.
ಭೀಕರವಾಗುತ್ತಿದೆ ಕರೊನಾ ಎರಡನೆಯ ಅಲೆ: ಚಿತ್ರರಂಗದ ಇನ್ನೋರ್ವ ತಾರೆ ವೈರಸ್‌ಗೆ ಬಲಿ

ಸಿಡಿ ಕೇಸ್‌ ನಂತರ ತೆರೆಮರೆಗೆ ಸರಿದಿದ್ದ ಜಾರಕಿಹೊಳಿ ಮಾಡಿದರು ಟ್ವೀಟ್‌- ಸಂತಸದಲ್ಲಿ ತೇಲಾಡಿದ ಅಭಿಮಾನಿಗಳು

ಮಗ ಸುಂದರ ಆಗಿರೋದೇ ತಪ್ಪಾಗಿಬಿಟ್ಟಿದೆ ಮೇಡಂ… ಅಹಂ ಮಿತಿಮೀರಿದೆ- ಸರಿ ದಾರಿಗೆ ತರೋದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
