ಬೆಂಗಳೂರು:ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಿದ್ದ 1.92 ಕೋಟಿ ರೂ. ಅನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವ ನೌಕರನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕೋರಮಂಗಲದ ಕ್ಯಾಷ್ ಫ್ರೀ ಪ್ರೈ.ಲಿ. ಕಂಪನಿ ನೌಕರ ವಿವೇಕ್ ಸಿಕ್ವೀರ್ ವಂಚನೆ ಮಾಡಿದವ. ಈತನ ವಿರುದ್ಧ ಕಂಪನಿ ನಿರ್ದೇಶಕ ಶಿಶಿರ ಶಾಂಡಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಕೋರಮಂಗಲ ಪೊಲೀಸರು ತಿಳಿಸಿದ್ದಾರೆ.
2019ರ ಜೂನ್ 24ರಲ್ಲಿ ಕ್ಯಾಷ್ ಫ್ರೀ ಪ್ರೈ.ಲಿ.ಕಂಪನಿ ಕೆಲಸಕ್ಕೆ ಸೇರಿದ್ದ ವಿವೇಕ್ ಗೆ ಹಣಕಾಸಿನ ವಿಭಾಗದ ಜವಾಬ್ದಾರಿ ನೀಡಲಾಗಿತ್ತು. ಇದರ ನಡುವೆ 2020ರ ಜೂನ್ ನಿಂದ 2021ರ ಏಪ್ರಿಲ್ ಒಳಗೆ ಹಣ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಿದ್ದ ಹಣವನ್ನು ತನ್ನ ಬ್ಯಾಂಕ್ ಮತ್ತು ಅನಾಮಧೇಯ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡು ಕಂಪನಿಗೆ ಮೋಸ ಮಾಡಿದ್ದಾರೆ.
ಇತ್ತೀಚಿಗೆ ನಡೆದ ಲೆಕ್ಕ ಪರಿಶೋಧನೆ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಆಂತರಿಕ ವಿಚಾರಣೆ ನಡೆಸಿದಾಗ ಹಂತ‌ಹಂತವಾಗಿ ಹಣವನ್ನು ಕದ್ದು ಆನ್ ಲೈನ್ ‌ಬೆಟ್ಟಿ.ಗ್ ನಲ್ಲಿ ತೊಡಗಿಸಿ ನಷ್ಟ ಉಂಟಾಗಿದೆ ಎಂದು ವಿವೇಕ್ ಒಪ್ಪಿಕೊಂಡಿದ್ದಾರೆ. ಕಂಪನಿ ‌ಹಣ ದುರುಪಯೋಗ ಪಡಿಸಿಕೊಂಡ ಆರೋಪಿ ವಿರುದ್ಧ ‌ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದು ಪ್ರೀತಿಯಲ್ಲಮ್ಮಾ… ಏಳು ವರ್ಷ ದೇಹ ಒಪ್ಪಿಸುವಾಗ ಎಲ್ಲೋಗಿತ್ತು ನಿನ್ನ ಬುದ್ಧಿ?

ಇಎಸ್​ಐನಲ್ಲಿ 24 ಬೋಧಕ ಹುದ್ದೆಗಳಿಗೆ ಆಹ್ವಾನ- 1.77 ಲಕ್ಷ ರೂ.ವರೆಗೆ ಸಂಬಳ

ಹೆಂಡ್ತಿ ಪ್ರಚೋದನೆ ಮಾಡಿದ್ರೆ ನಾನೇನ್​ ಮಾಡ್ಲಿ ಸರ್​? ನಡು ರಸ್ತೆಯಲ್ಲಿ ಪೊಲೀಸರ ಮುಂದೆ ಪತಿಯ ಅಳಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − ten =
Remember me
