ಹಾವೇರಿ:ಶಾಸಕ ಓಲೇಕಾರ್​ಗೆ ಸಚಿವಸ್ಥಾನ ಕೊಡಲೇಬೇಕು, ಇಲ್ಲವಾದರೆ ಸಾಯುತ್ತೇನೆ ಎಂದ ಅಭಿಮಾನಿಗಳಿಬ್ಬರು ವಾಟರ್ ಟ್ಯಾಂಕ್ ಮೇಲೆ ಏರಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ಈ ಘಟನೆ ಸಂಭವಿಸಿದೆ. ಚಂದ್ರಶೇಖರ ಹಳ್ಳಿಕೇರಿ ಹಾಗೂ ಭೀಮನಗೌಡ ಪಾಟೀಲ್ ಎಂಬ ಅಭಿಮಾನಿಗಳು ಟ್ಯಾಂಕ್​ ಏರಿ ತುತ್ತ ತುದಿಯಲ್ಲಿ ಹೋಗಿದ್ದಾರೆ. ಇವರಿಬ್ಬರೂ ಹತ್ತಿಮತ್ತೂರು ಗ್ರಾಮದವರಾಗಿದ್ದಾರೆ.ಪಕ್ಷದ ಬಾವುಟ ಮೈಗೆ ಸುತ್ತಿಕೊಂಡು ಟ್ಯಾಂಕ್ ಹತ್ತಿರುವ ಇಬ್ಬರೂ, ನೆಹರು ಓಲೇಕಾರ ಪರ ಘೋಷಣೆ ಕೂಗುತ್ತ ಟ್ಯಾಂಕ್​ ಏರಿದರು. ನಂತರ ಸಚಿವಸ್ಥಾನ ಸಿಗುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಪೊಲೀಸರಿಂದ ಪ್ರತಿಭಟನಾ ನಿರತ ಯುವಕರ ಮನವನ್ನು ಒಲಿಸುವಷ್ಟರಲ್ಲಿ ಸಾಕೋ ಸಾಕಾಯಿತು.ನಿಮ್ಮ ಆಗ್ರಹ ಸರ್ಕಾರದ ಗಮನಕ್ಕೆ ತರುತ್ತೇವೆ. ದಯವಿಟ್ಟು ಕೆಳಗಿಳಿದು ಬನ್ನಿ ಎಂದು ಪಿ.ಎಸ್ ಐ ಹೊಸಮನಿ ಮನವಿ ಮಾಡಿದರು. ಆದರೆ ಯುವಕರು ಜಿಲ್ಲಾಧಿಕಾರಿಗಳು ಇಲ್ಲಿಗೆ ಬರಲಿ ಎಂದು ಆಗ್ರಹಿಸಿದರು. ನಂತರ ಸ್ಥಳಕ್ಕೆ ಆಂಬುಲೆನ್ಸ್​ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕರೆಸಲಾಯಿತು.
ನಂತರ ತಹಶೀಲ್ದಾರ್​ ಸ್ಥಳಕ್ಕೆ ಆಗಮಿಸಿ ನಿಮ್ಮ ಮನವಿಯನ್ನು ಕೂಡಲೆ ಮುಖ್ಯಮಂತ್ರಿಗಳಿಗೆ ತಿಳಿಸುತ್ತೇವೆ. ಕೆಳಗೆ ಇಳಿದು ಬನ್ನಿ ಎಂದರು. ನಂತರ ಓಲೇಕಾರ್​ ಭಾವಚಿತ್ರ ಹಿಡಿದು ಇಬ್ಬರು ಯುವಕರು ಕೆಳಕ್ಕೆ ಬಂದರು.
ಇಲ್ಲಿದೆ ನೋಡಿ ವಿಡಿಯೋ:
ಶಾಸಕ ಒಲೇಕಾರ್​ಗೆ ಸಚಿವಸ್ಥಾನ ಕೊಡಲೇಬೇಕು, ಇಲ್ಲವಾದರೆ ಸಾಯುತ್ತೇನೆ ಎಂದ ಅಭಿಮಾನಿಗಳಿಬ್ಬರು ವಾಟರ್ ಟ್ಯಾಂಕ್ ಮೇಲೆ ಏರಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.pic.twitter.com/QlNqai8ElY— Vijayavani (@VVani4U)August 3, 2021
ಶಾಸಕ ಒಲೇಕಾರ್​ಗೆ ಸಚಿವಸ್ಥಾನ ಕೊಡಲೇಬೇಕು, ಇಲ್ಲವಾದರೆ ಸಾಯುತ್ತೇನೆ ಎಂದ ಅಭಿಮಾನಿಗಳಿಬ್ಬರು ವಾಟರ್ ಟ್ಯಾಂಕ್ ಮೇಲೆ ಏರಿ ಕೆಲ ಸಮಯ ಆತಂಕ ಸೃಷ್ಟಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.pic.twitter.com/QlNqai8ElY
ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತಲೇ ಶುರುವಾಯ್ತು ಸಂಕಟ: ಬಿಎಸ್​ವೈಗೆ ಹೈಕೋರ್ಟ್​ ನೋಟಿಸ್​
ಸ್ಟ್ರಿಕ್ಟ್​ ನೈಟ್​ ಕರ್ಫ್ಯೂ ಜಾರಿ: ರಸ್ತೆಗಿಳಿಯೋ ಮುನ್ನ ಎಚ್ಚರ- ನಿಯಮಗಳೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
